ಇತ್ತೀಚೆಗೆ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಬಿಜೆಡಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಒಡಿಶಾದಲ್ಲಿ 24 ವರ್ಷಗಳಿಂದ ಇದ್ದ ಅಧಿಕಾರವನ್ನು ಕಳೆದುಕೊಂಡಿದ್ದಲ್ಲದೆ, ಲೋಕಸಭೆಯಲ್ಲಿ ಶೂನ್ಯ ಸಂಪಾದಿಸಿತ್ತು. ಇದರ ಬೆನ್ನಲ್ಲೇ ರಾಜ್ಯಸಭೆಯ 9 ಸದಸ್ಯರ ಜತೆ ಸೋಮವಾರ ಸಭೆ ನಡೆಸಿ ನಿರ್ದೇಶನ ನೀಡಿದ ಬಿಜೆಡಿ ಪರಮೋಚ್ಚ ನಾಯಕ ನವೀನ್ ಪಟ್ನಾಯಕ್
ಭುವನೇಶ್ವರ(ಜೂ.25): ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಂಸತ್ತಿನಲ್ಲಿ ವಿಷಯಾಧಾರಿತ ಬೆಂಬಲ ನೀಡುತ್ತಾ ಬಂದಿದ್ದ ಒಡಿಶಾದ ಬಿಜು ಜನತಾದಳ (ಬಿಜೆಡಿ) ಇದೀಗ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಇನ್ನು ಮುಂದೆ ಸಂಸತ್ತಿನಲ್ಲಿ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಬಲಿಷ್ಠ ಹಾಗೂ ಹುರುಪಿನ ಪ್ರತಿಪಕ್ಷವಾಗಿ ಪಕ್ಷ ಕಾರ್ಯನಿರ್ವಹಿಸುವುದಾಗಿ ಘೋಷಣೆ ಮಾಡಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಬಿಜೆಡಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಒಡಿಶಾದಲ್ಲಿ 24 ವರ್ಷಗಳಿಂದ ಇದ್ದ ಅಧಿಕಾರವನ್ನು ಕಳೆದುಕೊಂಡಿದ್ದಲ್ಲದೆ, ಲೋಕಸಭೆಯಲ್ಲಿ ಶೂನ್ಯ ಸಂಪಾದಿಸಿತ್ತು. ಇದರ ಬೆನ್ನಲ್ಲೇ ರಾಜ್ಯಸಭೆಯ 9 ಸದಸ್ಯರ ಜತೆ ಬಿಜೆಡಿ ಪರಮೋಚ್ಚ ನಾಯಕ ನವೀನ್ ಪಟ್ನಾಯಕ್ ಸೋಮವಾರ ಸಭೆ ನಡೆಸಿ ಈ ಸಂಬಂಧ ನಿರ್ದೇಶನ ನೀಡಿದ್ದಾರೆ.
undefined
ಎನ್‌ಡಿಎ ಅಂದ್ರೆ ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್: ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಬಿಜೆಡಿ ಅದರ ನೆರವಿಗೆ ನಿಲ್ಲುತ್ತಿತ್ತು. 2019 ಹಾಗೂ 2024ರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಸಹಕಾರವನ್ನೂ ನೀಡಿತ್ತು.