ದಾವಣಗೆರೆ ಪಾಲಿಕೆ ಅಧ್ಯಕ್ಷೆಯನ್ನು ಕೂಡಿ ಹಾಕುವ ಮೂಲಕ ಇಲ್ಲಿನ 31ನೇ ವಾರ್ಡ್ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದ್ದು, ಕಾನೂನು ತಜ್ಞರ ಜೊತೆಗೆ ಚರ್ಚಿಸಿ, ಈ ಎಲ್ಲರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪಾಲಿಕೆ ಬಿಜೆಪಿ ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ ಹೇಳಿದರು.
ದಾವಣಗೆರೆ (ಅ.22) : ದಾವಣಗೆರೆ ಪಾಲಿಕೆ ಅಧ್ಯಕ್ಷೆಯನ್ನು ಕೂಡಿ ಹಾಕುವ ಮೂಲಕ ಇಲ್ಲಿನ 31ನೇ ವಾರ್ಡ್ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದ್ದು, ಕಾನೂನು ತಜ್ಞರ ಜೊತೆಗೆ ಚರ್ಚಿಸಿ, ಈ ಎಲ್ಲರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪಾಲಿಕೆ ಬಿಜೆಪಿ ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ ಹೇಳಿದರು.
ದಾವಣಗೆರೆ: ಹೊಲಿಗೆ ಕೆಲಸಗಾರರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ, ಡಿಸಿಗೆ ಮನವಿ
ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಜಯಮ್ಮ ಗೋಪಿನಾಯ್ಕ 31ನೇ ವಾರ್ಡ್‌ಗೆ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಹೋಗಿದ್ದ ವೇಳೆ ಅಲ್ಲಿನ ಕಾಂಗ್ರೆಸ್ ಸದಸ್ಯ ಹಾಗೂ ಅದೇ ಪಕ್ಷದ ಕಾರ್ಯಕರ್ತರು ಕೂಡಿ ಹಾಕಲು ಪ್ರಯತ್ನಿಸಿ, ಗೂಂಡಾ ವರ್ತನೆ ತೋರಿದ್ದಾರೆ ಎಂದರು.
ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿ, ಮಹಿಳಾ ವಿರೋಧಿ ನಡೆಯನ್ನು ಮೇಯರ್ ಜೊತೆ ಆದ ಘಟನೆಯೇ ಪುಷ್ಟೀಕರಿಸುತ್ತದೆ. ಓರ್ವ ದಲಿತ ಮಹಿಳೆ ದಾವಣಗೆರೆ ಪ್ರಥಮ ಪ್ರಜೆಯಾಗಿದ್ದಾರೆಂಬ ಕನಿಷ್ಟಅರಿವು, ಜ್ಞಾನವೂ ಇಲ್ಲದಂತೆ ಪಾಲಿಕೆ ಕಾಂಗ್ರೆಸ್ ಸದಸ್ಯ ಪಾಮೇನಹಳ್ಳಿ ನಾಗರಾಜ ಹಾಗೂ ಅದೇ ಪಕ್ಷದ ಕಾರ್ಯಕರ್ತರು ವರ್ತಿಸುವ ಮೂಲಕ ಇಡೀ ಮಹಿಳಾ ಸಮೂಹಕ್ಕೆ ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು.
