
ಹುಬ್ಬಳ್ಳಿ (ನ.21): ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿ ನೀಡಿ ಪಂಚರತ್ನ ಯಾತ್ರೆ ಹಳೆ ಮೈಸೂರು ಭಾಗದಲ್ಲಿ ಜೋರಾಗಿ ನಡೆಯುತ್ತಿದೆ. ಪಂಚರತ್ನ ಕಾರ್ಯಕ್ರಮದ ಉದ್ದೇಶ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಐದು ವರ್ಷಗಳಲ್ಲಿ ಏನೂ ಮಾಡುತ್ತೆವೆಂದು ತಿಳಿಸಲಾಗುತ್ತದೆ. ಐದು ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೆರಸದೆ ಹೋದ್ರೆ 2028 ಕ್ಕೆ ನಾವು ನಿಮ್ಮಲ್ಲಿ ಮತ ಕೇಳಲಿಕ್ಕೆ ಬರುವುದಿಲ್ಲ. ಆರೋಗ್ಯ, ಶಿಕ್ಷಣ, ನೀರಾವರಿಗಾಗಿ ಪಂಚರತ್ನ ನಡೆಯುತ್ತಿದೆ. ಈ ಎಲ್ಲಾ ಯೋಜನೆಗಳಿಗೆ ಐದು ವರ್ಷಗಳಲ್ಲಿ ಐದು ಲಕ್ಷ ಕೋಟಿ ಬೇಕಾಗುತ್ತದೆ. ಕೃಷ್ಣಭಾಗ್ಯ ಜಲ ನಿಗಮಕ್ಕಾಗಿ ಪ್ರಧಾನಿಮಂತ್ರಿ ಹುದ್ದೆಯನ್ನ ತ್ಯಾಗ ಮಾಡಲಿಕ್ಕೆ ಸಿದ್ದರಾದವರು ದೇವೇಗೌಡರು. ರೈತರ ದುರ್ದೈವ ಕಷ್ಟ ಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯಿಲ್ಲ. ಸಿದ್ದರಾಮಯ್ಯನವರು ನಾಲ್ಕೂ ವರ್ಷ ಬಜೆಟ್ ಮಾಡಿದಾಗ ನಾನು ಅದರ ಹಿನ್ನೆಲೆ ಗಾಯಕ, ಮುಂದೆ ಬಾಯಿ ಅಲ್ಲಾಡಿಸಿದರು. ಸ್ಟಾರ್ಟ್‌ಪ್ ಏನಾಗಿದೆ, ಮೋದಿಯವರು ಕೇವಲ ಕಾಟಾಚಾರಕ್ಕೆ ಮಾಡಿದ್ದಾರೆ, ಯುವಕರು ಉಪಯೋಗಕ್ಕಿಲ್ಲ. ಬೊಮ್ಮಾಯಿಯವರು ಸರ್ಕಾರ ವಿಫಲವಾಗಿದೆ. ಬೊಮ್ಮಾಯಿ ಸರ್ಕಾರ ಕೇಶವ ಕೃಪಾ, ಬಸವ ಕೃಪಾದಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಬೊಮ್ಮಾಯಿಯವರು ಸಿಎಂ ಆದ ಮೇಲೆ ಮೀಸಲಾತಿಗಾಗಿ ಹೋರಾಟ ನಡೆಯುತ್ತಿವೆ. 40% ಕಮಿಷನ್ ಆರೋಪ ಮಾಡಿ, ಅವರದ್ದೆ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಸ್.ಆರ್.ಬೊಮ್ಮಾಯಿ ಆವರ ಬೃಹತ್ ಪ್ರತಿಮೆಯನ್ನ ಹುಬ್ಬಳ್ಳಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ.
