ಕೇಜ್ರಿವಾಲ್‌ ಎದುರು ‘ಮೋದಿ ಮೋದಿ’ ಜಪ ಮಾಡಿದ ಗುಜರಾತ್‌ ಜನತೆ: ನಿಮ್ಮ ಹೃದಯ ಗೆಲ್ಲುತ್ತೇವೆ ಎಂದ ದೆಹಲಿ ಸಿಎಂ

By BK AshwinFirst Published Nov 21, 2022, 3:08 PM IST
Highlights

ಶಾಲೆಗಳನ್ನು ಕಟ್ಟಿಸಬೇಕಾದರೆ ನೀವು ನನ್ನ ಬಳಿ ಬನ್ನಿ. ನಾನು ಎಂಜಿನಿಯರ್‌. ನಿಮಗೆ ವಿದ್ಯುತ್‌, ಆಸ್ಪತ್ರೆ ಅಥವಾ ರಸ್ತೆಗಳು ಬೇಕಿದ್ದಲ್ಲಿ ನನ್ನ ಬಳಿ ಬನ್ನಿ. ಇಲ್ಲದಿದ್ದರೆ ಗೂಂಡಾಗಿರಿ ಬೇಕಿದ್ದಲ್ಲಿ ಬಿಜೆಪಿ ಬಳಿ ಹೋಗಿ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

ಶೀಘ್ರದಲ್ಲೇ ಗುಜರಾತ್‌ ವಿಧಾನಸಭೆ ಚುನಾವಣೆ (Gujarat Assembly Elections) ನಡೆಯುತ್ತಿದ್ದು, ಈ ಹಿನ್ನೆಲೆ ರಾಜಕೀಯ ಪಕ್ಷಗಳಿಂದ (Political Parties) ಅಬ್ಬರದ ಪ್ರಚಾರ ಶುರುವಾಗಿದೆ. ಬಿಜೆಪಿಗೆ (BJP) ಈ ಬಾರಿ ಆಪ್‌ (AAP) ಪ್ರಬಲ ಸ್ಪರ್ಧೆಯೊಡ್ಡಲು ಹಾಗೂ ಗಾಂಧಿ ನಾಡಲ್ಲಿ ಈ ಬಾರಿ ಅಧಿಕಾರ ಹಿಡಿಯಲು ಹರಸಾಹಸ ಪಡುತ್ತಿದೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಭಾನುವಾರ ಗುಜರಾತ್‌ನಲ್ಲಿ ರೋಡ್‌ಶೋ (Road Show) ಮಾಡಿದ್ದಾರೆ. ಪಂಚಮಹಲ್‌ ಜಿಲ್ಲೆಯ ಹಲೋಲ್‌ನಲ್ಲಿ ಕೇಜ್ರಿವಾಲ್‌ ರೋಡ್‌ಶೋ ವೇಳೆ ಹಲವರು ಮೋದಿ ಮೋದಿ (Modi Modi) ಎಂದು ಘೋಷಣೆ ಕೂಗಿದ್ದಾರೆ. ಭಾನುವಾರ ಸಂಜೆ ಜನರನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ದೆಹಲಿ ಸಿಎಂ ಎದುರು ಈ ಘಟನೆ ನಡೆದಿದೆ. ಕಳೆದ ಬಾರಿ ಅವರು ಗುಜರಾತ್‌ಗೆ ಹೋದಾಗಲೂ ಸಹ ಹಲವರು ಮೋದಿ ಮೊದಿ ಎಂದು ಘೋಷಣೆ ಕೂಗಿದ್ದರು. 

