ಪಂಚರತ್ನ ಯೋಜನೆಯೇ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ: ಮಾಲೂರು ಅಭ್ಯರ್ಥಿ ಜಿ.ರಾಮೇಗೌಡ

By Govindaraj S  |  First Published Apr 17, 2023, 11:30 PM IST

ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಮಾಲೂರು ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಜಿ.ರಾಮೇಗೌಡ ತಿಳಿಸಿದರು. 


ಕೋಲಾರ (ಏ.17): ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಮಾಲೂರು ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಜಿ.ರಾಮೇಗೌಡ ತಿಳಿಸಿದರು. 

ಅವರು ಇಂದು (ಏ.17) ತಮ್ಮ ನಾಮಪತ್ರವನ್ನು ಪಕ್ಷದ ಅಧೀಕೃತ ಬಿ ಫಾರಂನೊಂದಿಗೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಾನು ಇಂಜಿನಿಯರ್ ಆಗಿದ್ದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷದ ಪ್ರಣಾಳಿಕೆಯೊಂದಿಗೆ ನನದೇ ಆದ ಅಜೆಂಡಾ ಹೊಂದಿದ್ದು,ನಾನು ಕಳೆದ 20 ವರ್ಷಗಳಿಂದ ಪ್ರತಿ ದಿನ ಜನಸೇವೆ ಮಾಡುವ ಮೂಲಕ ಮನೆ ಮನೆಗೆ ನನ್ನದೇ ಆದ ಸೇವೆ ಮಾಡಿದ್ದೇನೆ.ಕ್ಷೇತ್ರದ ಜನತೆಯ ಸೇವೆಯನ್ನು ರಾಜಕೀಯವಾಗಿ ಇನ್ನೂ ಹೆಚ್ಚಿಗೆ ಮಾಡಲು ಶಾಸಕನ್ನಾಗಿ ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ಇದೆಯೆಂದು ಹೇಳಿದರು. 

Tap to resize

Latest Videos

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್

ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಈಗಾಗಲೇ ಕ್ಷೇತ್ರದ ಸುಮಾರು 50 ಸಾವಿರ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಿ ನನ್ನ ಮುಂದಿ ಯೋಜನೆಗಳ ಹಾಗೂ ಪಕ್ಷದ ಪ್ರಣಾಳಿಕೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದೇನೆ ಹಾಗೂ ಅವರ ಸಮಸ್ಯೆಗಳ ಬಗ್ಗೆ ಆಲಿಸಿ ಪಟ್ಟಿ ಮಾಡಿ ಕೊಂಡಿದ್ದೇವೆ. ಜನತೆ ಅಧಿಕಾರ ನೀಡಿದ ದಿನದಿಂದಲೇ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆ ಬಗೆಹರಿಸುವ ಬಗ್ಗೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು. ಪ್ರಸ್ತುತ ಶಾಸಕರ ಬೇಜವಾಬ್ದಾರಿಯಿಂದ ಕ್ಷೇತ್ರದ ಅಭಿವೃದ್ಧಿ 20 ವರ್ಷ ಹಿಂದಕ್ಕೆ ಹೋಗಿದ್ದು, ಕುಮಾರಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿ ಆಗೇ ಆಗುತ್ತಾರೆ.

ಕುಮಾರಸ್ವಾಮಿ ಮುಖ್ಯ ಮಂತ್ರಿ ಆದ ಮೇಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕೋವಿಡ್ ಸಮಯದಲ್ಲಿ ನಾವು ಮಾಡಿರುವ ಸೇವೆ ಜನತೆಗೆ ತಿಳಿದಿದೆ ಹಾಗೆಯೇ ನಾನು ಒಬ್ಬ ವಿದ್ಯಾವಂತನಾಗಿ ತಾವು ವಿದ್ಯಾಭ್ಯಾಸಕ್ಕೆ ಎಷ್ಟು ಒತ್ತು ನೀಡುತ್ತೇನೆ.ಕಷ್ಟ ಎಂದು ಬಂದವರಿಗೆ ನನ್ನ ಕೈಲಾದ ಸಹಾಯ ಸಹಕಾರ ನೀಡಿರುವ ಬಗ್ಗೆ ಕ್ಷೇತ್ರದ ಮತದಾರರಿಗೆ ಅರಿವು ಇರುವುದರಿಂದ ನನಗೂ ಒಂದು ಅವಕಾಶ ನೀಡುತ್ತಾರೆ ಎಂಬ ನಂಬಿಕೆ ಭರವಸೆ ಇದೆಯೆಂದು ತಿಳಿಸಿದರು. ಚುನಾವಣೆಗಾಗಿ ನಾನು ಜನಸೇವೆ ಮಾಡಲು ಬಂದವನಲ್ಲ, ಅಥವ ಚುನಾವಣೆ ಸಮಯದಲ್ಲಿ ನಾನು ಜನಸೇವೆ ಪ್ರಾರಂಭ ಮಾಡಿದವನಲ್ಲ.

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ನಾನು ಜನಸೇವೆ ಮಾಡುತ್ತೇನೆ. ಈ ಸಂಧರ್ಭದಲ್ಲಿ ಮಾತನಾಡಿದ ಪತ್ನಿ ರಶ್ಮಿ ರಾಮೇಗೌಡ, ಸ್ಥಳೀಯರಾಗಿ ಕಳೆದ 20 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿರುವ ನಿಮ್ಮ ಮನೆ ಮಗನಂತಿರುವ ನಮ್ಮಗಳ ಸೇವಕ ನಮ್ಮ ಯಜಮಾನರಾದ ರಾಮೇಗೌಡರಿಗೆ ಒಂದು ಅವಕಾಶ ನೀಡಿ ನಿಮ್ಮಗಳ ಸೇವೆಗೆ ಅನುವು ಮಾಡಿ ಕೊಡಬೇಕೆಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!