ಬಿಜೆಪಿ ವಿರುದ್ಧ 2024ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸುವ ತಮ್ಮ ಯತ್ನವನ್ನು ತೀವ್ರಗೊಳಿಸಿರುವ ವಿಪಕ್ಷಗಳು ಈ ಕುರಿತು ರಣನೀತಿ ರೂಪಿಸಲು ಜು.17 ಹಾಗೂ 18ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಗೆ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.
ನವದೆಹಲಿ: ಬಿಜೆಪಿ ವಿರುದ್ಧ 2024ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸುವ ತಮ್ಮ ಯತ್ನವನ್ನು ತೀವ್ರಗೊಳಿಸಿರುವ ವಿಪಕ್ಷಗಳು ಈ ಕುರಿತು ರಣನೀತಿ ರೂಪಿಸಲು ಜು.17 ಹಾಗೂ 18ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಗೆ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ವಿಶೇಷವೆಂದರೆ ಈ ಸಲದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪಾಲ್ಗೊಳ್ಳಲಿದ್ದಾರೆ. ಜೂ.23ರಂದು ಪಟನಾದಲ್ಲಿ ಮೊದಲ ಬಾರಿ ನಡೆದ ಸಭೆಯಲ್ಲಿ 15 ಪಕ್ಷಗಳು ಪಾಲ್ಗೊಂಡಿದ್ದವು. ಈ ಸಲ ಇನ್ನೂ 9 ಹೊಸ ಪಕ್ಷಗಳಿಗೆ ಆಹ್ವಾನ ರವಾನೆ ಆಗಿದ್ದು, 24 ಬಿಜೆಪಿಯೇತರ ಪಕ್ಷಗಳ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕಳೆದ ಸಲ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯ ನೇತೃತ್ವ ವಹಿಸಿದ್ದರು. ಈ ಸಲ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ವಹಿಸಿದ್ದು, ವಿಪಕ್ಷಗಳಿಗೆ ಆಹ್ವಾನ ರವಾನಿಸಿದ್ದಾರೆ. ಇನ್ನು ದಿಲ್ಲಿ ಸುಗ್ರೀವಾಜ್ಞೆ ವಿಷಯದಲ್ಲಿ ತಮ್ಮನ್ನು ಬೆಂಬಲಿಸದ ಕಾಂಗ್ರೆಸ್ ವಿರುದ್ಧ ಆಪ್ ಮುನಿಸಿಕೊಂಡಿದ್ದರೂ, ಆ ಪಕ್ಷಕ್ಕೆ ಆಹ್ವಾನ ಹೋಗಿದೆ. ಆದರೆ ಮುಂದಿನ ಸಭೆಗೆ ತಾವು ಹೋಗುವುದಿಲ್ಲ ಎಂದು ಆಪ್ ನಾಯಕರು ಜೂ.23ರಂದು ಹೇಳಿದ್ದರು. ಈಗ ಆಹ್ವಾನ ಬಂದ ನಂತರ ಅವರ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.
ಸೋನಿಯಾ ಬಂಗಲೆಯಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರಕ್ಕೆ ನಿರ್ಧರಿಸಿದ ರಾಹುಲ್!
ಸಭೆಯ ಅಜೆಂಡಾ:
ಸಭೆಯಲ್ಲಿ ಮೈತ್ರಿಕೂಟಕ್ಕೆ ಏನು ಹೆಸರಿಡಬೇಕು? ಯಾವ ರೀತಿ ಒಂದೇ ಅಜೆಂಡಾವನ್ನು ವಿಪಕ್ಷಗಳು ಹೊಂದಬೇಕು? ರಾಜ್ಯ ಮಟ್ಟದಲ್ಲಿ ಯಾವ ರೀತಿ ಮೈತ್ರಿಗಳು ಏರ್ಪಡಬೇಕು ಎಂಬ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ರಾಜ್ಯವಾರು ಮೈತ್ರಿ ರಚನೆಗೆ ಆಯಾ ರಾಜ್ಯ ಮಟ್ಟಗಳ ಸಮಿತಿ ಕೂಡ ರಚನೆ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಸಿದ್ದು ಔತಣ:
ಸಭೆಯ ಮೊದಲ ದಿನ ಜೂ.17ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ವಿಪಕ್ಷ ನಾಯಕರಿಗೆ ಔತಣಕೂಟ ಹಮ್ಮಿಕೊಂಡಿದ್ದಾರೆ.
'ದೇಶದ ಆತ್ಮಕ್ಕೆ ಮಣಿಪುರ ಹಿಂಸಾಚಾರದಿಂದ ಹಾನಿ' ಶಾಂತಿಗೆ ಮನವಿ ಮಾಡಿದ ಸೋನಿಯಾ ಗಾಂಧಿ