ಮುಸ್ಲಿಂಮರ ಕೆಲಸವನ್ನು ಸಚಿವ ಖಂಡ್ರೆ ತಲೆಬಾಗಿ ಮಾಡಬೇಕು: ಜಮೀರ್ ವಿವಾದಾತ್ಮಕ ಹೇಳಿಕೆ

By Gowthami KFirst Published Jun 25, 2024, 12:43 PM IST
Highlights

 ಮುಸ್ಲಿಂಮರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೀದರ್‌ (ಜೂ.25): ಬೀದರ್‌ನಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂಮರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕಾಗುತ್ತದೆ. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು ಎಂದು ತಮ್ಮದೇ ಪಕ್ಷದ ಸಚಿವನ ವಿರುದ್ಧ ಹೇಳಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಸಿರ್ಪ್‌ ಔರ್ ಸಿರ್ಪ್ ಮುಸ್ಲಿಂ ಓಟ್‌ಸೆ ಸಾಗರ್ ಖಂಡ್ರೆ ಜೀತೆ ಸೋ ಹೈ. (ಕೇವಲ ಅಂದರೆ ಕೇವಲ ಮುಸ್ಲಿಂಮರ ಮತದಿಂದ ಸಾಗರ್ ಖಂಡ್ರೆ ಗೆದ್ದಿದ್ದಾನೆ) ಹಮಾರಾ ಕಾಮ್ ಝಕ್ ಮಾರ್‌ಕೆ ಕರ್ನಾ ಪಡ್ತಾ ಹೈ. (ನಮ್ಮ ಕೆಲಸವನ್ನು ತಲೆ ಬಗ್ಗಿಸಿಕೊಂಡು ಅವನು ಮಾಡಬೇಕು) ಎಂದು ಹೇಳಿಕೆ ನೀಡಿದ್ದಾರೆ.

Latest Videos

ಅರಣ್ಯ ಪ್ರದೇಶದ ಜಾಗವಾಗಿದ್ದರಿಂದ ಖಬರಸ್ತಾನ‌ಗೆ (ಸ್ಮಶಾನ) ಜಾಗ ನೀಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಅಳಲು ತೊಡಿಕೊಂಡಿದ್ದ. ಈ ಬಗ್ಗೆ ಮಾತನಾಡಿ, ನಾನು ಈಶ್ವರ ಖಂಡ್ರೆ ಜೊತೆ ಮಾತನಾಡ್ತಿನಿ, ನಾನು ಮಾಡಿಸ್ತಿನಿ ಬಿಡು ಎಂದು ಸರ್ವೆ ನಂಬರ್ 93 ಖಬರ್‌ಸ್ತಾನ ಜಾಗದ ವಿಚಾರವಾಗಿ ಅವನಲ್ಲಿ ಮಾತನಾಡಿ ಅಕ್ಕ ಪಕ್ಕದಲ್ಲಿ ಎಲ್ಲೂ ಜಾಗ ಇಲ್ವಾ ಎಂದು ಸಚಿವ ಜಮೀರ್ ಅಹ್ಮದ್ ವ್ಯಕ್ತಿ ಬಳಿ ಕೇಳಿದ್ದಾರೆ.

ಅಕ್ಕ ಪಕ್ಕದಲ್ಲಿ ಎಲ್ಲೂ ಖಾಲಿ ಜಾಗ ಇಲ್ಲ. ಮೊದಲಿನಿಂದಲೂ ಅಲ್ಲೆ ಅಂತ್ಯಕ್ರಿಯೆ ಮಾಡ್ತಿವಿ ಎಂದು ವ್ಯಕ್ತಿ ಹೇಳಿದ್ದಾನೆ. ಖಬರ್‌ಸ್ತಾನಗೆ ಅರಣ್ಯ ಇಲಾಖೆ ಜಾಗ ನೀಡದ ಹಿನ್ನೆಲೆ ಅರಣ್ಯ ಸಚಿವರ ಬಗ್ಗೆ ಜಮೀರ್ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ. ವ್ಯಕ್ತಿ ಮಾತಿಗೆ ಪ್ರತಿಕ್ರಿಯೆ ನೀಡುವ ವೇಳೆ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

click me!