ಇನ್ನು, ಇದಕ್ಕೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಅವರು ಯಾರ ಪರವಾಗಿಯಾದರೂ ಘೋಷಣೆಗಳನ್ನು ಕೂಗಲಿ, ಆದರೆ ಮಕ್ಕಳಿಗೆ ಶಾಲೆ ಕಟ್ಟಿಸುವುದು ಹಾಗೂ ಜನತೆಗೆ ಉಚಿತ ವಿದ್ಯುತ್‌ ನೀಡುವುದು ನಾನೇ. ಹಾಗೂ, ಮೋದಿ ಪರ ಘೋಷಣೆ ಕೂಗುತ್ತಿರುವವರ ಹೃದಯದಲ್ಲೂ ಒಂದಲ್ಲ ಒಂದು ದಿನ ಎಎಪಿ ಇರುತ್ತದೆ ಎಂದೂ ಅವರು ಹೇಳಿದ್ದಾರೆ. 

ಇದನ್ನು ಓದಿ: ದೆಹಲಿ ಸಿಎಂಗೆ 'ಚೋರ್‌ ಚೋರ್‌', 'ಮೋದಿ ಮೋದಿ' ಘೋಷಣೆ ಕೂಗಿದ ಗುಜರಾತ್‌ ಜನತೆ; ಕಪ್ಪು ಬಾವುಟ ಪ್ರದರ್ಶನ

ರೋಡ್‌ಶೋ ಉದ್ದೇಶಿಸಿ ಭಾಷಣ ಮಾಡುವಾಗಲೇ ಕೇಜ್ರಿವಾಲ್‌, ‘’ಕೆಲವು ಗೆಳೆಯರು ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ನಾನು ಅವರಿಗೆ ಹೇಳುವುದು, ನೀವು ಯಾರ ಪರವಾಗಿಯಾದರೂ ಘೋಷಣೆಗಳನ್ನು ಕೂಗಿರಿ. ಆದರೆ, ನಿಮ್ಮ ಮಕ್ಕಳಿಗೆ ಶಾಲೆಗಳನ್ನು ಕಟ್ಟಿಸುವುದು ಕೇಜ್ರಿವಾಲ್. ನೀವು ಎಷ್ಟು ಘೋಷಣೆಗಳನ್ನು ಕೂಗಿದರೂ ಉಚಿತ ವಿದ್ಯುತ್‌ ಅನ್ನು ನೀಡುವುದು ಸಹ ಕೇಜ್ರಿವಾಲ್‌ ಎಂದು ಹೇಳಿದ್ದಾರೆ.   

ಅಲ್ಲದೆ, ನಮಗೆ ಯಾರ ಮೇಲೂ ದ್ವೇಷ ಇಲ್ಲ. ನೀವು ಯಾರ ಪರವಾಗಿಯಾದರೂ ಘೋಷಣೆಗಳನ್ನು ಕೂಗಿ. ಒಂದಿನ ನಾವು ನಿಮ್ಮ ಹೃದಯಗಳನ್ನು ಗೆಲ್ಲುತ್ತೇನೆ ಹಾಗೂ ನಮ್ಮ ಪಕ್ಷವನ್ನು ನಿಮ್ಮನ್ನು ನಮ್ಮ ಪಕ್ಷಕ್ಕೆ ಕರೆತರುತ್ತೇವೆ ಎಂದೂ ದೆಹಲಿ ಸಿಎಂ ಹೇಳಿದ್ದಾರೆ. ಹಾಗೂ, ರಾಜ್ಯದ ಹಲವು ಯುವಕರು ನಿರುದ್ಯೋಗಿಗಳಾಗಿದ್ದು, ನಮ್ಮ ಪಕ್ಷ ಅವರಿಗೆ ಉದ್ಯೋಗದ ಭರವಸೆ ನೀಡುತ್ತದೆ ಹಾಗೂ ಕೆಲಸ ಹುಡುಕುತ್ತಿರುವವರಿಗೆ ತಿಂಗಳಿಗೆ 3 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡುತ್ತೇನೆ ಎಂದೂ ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌ನಲ್ಲಿ ಎಎಪಿ ಪರ ರೋಡ್‌ಶೋ ನಡೆಸುತ್ತಿರುವ ವೇಳೆ ಜನರಿಗೆ ಭರವಸೆ ನೀಡಿದ್ದಾರೆ.  

