ಮಣಿಪುರ ಜನಾಂಗೀಯ ಹಿಂಸೆ ವಿಚಾರ ಹಾಗೂ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಿಂದ ಪ್ರತಿಪಕ್ಷಗಳ ಸದಸ್ಯರು ಪಲಾಯನಗೈದರು’ ಎಂದು ಆರೋಪಿಸಿದ್ದಾರೆ.
ಕೋಲಾಘಾಟ್ (ಪ.ಬಂಗಾಳ): ಮಣಿಪುರ ಜನಾಂಗೀಯ ಹಿಂಸೆ ವಿಚಾರ ಹಾಗೂ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಿಂದ ಪ್ರತಿಪಕ್ಷಗಳ ಸದಸ್ಯರು ಪಲಾಯನಗೈದರು’ ಎಂದು ಆರೋಪಿಸಿದ್ದಾರೆ. ಅಲ್ಲದೆ, ದೇಶಾದ್ಯಂತ ವಿಪಕ್ಷಗಳು ನಕಾರಾತ್ಮಕ ವಿಷಯಗಳನ್ನು ಹಬ್ಬಿಸುತ್ತಿವೆ ಎಂದು ಕಿಡಿಕಾರಿದ್ದಾರೆ. ಇದಲ್ಲದೆ. ಸಂಸತ್ತಿನಲ್ಲಿ ಮಣಿಪುರದ ಚರ್ಚೆಯ ಬಗ್ಗೆ ಪ್ರತಿಪಕ್ಷಗಳು ಗಂಭೀರವಾಗಿರಲಿಲ್ಲ. ಚರ್ಚೆ ನಡೆದಿದ್ದರೆ ಅವುಗಳ ಬಣ್ಣವೇ ಬಯಲಾಗುತ್ತಿತ್ತು ಎಂದೂ ಹೇಳಿದ್ದಾರೆ.
ಶನಿವಾರ ಪ.ಬಂಗಾಳದ ನೂತನ ಬಿಜೆಪಿ ಪಂಚಾಯ್ತಿ ಸದಸ್ಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ‘ವಿರೋಧ ಪಕ್ಷಗಳು ಜನರ ಕಲ್ಯಾಣಕ್ಕಿಂತ ತಮ್ಮ ರಾಜಕೀಯಕ್ಕೆ ಆದ್ಯತೆ ನೀಡುತ್ತಿವೆ. ಹೀಗಾಗಿ ಸಂಸತ್ತಿನಲ್ಲಿ ಚರ್ಚೆಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶ ಬಳಸಿಕೊಳ್ಳಲು ಆಗಲಿಲ್ಲ’ ಎಂದು ವಿಷಾದಿಸಿದರು.
ಎರಡು ದಿನಗಳ ಹಿಂದಷ್ಟೇ ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ (Opposition Party) ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೆವು. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ. ಪ್ರತಿಪಕ್ಷಗಳು ಸದನದಿಂದ ಓಡಿ ಹೋಗುವುದನ್ನು ಇಡೀ ದೇಶವೇ ನೋಡಿದೆ. ದುರದೃಷ್ಟವಶಾತ್, ಅವರು ಮಣಿಪುರದ (Manipur People) ಜನರಿಗೆ ದ್ರೋಹ ಮಾಡಿದ್ದಾರೆ’ ಎಂದು ಮೋದಿ ಆರೋಪಿಸಿದರು.
ನವ ಭಾರತಕ್ಕೆ ಹೊಸ ಕಾನೂನು; ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್ ಶಾ ಘೋಷಣೆ
‘ಅಧಿವೇಶನ ಪ್ರಾರಂಭವಾಗುವ ಮೊದಲು, ಸರ್ಕಾರವು ವಿಪಕ್ಷಗಳಿಗೆ ಪತ್ರ ಬರೆದು ಮಣಿಪುರ ಕುರಿತ ಚರ್ಚೆಗೆ ಆಹ್ವಾನಿಸಿತ್ತು. ಆದರೆ ಏನಾಯಿತು ಎಂದು ನೀವೆಲ್ಲರೂ ನೋಡಿದ್ದೀರಿ. ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡಲಿಲ್ಲ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆ ನಡೆದಿದ್ದರೆ ಮಣಿಪುರದ ಜನತೆಗೆ ನೆಮ್ಮದಿ ಸಿಗುತ್ತಿತ್ತು. ಕೆಲವು ಪರಿಹಾರಗಳು ಹೊರಹೊಮ್ಮುತ್ತಿದ್ದವು. ಆದರೆ ಮಣಿಪುರದ ಸತ್ಯವು ತಮ್ಮನ್ನು ಹೆಚ್ಚು ಕುಟುಕುತ್ತದೆ ಎಂದು ತಿಳಿದಿದ್ದರಿಂದ ವಿಪಕ್ಷಗಳು ಅದನ್ನು ಚರ್ಚಿಸಲು ಬಯಸಲಿಲ್ಲ. ಅವರು ಗಂಭೀರವಾಗಿರದೆ ಮಣಿಪುರ ವಿಚಾರದಲ್ಲಿ ರಾಜಕೀಯ ಮಾಡಲು ಬಯಸಿದ್ದರು’ ಎಂದು ಪ್ರಧಾನಿ ನುಡಿದರು.
‘ಅವರು ಜನರ ನೋವು ಮತ್ತು ಸಂಕಟಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರಿಗೆ ರಾಜಕೀಯದ ಬಗ್ಗೆ ಕಾಳಜಿ ಇದೆ. ಅದಕ್ಕಾಗಿಯೇ ಅವರು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಚರ್ಚೆಯಿಂದ ದೂರವಿರಲು ನಿರ್ಧರಿಸಿದರು ಮತ್ತು ರಾಜಕೀಯ ಚರ್ಚೆಗಳಿಗೆ ಆದ್ಯತೆ ನೀಡಿದರು. ಆದರೆ 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸರ್ಕಾರ ಸೋಲಿಸಿತು. ದೇಶದ ಜನರ ಮುಂದೆ ಬಿಜೆಪಿ (BJP Activist) ಕಾರ್ಯಕರ್ತರು ವಿಪಕ್ಷಗಳ ಮುಖವಾಡ ಬಿಚ್ಚಿಸಬೇಕು’ ಎಂದು ಕೋರಿದರು.
ತ್ರಿವರ್ಣ ಧ್ವಜದೊಂದಿಗೆ ಫೋಟೋ ಕಳಿಸಲು ಮೋದಿ ಮನವಿ: ಈ ವೆಬ್‌ಸೈಟ್‌ನಲ್ಲಿ ಸೆಲ್ಫಿ ಅಪ್ಲೋಡ್ ಮಾಡೋದು ಹೇಗೆ ನೋಡಿ..
‘ಜನರ ನಂಬಿಕೆಯು ನನಗೆ ಸ್ಫೂರ್ತಿ ನೀಡುತ್ತದೆ ಮತ್ತು ನನ್ನ ಆತ್ಮವಿಶ್ವಾಸ ಮತ್ತು ಚೈತನ್ಯ ಹೆಚ್ಚಿಸುತ್ತದೆ’ ಎಂದು ಅವರು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಸೋಲನ್ನು ಉಲ್ಲೇಖಿಸಿ ಹೇಳಿದರು.