ಅಸೆಂಬ್ಲಿ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಖಚಿತಪಡಿಸಿದ ಎಚ್‌ಡಿಕೆ

By Kannadaprabha News  |  First Published Oct 22, 2022, 11:07 AM IST

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸ್ವತಃ ಕುಮಾರಸ್ವಾಮಿ ಅವರೇ ನಿಖಿಲ್‌ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.


ರಾಮ​ನ​ಗ​ರ (ಅ.22): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸ್ವತಃ ಕುಮಾರಸ್ವಾಮಿ ಅವರೇ ನಿಖಿಲ್‌ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ. ನಿಖಿಲ್‌ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂಬ ಪುಕಾರುಗಳಿದ್ದರೂ, ಎಲ್ಲಿಂದ ಕಣಕ್ಕಿಳಿಸಬೇಕೆಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರನ್ನು ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಕರೆಯುತ್ತಿದ್ದಾರೆ. ಅಂತಿಮವಾಗಿ ನಿಖಿಲ್‌ ಎಲ್ಲಿಂದ ಸ್ಪರ್ಧಿಸಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. 

ನಾನಂತು ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲ್ಲಿಸಿಕೊಂಡು ಬರುವಂತೆ ನಿಖಿಲ್‌ಗೆ ಸೂಚಿಸಿದ್ದೇನೆ ಎಂದು ರಾಮನಗರ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿ ಶುಕ್ರವಾರ ಪ್ರತಿಕ್ರಿಯಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ನಿಖಿಲ್‌, ಆ ಬಳಿಕ ಜೆಡಿಎಸ್‌ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲ ಸಮಯದಿಂದ ರಾಮನಗರ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳು ಎದ್ದಿದ್ದವು.

Tap to resize

Latest Videos

8 ಸಾವಿರ ಕೋಟಿ ಕೊಟ್ಟರೂ ಕೃತಜ್ಞರಾಗಲಿಲ್ಲ : ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಬೇಸರ

ರೈತರಿಗೆ ಅನ್ಯಾಯವಾದರೆ ಹೋರಾಟಕ್ಕೆ ಜೆಡಿಎಸ್‌ ಸಿದ್ಧ: ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೆ ಅವರ ಪರ ಹೋರಾಟಕ್ಕೆ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಸದಾ ಸಿದ್ಧವಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆ ಮಾರುಕಟ್ಟೆಆವರಣದಲ್ಲಿ ನಡೆದ ರೈತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ತಂಬಾಕು ಬೆಳೆಗಾರರ ಹೋರಾಟಕ್ಕೆ ನಮ್ಮ ಕುಟುಂಬದ ಹಿರಿಯರು ಹಿಂದಿನಿಂದಲೂ ಕೈಜೋಡಿಸಿದ್ದು, ರಾಜ್ಯದ ತಂಬಾಕು ಬೆಳೆಗಾರರಿಗೆ ಅನ್ಯಾಯವಾಗಲು ಜೆಡಿಎಸ್‌ ಬಿಡುವುದಿಲ್ಲ, ತಂಬಾಕು ಖರೀದಿ ಕಂಪನಿಗಳಿಗೆ ರೈತರು ಅನಿವಾರ್ಯವೇ ಹೊರತು ಕಂಪನಿಗಳು ರೈತರಿಗೆ ಅನಿವಾರ್ಯವಲ್ಲ, ಕಂಪನಿಗಳು ರೈತರಿಂದ ಲಾಭ ಪಡೆದು ಉದ್ದಾರವಾಗಿವೆ, ಹೊರತು ರೈತರ ಅಭಿವೃದ್ಧಿಯಾಗಿಲ್ಲ, ತಂಬಾಕು ರೈತರ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ತಾಲೂಕಿಗೆ ಆಗಮಿಸಿ ತಂಬಾಕು ರೈತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರೊಂದಿಗೆ ಸಭೆ ನಡೆಸುವ ವಿಷಯ ತಿಳಿದು ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಮಂದಿ ರೈತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಂಡಳಿ ಆವರಣ ಬಳಿ ಕಾದು ಕುಳಿತಿದ್ದು, ಅನ್ಯಕಾರ್ಯ ನಿಮಿತ್ತ ಎಚ್‌ಡಿಕೆ ಅವರು ಸಭೆಗೆ ಬರುತ್ತಿಲ್ಲ ಎಂಬ ವಿಷಯ ತಿಳಿದು ನಿರಾಶರಾದರು. ಸಭೆಯ ಮಧ್ಯೆ ದೂರವಾಣಿ ಕರೆಯ ಮೂಲಕ ಎಚ್‌ಡಿಕೆ ಅವರು ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರ ಮೇಲೆ ಲಾಠಿ ಚಾಜ್‌ರ್‍ ಮಾಡಿರುವುದು ಖಂಡನೀಯ, ಸದಾ ರೈತಪರ ನಿಲುವು ಹೊಂದಿರುವ ನಾವು ಮತ್ತು ನಮ್ಮ ಪಕ್ಷ ನಿಮ್ಮೊಂದಿಗೆ ಇದ್ದೇವೆ.

ಮಂಡ್ಯ :ಸುಮಲತಾ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ ನಿಖಿಲ್‌

ಮುಂದಿನ ದಿನಗಳಲ್ಲಿ ತಂಬಾಕು ಬೆಳೆಗಾರರನ್ನು ಖುದ್ದು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ಉತ್ತಮ ಬೆಲೆಕೊಡಿಸಲು ಹೋರಾಟ ನಡೆಸುತ್ತೇನೆ, ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳ ಸಭೆ ಪೂರ್ವ ನಿರ್ಧರಿತವಾದ್ದರಿಂದ ಸಭೆಗೆ ಗೈರಾಗಿದ್ದರು, ನಾನೆಂದೂ ರೈತಪರ ಅವರಿಗೆ ಅನ್ಯಾಯವಾಗಲು ಬಿಡಲ್ಲ ಎಂದರು. ಶಾಸಕ ಕೆ. ಮಹದೇವ್‌ ಅವರು ಮಾತನಾಡಿ, ತಾಲೂಕಿನ ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ, ಕಳೆದ ವಾರ ಮಾರುಕಟ್ಟೆಗೆ ಭೇಟಿ ನೀಡಿ ಖರೀದಿದಾರರು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಸಂದರ್ಭ ಯಾರು ನಿರೀಕ್ಷೆ ಮಾಡದೆ ಇರುವಷ್ಟುಬೆಲೆ ನೀಡುವ ಸುಳಿವು ದೊರೆತಿತ್ತು, ಆದರೆ ದಿಢೀರ್‌ ಬೆಲೆ ಕುಸಿತ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.

click me!