ಇದನ್ನೂ ಓದಿ: ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ನಮ್ಮ ಅತಿ ದೊಡ್ಡ ಸಾಧನೆ: Arvind Kejriwal

ಶಾಲೆಗಳ ಬಗ್ಗೆ ಯಾವ ಪಕ್ಷವೂ ಮಾತನಾಡುವುದಿಲ್ಲ. ಯಾವ ಪಕ್ಷವಾದರೂ ಶಾಲೆಗಳು ಆಸ್ಪತ್ರೆಗಳು, ಉದ್ಯೋಗ ಹಾಗೂ ಉಚಿತ ವಿದ್ಯುತ್‌ ಭರವಸೆ ನೀಡಿದೆಯಾ..? ನಮ್ಮ ಪಕ್ಷ ಮಾತ್ರ ಅಂತಹ ವಿಚಾರಗಳ ಬಗ್ಗೆ ಮಾತನಾಡುವುದು ಎಂದೂ ಅರವಿಂದ್‌ ಕೇಜ್ರಿವಾಲ್‌ ಹೇಳಿಕೊಂಡಿದ್ದಾರೆ. ಹಾಗೂ ಗೂಂಡಾಗಿರಿ ಮೇಲೆ ನಂಬಿಕೆ ಇಡುವವರು ಹಾಗೂ ಬೇರೆಯವರನ್ನು ನಿಂದಿಸುವವರು ಬಿಜೆಪಿಯನ್ನೇ ಬೆಂಬಲಿಸಬಹುದು ಎಂದೂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

ಶಾಲೆಗಳನ್ನು ಕಟ್ಟಿಸಬೇಕಾದರೆ ನೀವು ನನ್ನ ಬಳಿ ಬನ್ನಿ. ನಾನು ಎಂಜಿನಿಯರ್‌. ನಿಮಗೆ ವಿದ್ಯುತ್‌, ಆಸ್ಪತ್ರೆ ಅಥವಾ ರಸ್ತೆಗಳು ಬೇಕಿದ್ದಲ್ಲಿ ನನ್ನ ಬಳಿ ಬನ್ನಿ. ಇಲ್ಲದಿದ್ದರೆ ಗೂಂಡಾಗಿರಿ ಬೇಕಿದ್ದಲ್ಲಿ ಅವರ ಬಳಿ ಹೋಗಿ ಎಂದೂ ಅವರು ಹೇಳಿದ್ದಾರೆ. ಐದು ವರ್ಷ ಅಧಿಕಾರ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ನೀವು ಅವರಿಗೆ 27 ವರ್ಷಗಳನ್ನು ನೀಡಿದ್ದೀರಿ. ನನಗೆ 5 ವರ್ಷ ನೀಡಿ. ನಾನು ಭರವಸೆಗಳನ್ನು ಈಡೇರಿಸದಿದ್ದರೆ ನಾನು ನಿಮ್ಮ ಬಳಿ ಮತ್ತೆ ಬರುವುದೇ ಇಲ್ಲ ಎಂದೂ ಅವರು ಹೇಳಿದರು. 

ಇದನ್ನೂ ಓದಿ: Gujarat Elections: ಎಎಪಿ ಸರ್ಕಾರ ರಚನೆ ಎಂದು ಐಬಿ ವರದಿ; ವರದಿಯಿಂದ ಬಿಜೆಪಿಗೆ ನಡುಕ ಎಂದ ಕೇಜ್ರಿವಾಲ್‌

ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಎಎಪಿ ಎಲ್ಲ 182 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಬಿಜೆಪಿಗೆ ಪ್ರಬಲ ಸ್ಪರ್ಧಿಯಾಗಿ ಆಪ್‌ ಕಾಣಿಸಿಕೊಳ್ಳುತ್ತಿದ್ದು, ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ ತನ್ನ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. 

click me!