ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು 4 ಕೋಟಿಯ ಒಡೆಯ. ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅವರು ಇಂದು ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಮ್ಮ ಸ್ಥಿರ, ಚರ ಆಸ್ತಿ ಹಾಗೂ ಸಾಲದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.17): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು 4 ಕೋಟಿಯ ಒಡೆಯ. ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅವರು ಇಂದು ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಮ್ಮ ಸ್ಥಿರ, ಚರ ಆಸ್ತಿ ಹಾಗೂ ಸಾಲದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
undefined
ಸಿ.ಟಿ.ರವಿ ಅವರ ಕೈಯಲ್ಲಿ ಇರೋದು 86 ಸಾವಿರದ 431 ರುಪಾಯಿ ನಗದು, ಪತ್ನಿ ಪಲ್ಲವಿ ಅವರ ಬಳಿ 7 ಲಕ್ಷದ 89 ಸಾವಿರದ 257 ರುಪಾಯಿ ಇದೆ. ಸಿ.ಟಿ.ರವಿ ಹೆಸರಿನಲ್ಲಿರುವ ಸ್ಥಿರಾಸ್ತಿ 1 ಕೋಟಿ 61 ಲಕ್ಷದ 51ಸಾವಿರದ 302ರೂ ., ಚರಾಸ್ತಿ 2 ಕೋಟಿ 39 ಲಕ್ಷದ 87 ಸಾವಿರದ 384 ರು, ಪತ್ನಿ ಪಲ್ಲವಿ ಅವರಿಗೆ ಸೇರಿರುವ ಸ್ಥಿರಾಸ್ತಿಯ ಮೌಲ್ಯ 96 ಲಕ್ಷದ 27 ಸಾವಿರದ 829 ರೂ ಚರಾಸ್ತಿಯ ಮೌಲ್ಯ 84 ಲಕ್ಷದ 22 ಸಾವಿರದ 59 ರೂ .ಸಿ.ಟಿ. ರವಿಗಿಂತ ಅವರ ಪತ್ನಿ ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳಲ್ಲಿ ಹೆಚ್ಚು ಸಾಲ ಮಾಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?
ಸಿ.ಟಿ. ರವಿ 84 ಲಕ್ಷದ 57 ಸಾವಿರದ 504 ರೂ ಸಾಲ, ಪತ್ನಿ ಪಲ್ಲವಿ ರವಿ ಹೆಸರಿನಲ್ಲಿ 2 ಕೋಟಿ 16 ಲಕ್ಷದ 99 ಸಾವಿರದ 598 ಸಾಲ ಪಡೆದುಕೊಂಡಿದ್ದಾರೆ. ಸಿ.ಟಿ. ರವಿ ಬಳಿ 9 ಲಕ್ಷದ 55 ರು. ಮೌಲ್ಯದ 2005 ಮಾಡಲ್‌ನ ಸ್ಕಾರ್ಪಿಯೋ ಒಂದೇ ಕಾರ್ ಇದೆ. ಅವರ ಬಳಿ 65 ಸಾವಿರದ 550 ಮೌಲ್ಯದ ಪಿಸ್ತೂಲ್ ಇದೆ. ಸಿ.ಟಿ. ರವಿ ಹೆಸರಿನಲ್ಲಿ ಅರೆನೂರು ಗ್ರಾಮದಲ್ಲಿ 7 ಎಕರೆ, ಪತ್ನಿ ಹೆಸರಿನಲ್ಲಿ ಹುಳಿಯಾರ ಹಳ್ಳಿಯಲ್ಲಿ 1 ಎಕರೆ, 35 ಗುಂಟೆ ಜಮೀನು ಇದೆ. ಪತ್ನಿ ಹೆಸರಿನ ಜಮೀನು ಅನ್ಯಕ್ರಾಂತ ಮಾಡಿಸಲಾಗಿದೆ.
ಶಾಸಕ ಡಿ.ಎಸ್.ಸುರೇಶ್ ಆಸ್ತಿ ವಿವರ: ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಹೆಸರಿನಲ್ಲಿ 38 ಎಕರೆ ಜಮೀನು ಸೇರಿದಂತೆ ಒಟ್ಟು 23 ಕೋಟಿ ರುಪಾಯಿ ಆಸ್ತಿ ಇದೆ. 2.44 ಕೋಟಿ ರುಪಾಯಿ ಸಾಲವನ್ನು ಬ್ಯಾಂಕ್‌ಗಳಲ್ಲಿ ಪಡೆದಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನೀಡಿರುವ ಪ್ರಮಾಣ ಪತ್ರದಲ್ಲಿ ಅವರು ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಸುರೇಶ್ ಬಳಿ 3,01,41,484 ಪತ್ನಿ ಬಳಿ 1,23,52,719 ಚರಾಸ್ತಿ ಇದೆ.20,07,03,502, ಪತ್ನಿ ಬಳಿ 4,16,05.029 ಸ್ಥಿರಾಸ್ತಿ ಇದೆ.
ಚಾಮರಾಜನಗರ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ
ಸುರೇಶ್ ಬಳಿ ಟೊಯೋಟಾ ಪಾರ್ಚುನರ್, ಕಿಯಾ ಹಾಗೂ ಮಾರುತಿ ಕಾರ್‌ಗಳು ಇವೆ.ಸುರೇಶ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 2,44,47,274 ರುಪಾಯಿ ಸಾಲ ಇದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.