ಒಳ್ಳೆಯ ಸರ್ಕಾರ ಸಹಿಸಲು ಬಿಜೆಪಿಗೆ ಆಗದೆ ಪಾದಯಾತ್ರೆ: ಸಚಿವ ಜಮೀರ್ ಅಹ್ಮದ್

By Kannadaprabha NewsFirst Published Aug 10, 2024, 5:24 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳ್ಳೆಯ ಆಡಳಿತ ಸಹಿಸಲು ಆಗದೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು. 

ಮೈಸೂರು (ಆ.10): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳ್ಳೆಯ ಆಡಳಿತ ಸಹಿಸಲು ಆಗದೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು. ಮೈಸೂರಿನ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಒಳ್ಳೆಯ ಸರ್ಕಾರ ಸಹಿಸಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಎಂಡಿಎ ವಿಚಾರ ತೆಗೆದುಕೊಂಡಿದ್ದಾರೆ ಎಂದು ಕುಟುಕಿದರು.

ಬಿಜೆಪಿ- ಜೆಡಿಎಸ್ ಅಧಿಕಾರದಲ್ಲಿ ಒಂದೇ ಒಂದು ಮನೆ ಕೊಡಲು ಆಗಿಲ್ಲ. ಏಕೆ ಸಾಧ್ಯವಾಗಿಲ್ಲ? ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. 2013- 2018 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1,00,366 ಮನೆ ಕೊಡಲಾಗಿದೆ. ಆದರೆ, ಇವರ ಆಡಳಿತ ಅವಧಿಯಲ್ಲಿ 1840 ಮನೆಗಳನ್ನು ಮಾತ್ರ ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

Latest Videos

ಕಾಂಗ್ರೆಸ್ ವಿರುದ್ಧದ ಪಾದಯಾತ್ರೆ ಅಲ್ಲ, ಜೆಡಿಎಸ್ ಮುಗಿಸುವ ಪಾದಯಾತ್ರೆ: ಸಚಿವ ದಿನೇಶ್ ಗುಂಡೂರಾವ್

ಎಚ್ಡಿಕೆ ಫ್ಯಾಮಿಲಿ ಆಸ್ತಿಯಿಂದ 3 ಬಜೆಟ್‌ ಆಗುತ್ತೆ: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಆಸ್ತಿಯಿಂದ ಕರ್ನಾಟಕದಲ್ಲಿ 3 ಬಜೆಟ್ ಮಂಡಿಸಬಹುದು. ದಯಮಾಡಿ ನಿಮ್ಮ ಕುಟುಂಬದಿಂದ ಕನಿಷ್ಠ 2 ಬಜೆಟ್‌ಗೆ ಆಗುವಷ್ಟು ಹಣವನ್ನಾದರೂ ನೀಡಿ ಎಂದು ಸಚಿವ ಜಮೀರ್ ಅಹ್ಮದ್ ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಆಸ್ತಿಯ ಬಗ್ಗೆ ಮಾತನಾಡುವ ನೀವು ಮೊದಲು ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಹೇಳಿ. ನಿಮ್ಮ ವಿರುದ್ಧದ ಹಗರಣ ಹೊರ ತೆಗೆದರೆ ನೀವು ಜೈಲಿನಲ್ಲಿ ಇರಬೇಕಾಗುತ್ತದೆ ಎಂದರು.

ಕೇವಲ 37 ಸ್ಥಾನ ಪಡೆದ ಕುಮಾರಸ್ವಾಮಿಯನ್ನು ಸಿಎಂ ಮಾಡುವಾಗ ಅವರನ್ನು ನಂಬಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದೆ. ನನಗೆ ಕುಮಾರಸ್ವಾಮಿ ಅವರ ಎಲ್ಲ ವಿದ್ಯೆಗಳು ಗೊತ್ತಿತ್ತು. ಆದರೆ, ಅವರು ಪ್ಯಾಂಟ್ ಒಳಗೆ ಖಾಕಿ ಚೆಡ್ಡಿ ತೊಟ್ಟಿರುವುದು ಗೊತ್ತಿರಲಿಲ್ಲ. ಕುಮಾರಸ್ವಾಮಿ ರಾಮನಗರ ಜನ್ಮಕೊಟ್ಟ ಕ್ಷೇತ್ರ ಅನ್ನುತ್ತಾರೆ. ಆದರೆ, ರಾಮನಗರದಲ್ಲಿ ಕೇವಲ 330 ಮನೆ ಮಂಜೂರು ಮಾಡಿಸಿದ್ದಾರೆ. ನಮ್ಮ ಅವಧಿಯಲ್ಲಿ ಎಷ್ಟು ಮನೆ ನೀಡಲಾಗಿದೆ ಎಂದು ಚರ್ಚೆ ಮಾಡೋಣ ಬನ್ನಿ ಎಂದು ಆಹ್ವಾನಿಸಿದರು.

ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ. ಎಂಡಿಎ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ. ಆದರೂ ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ಸಿಎಂ ಪತ್ನಿ ಹಾಗೂ ಬಾಮೈದ ನಡುವೆ ವ್ಯವಹಾರ ಆಗಿದೆ. ಇದರಲ್ಲಿ ಸಿಎಂ ಪಾತ್ರವೇ ಇಲ್ಲ. ಆದರೂ ರಾಜ್ಯಪಾಲರು ನೋಟೀಸ್ ನೀಡಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡ ಇದೆ.
- ಎಂ.ಬಿ. ಪಾಟೀಲ್, ಬೃಹತ್ ಕೈಗಾರಿಕೆ ಸಚಿವರು

ಭ್ರಷ್ಟಾಚಾರ ಆರಂಭವಾಗಿದ್ದೇ ಜೆಡಿಎಸ್-ಬಿಜೆಪಿಯಿಂದ: ಸಚಿವ ಈಶ್ವರ ಖಂಡ್ರೆ

ಬಿಜೆಪಿ- ಜೆಡಿಎಸ್ ಮಾಡಿರುವ ಪಾಪಕ್ಕೆ ಒಂದು ಬಾರಿ ಪಾದಯಾತ್ರೆ ಮಾಡಿದರೆ ಸಾಲದು, ಇಡೀ ರಾಜ್ಯವನ್ನು ಐದು ಬಾರಿ ಪ್ರದಕ್ಷಿಣೆ ಹಾಕಬೇಕು. ಆದರೂ ಜನ ಅವರನ್ನು ನಂಬುವುದಿಲ್ಲ. ಸಿಎಂ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ.
- ಕೆ.ಜೆ.ಜಾರ್ಜ್, ಇಂಧನ ಸಚಿವರು

click me!