
ಬೆಳಗಾವಿ (ಫೆ.01): ಇನ್ನು ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಿಡಿ ಪ್ರಕರಣದ ಕುರಿತು ವೈಯಕ್ತಿಕ ಟೀಕೆ ಟಿಪ್ಪಣೆ ಮಾಡುವುದು ಬೇಡ. ಸಿಡಿ ಕೇಸ್ ಚರ್ಚೆ ಮುಂದುವರಿಸಬೇಡಿ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು. ಜಿಲ್ಲೆಯ ಮೂಡಲಗಿ ತಾಲೂಕಿನ ಖಂಡ್ರಟ್ಟಿಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಹಿಡಿದು ಪರಸ್ಪರ ಕೆಸರೆರಚಾಡುವುದನ್ನು ಬಿಟ್ಟು ರಾಜಕೀಯವಾಗಿ ಹೋರಾಟ ಮಾಡೋಣ ಎಂದು ಸಹೋದರ ರಮೇಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರಿಗೆ ಮನವಿ ಮಾಡಿದರು.
ಮೂರು ಕುಟುಂಬಗಳು ರಾಜಕೀಯವಾಗಿ ಬೆಳೆದಿವೆ. ಬಹಿರಂಗ ಹೇಳಿಕೆ ನೀಡುವುದು ಬೇಡ. ಸಾರ್ವಜನಿಕ ಕಿತ್ತಾಟವೂ ಬೇಡ. ವಯಸ್ಸಿನಲ್ಲಿ ಎಲ್ಲರೂ ದೊಡ್ಡವರಿದ್ದಾರೆ. ಸಿಡಿ ಪ್ರಕರಣ ಮುಂದುವರಿಸಬೇಡಿ. ನಾವು ಬಿಜೆಪಿ ಪರವಾಗಿ ಹೋರಾಡುತ್ತೇವೆ. ನೀವು ನಿಮ್ಮ ಪಕ್ಷದ ಸಲುವಾಗಿ ಹೋರಾಡಿ. ಜನತೆಗೆ ಯಾರ ಮೇಲೆ ಪ್ರೀತಿಯಿದೆ ಅವರಿಗೆ ಓಟು ಹಾಕುತ್ತಾರೆ. ವೈಯಕ್ತಿಕವಾಗಿ ಸಾರ್ವಜನಿಕವಾಗಿ ಟೀಕೆ ಟಿಪ್ಪಣೆ ಮಾಡುವುದರಿಂದ ಜಾರಕಿಹೊಳಿ, ಡಿಕೆಶಿ ಮತ್ತು ಹೆಬ್ಬಾಳಕರ ಕುಟುಂಬ ಡ್ಯಾಮೇಜ್‌ಆಗುತ್ತವೆ ಎಂದರು. ಸಿಡಿ ವಿಚಾರವನ್ನು ಸಿಬಿಐಗೆ ವಹಿಸುವಂತೆ ರಮೇಶ ಜಾರಕಿಹೊಳಿ ಹೇಳಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ವಿಚಾರವನ್ನು ಮುಖ್ಯಮಂತ್ರಿ, ಗೃಹ ಸಚಿವರೊಂದಿಗೆ ಒಂದು ಕೊಠಡಿಯಲ್ಲಿ ಕುಳಿತು ಚರ್ಚೆ ಮಾಡುತ್ತೇವೆ.
ಮಾನವ, ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅಗತ್ಯ: ರಿಷಬ್ ಶೆಟ್ಟಿ
ಪಕ್ಷದ ಮುಖಂಡರಿಗೆ ನೇರವಾಗಿ ಹೇಳುತ್ತೇವೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಿಡಿ ಪ್ರಕರಣದ ಕುರಿತು ಹೇಳಿಕೆ ನೀಡಬಾರದು ಎಂದು ಮೂವರಿಗೂ ನಾನು ಮನವಿ ಮಾಡುತ್ತೇನೆ ಎಂದರು. ನಮ್ಮನ್ನು ಸೋಲಿಸಲು ಅವರು ಬರಲಿ, ಅವರನ್ನು ಸೋಲಿಸಲು ನಾವು ಹೋಗಲಿ. ಆದರೆ, ವೈಯಕ್ತಿಕ ಟೀಕೆ ಮಾಡಬಾರದು. ಸಿಡಿ ಪ್ರಕರಣದಲ್ಲಿ ಸಹೋದರ ರಮೇಶ ಜಾರಕಿಹೊಳಿ ಅವರಿಗೆ ನೋವಾಗಿದೆ. ಅನ್ಯಾಯವಾಗಿದೆ. ಸಾಕಷ್ಟು ತೊಂದರೆಯಾಗಿದೆ ನಿಜ. ಅವರೊಂದಿಗಿದ್ದು ನಾನು ಹೋರಾಟ ಮಾಡಿದ್ದೇನೆ. ಈಗ ಸಾರ್ವಜನಿಕವಾಗಿ ಸಿಡಿ ವಿಚಾರವಾಗಿ ಚರ್ಚೆ ಮಾಡುವುದು ಬೇಡ. ಪಕ್ಷದ ವೇದಿಕೆ ಮೇಲೆ ಮಾತನಾಡುತ್ತೇವೆ ಎಂದು ಹೇಳಿದರು.
ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಿಜೆಪಿಗೆ ಮತವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಸಿಡಿ ಪ್ರಕರಣ ಬಹಿರಂಗವಾದ ಸಂದರ್ಭದಲ್ಲೇ ನಾನು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹೇಳಿದ್ದೆ. ಸಿಡಿ ಪ್ರಕರಣ ವಿಚಾರ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈ ಕುರಿತು ಸಾರ್ವಜನಿಕ ಚರ್ಚೆ ಮಾಡಿ ನಮ್ಮ ಕುಟುಂಬವನ್ನು ನಾವೇ ಡ್ಯಾಮೇಜ್ ಮಾಡುವಂತಾಗಿದೆ. ಹಾಗಾಗಿ, ಈ ಕುರಿತು ಚರ್ಚೆಯನ್ನು ನಿಲ್ಲಿಸಬೇಕು. ರಾಜಕೀಯವಾಗಿ ಹೋರಾಟ ಮಾಡಬೇಕು ಎಂದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.