ಜನರು ನಮಗೆ ಮತ ಹಾಕಲಿಕ್ಕೆ ಸಿದ್ದರಿದ್ದಾರೆ, ಅದನ್ನು ಹಾಕಿಸಿಕೊಳ್ಳುವ ಶಕ್ತಿ ನಮ್ಮ ಅಭ್ಯರ್ಥಿಗೆ ಇರಬೇಕು. 2023 ಕ್ಕೆ ಪಂಚರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರ್ತಾವೆ. ಇಲ್ಲಿ ಜಯಗಳಿಸಿದ ನಂತ್ರ ನಮ್ಮ ಸಂಕಲ್ಪ 2024 ಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು. 2023 ಕ್ಕೆ ನಮ್ಮ ಪಕ್ಷಕ್ಕೆ ಅಧಿಕಾರಿಕ್ಕೆ ಬಂದೆ ಬರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ 40 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲುತ್ತದೆ.
ಹೊರಟ್ಟಿ ಮತ್ತು ಕೋನರೆಡ್ಡಿ ಟಿಕೆಟ್ ಕೊಡುವ ಜಾಗದಲ್ಲಿ ಇದ್ದರು, ಈಗ ಬೇಡುವ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ಹೊರಟ್ಟಿಯವರು ಬಸವ ಕೃಪಾವನ್ನ ಕಾಯಬೇಕಾಗಿತ್ತು, ಈಗ ಕೇಶವ ಕೃಪಾವನ್ನ ಕಾಯುತ್ತಿದ್ದಾರೆ.
ನಮ್ಮ ಪಕ್ಷಕ್ಕೆ ಬೊಮ್ಮಾಯಿ ಬಂದರೆ ನಾವು ಬೇಡ ಎನ್ನುವುದಿಲ್ಲ. ಈದ್ಗಾ ಮೈದಾನದ ಜಗಳವನ್ನ ಇತ್ಯರ್ಥ ಮಾಡಿದವರು ನಾನೂ ಮತ್ತು ಬೊಮ್ಮಾಯಿ. ಜೆಡಿಎಸ್ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ನಮ್ಮ ಟಿಕೆಟ್‌ಗಳನ್ನು ದೆಹಲಿಯಲ್ಲಿ, ಬೆಂಗಳೂರಿನಲ್ಲಿ ಹಂಚಿಕೆ ಮಾಡುವುದಿಲ್ಲ.
ಧಾರವಾಡ ಜಿಲ್ಲೆಯ ಟಿಕೆಟ್‌ಗಳನ್ನ ಧಾರವಾಡ ಜಿಲ್ಲೆಯಲ್ಲಿಯೇ ಹಂಚಿಕೆ ಮಾಡುತ್ತೆವೆ. ನಮ್ಮ ಸಂಪರ್ಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷದ ಶಾಸಕರಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೋಲಾರದಲ್ಲಿ ಟಿಪ್ಪು ವಿವಿ ಸ್ಥಾಪನೆ: ಮಾತು ಕೊಟ್ಟ ಇಬ್ರಾಹಿಂ
ನಾನು ಎಲ್ಲಿಯೂ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಸಿದ್ದಾರಾಮಯ್ಯನವರಿಗೆ ಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ ಏನೂ..? ಅವರು ಮಾಡಿದ್ದು ಸ್ವಯಂಪ್ರೇರಿತ ಅಪರಾಧ, ಕ್ಷೇತ್ರ ಹುಡುಕಾಟದಲ್ಲಿ ಮಾಡುತ್ತಿದ್ದಾರೆ. ಸಿಎಮ್ ಇದ್ದವರು 40 ಸಾವಿರ ಮತಗಳ ಅಂತರದಿಂದ ಸೊತರು, ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ದ ನಾನು.
ವಿಧಾನಸಭಾ ಸಮರಕ್ಕೆ ಜೆಡಿಎಸ್ ಸಜ್ಜು: 'ಪಂಚರತ್ನ'ವೇ ಗೆಲುವಿಗೆ ಪಂಚಾಮೃತ
ನಮ್ಮ ಪಕ್ಷದ ಸಿಎಮ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗುವ ಅವಕಾಶಗಳಿವೆ. ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಏಕೆ ಆಗಬಾರದು-ಕಾಯ್ದು ನೋಡಿ ಎಂದ ಇಬ್ರಾಹಿಂ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.