
ವಿಧಾನಸಭೆ (ಜು.13): ರಾಜ್ಯದಲ್ಲಿ ವಿದ್ಯುತ್ ಶುಲ್ಕ ಹೆಚ್ಚಾಗಲು ಯಾವ ಪಕ್ಷ ಕಾರಣ ಎಂಬ ಬಗ್ಗೆ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ ವ್ಯಕ್ತವಾಗಿದ್ದು, ವಿದ್ಯುತ್ ಖರೀದಿ ಒಪ್ಪಂದದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಕರೆಂಟ್ ಬಿಲ್ ಶಾಕ್ ಹೊಡೆವಷ್ಟರ ಮಟ್ಟಿಗೆ ಹೆಚ್ಚಾಗಿದೆ. 2008ರಿಂದ ಕೆಪಿಸಿಎಲ್‌ನ ವಿದ್ಯುತ್ ಉತ್ಪಾದನೆಗೆ ಶಕ್ತಿ ತುಂಬಲಿಲ್ಲ. ಬದಲಿಗೆ ಖಾಸಗಿಯವರ ಮೇಲೆ ಆಧಾರವಾಗಿ ಖಾಸಗಿಯಿಂದ ಬೇಕಾಬಿಟ್ಟಿದರಗಳಿಗೆ ಖರೀದಿ ಮಾಡಲು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. 2016-17ರಲ್ಲಿ ಪಿಪಿಎ ಮೂಲಕ ಪ್ರತಿ ಯುನಿಟ್‌ಗೆ 9.20 ರು. ನೀಡಿ ಖರೀದಿಸಲು 25 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.
ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ
‘ಇದರಲ್ಲಿ ಯಾರ ತಪ್ಪಿದೆ ಎಂಬುದು ಉಪಮುಖ್ಯಮಂತ್ರಿಗಳಿಗೆ ಗೊತ್ತಿದೆ’ ಎನ್ನುವ ಮೂಲಕ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡಿದರು. ‘ಒಂದು ಕಡೆ ಮನಸೋ ಇಚ್ಛೆ ದುಡ್ಡು ಕೊಟ್ಟು ಅಸಹಜ ದರಕ್ಕೆ ವಿದ್ಯುತ್ ಖರೀದಿ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತೀರಿ. ಇನ್ನೊಂದು ಕಡೆ ಆ ನಷ್ಟ ತುಂಬಿಕೊಳ್ಳಲು ವಿದ್ಯುತ್ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರುತ್ತಿರಿ. ಇದ್ಯಾವ ನ್ಯಾಯ?’ ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯ ಡಾ.ಸಿ.ಎನ್. ಅಶ್ವತ್ ನಾರಾಯಣ್, ‘ಹಾಗಾದರೆ ವಿದ್ಯುತ್ ಬೆಲೆ ಏರಿಕೆಗೆ ಕಾಂಗ್ರೆಸ್ಸೇ ಕಾರಣ. ಬೇಕಾಬಿಟ್ಟಿದರಗಳಿಗೆ ವಿದ್ಯುತ್ ಖರೀದಿ ಮಾಡಿ ಗ್ರಾಹಕರ ಮೇಲೆ ಹೊರೆ ಬೀಳುವಂತೆ ಮಾಡಲಾಗಿದೆ’ ಎಂದು ದೂರಿದರು.
ಜನಬೆಂಬಲ ಸಹಿಸದೆ ರಾಹುಲ್ ವಿರುದ್ಧ ಕೇಂದ್ರ ಕುತಂತ್ರ: ಡಿಕೆಶಿ
ತಿರುಗೇಟು ಕೊಟ್ಟಇಂಧನ ಸಚಿವ ಜಾರ್ಜ್, ‘ಹಿಂದಿನ ಸರ್ಕಾರದಲ್ಲಿ ನೀವು ಉಪಮುಖ್ಯಮಂತ್ರಿ ಆಗಿದ್ದಿರಿ. ದರ ಏರಿಕೆಗೆ ನೀವೇ ಕಾರಣ. ಕಲ್ಲಿದ್ದಲು ಆಮದು ದರ ಹೆಚ್ಚಳ ಮಾಡಿದಿರಿ. ನಮ್ಮಲ್ಲಿ ಸಿಗುವ ಕಲ್ಲಿದ್ದಲು ದರವನ್ನೂ ಹೆಚ್ಚಳ ಮಾಡಿದಿರಿ. ಜತೆಗೆ ಹಿಂದಿನ ಸರ್ಕಾರದಲ್ಲಿ ಬೇಕಾಬಿಟ್ಟಿದರ ಏರಿಕೆಗೆ ಕೆಇಆರ್‌ಸಿಗೆ ಪ್ರಸ್ತಾವನೆ ಕಳುಹಿಸಿದ್ದಿರಿ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ನೀವೇ ಕಾರಣ’ ಎಂದು ಹೇಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ. ಖಾದರ್, ‘ನಿಮ್ಮ ಕರೆಂಟ್ ಜಗಳದಲ್ಲಿ ಶಾರ್ಟ್ ಸಕ್ರ್ಯೂಟ್ ಆದರೆ ನಾನು ಬರ್ನ್ ಆಗುತ್ತೇನೆ. ಈ ಚರ್ಚೆ ನಿಲ್ಲಿಸಿ’ ಎಂದು ಚರ್ಚೆಗೆ ತೆರೆ ಎಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.