ಮುಂಬರುವ ಮೇ.10ರಂದು ನಡೆಯುವ ವಿಧಾನಸಭಾ ಚುನವಣೆಗೆ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಸಿ.ಟಿ.ರವಿ ಅವರು ಇಂದು ಸಹಸ್ರಾರು ಬೆಂಬಲಿಗರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.17): ಮುಂಬರುವ ಮೇ.10ರಂದು ನಡೆಯುವ ವಿಧಾನಸಭಾ ಚುನವಣೆಗೆ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಸಿ.ಟಿ.ರವಿ ಅವರು ಇಂದು ಸಹಸ್ರಾರು ಬೆಂಬಲಿಗರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.ಬೆಳಗ್ಗೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ತಮ್ಮ ನಿವಾಸದಿಂದ ಕಾಮಧೇನು ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ,ಹೋಮ, ಹವನದಲ್ಲಿ ಭಾಗವಹಿಸಿದರು. ನಂತರ ತಾಲ್ಲೂಕು ಕಚೇರಿ ವರೆಗೆ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲೇ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ರಾಜ್ಯ ಸಫಾಯಿ ಕರ್ಮಚಾರ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಜೊತೆಗಿದ್ದರು.
undefined
ಸಿ.ಟಿ ರವಿ ಪರವಾಗಿ ಘೋಷಣೆ: ಕ್ಷೇತ್ರದ ಎಲ್ಲಾ ಹೋಬಳಿಗಳಿಂದಲೂ ಆಗಮಿಸಿದ್ದ ಸಹಸ್ರಾರು ಮುಖಂಡರು, ಕಾರ್ಯಕರ್ತರು ಸಿ.ಟಿ.ರವಿ ಅವರ ಪರವಾಗಿ ಘೋಷಣೆ ಹಾಕಿದರು. ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿ.ಟಿ.ರವಿ ಎಂದು ಕೂಗಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ, ಕುಣಿದು ಸಂಭ್ರಮಿಸಿದರು. ಇನ್ನೂ ಕೆಲವರು ಸಿ.ಟಿ.ರವಿ ಅವರ ಗೆಲುವಿಗೆ ಪ್ರಾರ್ಥಿಸಿ ತಮ್ಮ ಊರುಗಳ ಗ್ರಾಮದೇವರಿಗೆ ಪೂಜೆ ಸಲ್ಲಿಸಿ ತಂದಿದ್ದ ಪ್ರಸಾದವನ್ನು ರವಿ ಅವರಿಗೆ ತಲುಪಿಸಿದರು. ಮಾರ್ಗದುದ್ದಕ್ಕೂ ಹಲವು ಮಂದಿ ಸಿ.ಟಿ.ರವಿ ಅವರಿಗೆ ಹಾರ ಹಾಕಿ ಶುಭ ಕೋರಿದರು. ಇದೇ ವೇಳೆ ಶಾಸಕರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?
ಆಸ್ಪತ್ರೆಯಿಂದ ನಿನ್ನೆ ಸಂಜೆ ಮನೆಗೆ: ಕಿಡ್ನಿ ಸ್ಟೋನ್ಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಿ.ಟಿ.ರವಿ ನಿನ್ನೆ ಸಂಜೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ ತಮ್ಮ ಸ್ವಗ್ರಾಮ ಚಿಕ್ಕಮಾಗರವಳ್ಳಿಗೆ ತೆರಳಿ ಗ್ರಾಮದೇವತೆಗೆ ಪೂಜೆ ಸಲ್ಲಿಸಿದರು ನಂತರ ತಮ್ಮ ತಾಯಿ ಪಾರ್ವತಮ್ಮ ಅವರಿಂದ ಆಶೀರ್ವಾದ ಪಡೆದು ನಂತರ ಚಿಕ್ಕಮಗಳೂರಿಗೆ ಆಗಮಿಸಿದರು.
ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ: ವೀರೇಂದ್ರ ಪಾಟೀಲ್ ಬಳಿಕ ಯಾವ ವೀರಶೈವ ಮುಖಂಡರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ, ಹಾಗಾದ್ರೆ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಕಾಂಗ್ರೆಸ್ ಅವರಿಗೆ ಸಾಮರ್ಥ್ಯ ಇದ್ರೆ ವೀರಶೈವ ಮುಖಂಡರನ್ನ ಸಿಎಂ ಎಂದು ಘೋಷಣೆ ಮಾಡಲಿ, ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಎಂದು ಘೋಷಣೆ ಮಾಡ್ತಾರಾ ಎಂದು ಪ್ರಶ್ನೆ ಮಾಡಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್
ಇನ್ನು ನಾನು ಕಾಯ್ತಿದ್ದೀನಿ ಶೆಟ್ಟರ್ ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ, ನಮ್ಮ ಗೆಳೆಯ, ಲಕ್ಷ್ಮಣ್ ಸವದಿ ಸಿಎಂ ಎಂದು ಘೋಷಣೆ ಮಾಡ್ತಾರಾ, ಕಾಯ್ತಿದ್ದೇವೆ.ಈಗ ಒಣ ಮಾತುಗಳಿಂದ ಏನೂ ಪ್ರಯೋಜನ ಆಗಲ್ಲ, ಬಿಜೆಪಿ ಹಿಂದುತ್ವದ ತತ್ವದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ, ದೇಶದ ಹಿತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ ಬೆಳವಣಿಗೆಯನ್ನ ಯಾರೂ ತಡೆಯಲು ಆಗಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.