ಮಾತೆತ್ತಿದರೆ ಬಿಜೆಪಿಯವರ ಆಡಳಿತ ನಿಷ್ಕಿ್ರಯವಾಗಿದೆಯೆಂದು ಆರೋಪಿಸುವ ಕಾಂಗ್ರೆಸ್ಸಿನವರು ನಾವು ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಪರ, ಜನಪರ ಕೆಲಸ ಮಾಡಿದ್ದನ್ನು ಮರೆಯಬಾರದು. 2 ವರ್ಷದಲ್ಲಿ ರೈಲ್ವೇ ಅಂಡರ್ ಬ್ರಿಡ್ಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದೇವೆ. ಮಿಯಾವಾಕಿ ಪದ್ಧತಿಯಲ್ಲಿ ನಗರ ಅರಣ್ಯೀಕರಣಕ್ಕೆ ಚಾಲನೆ ನೀಡಲಾಗಿದೆ. ಹಂದಿ ಉಪಟಳ ತಡೆಗೆ ವರಹಾ ಶಾಲಾ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೀದಿ ನಾಯಿಗಳ ನಿರ್ಮೂಲನೆಗೆ ಸಂತಾನ ಹರಣ ಯೋಜನೆಗೆ ಚಾಲನೆ ನೀಡಲಾಗಿದೆ. ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಪಾಲಿಕೆ ಗಣಕೀಕರಣಕ್ಕೆ ಚಾಲನೆ ನೀಡಲಾಗಿದೆ. ಹೀಗೆ ಸಾಕಷ್ಟುಅಭಿವೃದ್ಧಿ ಕಾರ್ಯ ಮಹಾ ನಗರದಲ್ಲಿ ಆಗುತ್ತಿವೆ. 15ನೇ ಹಣಕಾಸು ಮಾರ್ಗಸೂಚಿಯನ್ವಯ ಎಲ್ಲಾ ವಾರ್ಡ್‌ಗಳ ಸದಸ್ಯರಿಗೂ ಹಣ ಹಂಚಿಕೆ ಮಾಡಲಾಗಿದೆ. ಅನುದಾನ ಹಂಚಿಕೆ ವಿಚಾರವನ್ನು ಕಾಂಗ್ರೆಸ್ಸಿನ ಸದಸ್ಯರ ಸಮಕ್ಷಮವೇ ಚರ್ಚಿಸಲಾಗಿದೆ. ವಾಸ್ತವ ಸ್ಥಿತಿ ಹೀಗಿದ್ದರೂ ಪುಕ್ಕಟೆ ಪ್ರಚಾರ ಪಡೆಯಲು ನಮ್ಮ ವಿರುದ್ಧ ಮಿಥ್ಯಾರೋಪ ಮಾಡಲಾಗುತ್ತಿದೆ. ಹೀಗೆ ಮುಂದುವರಿದರೆ ವಿಪಕ್ಷ ನಾಯಕರ ಸಮೇತ ಇಂತಹ ಸದಸ್ಯರೂ ಶಾಶ್ವತವಾಗಿ ಮನೆಗೆ ಹೋಗಬೇಕಾದೀತು ಎಂದು ಎಸ್.ಟಿ.ವೀರೇಶ ಎಚ್ಚರಿಸಿದರು.
ಮೇಯರ್ ಜಯಮ್ಮ ಗೋಪಿನಾಯ್ಕ ಮಾತನಾಡಿ, ಕಾಂಗ್ರೆಸ್ ಸದಸ್ಯ ಪಾಮೇನಹಳ್ಳಿ ನಾಗರಾಜ ವಾರ್ಡ್‌ನಲ್ಲಿ ಮೂಲಭೂತ ಸಮಸ್ಯೆ ಇದ್ದು, ಭೇಟಿ ನೀಡುವಂತೆ ಆಹ್ವಾನಿಸಿದ್ದರು. 2-3 ದಿನಗಳ ಹಿಂದೆ ತಾವು ಅಲ್ಲಿಗೆ ಭೇಟಿ ನೀಡಿದ್ದ ವೇಳೆ ತಮ್ಮನ್ನು ಹಾಗೂ ತಮ್ಮ ಜೊತೆಗೆ ಬಂದಿದ್ದ ಅಧಿಕಾರಿಗಳನ್ನು ಕೂಡಿ ಹಾಕುವ ಬೆದರಿಕೆಯೊಡ್ಡಿದ್ದಾರೆ. ಎಲ್ಲಾ ವಾರ್ಡ್‌ನಲ್ಲೂ ಸಮಸ್ಯೆ ಇರುತ್ತವೆ. ಅದರ ಬಗ್ಗೆ ಕುಳಿತು ಚರ್ಚಿಸಬೇಕು ಎಂದು ಹೇಳಿದರು.
ಸುಳ್ಳು ಆರೋಪ ಮಾಡುತ್ತಾ, ವಾರ್ಡ್‌ಗೆ ಭೇಟಿ ನೀಡುವುದಿಲ್ಲವೆನ್ನುವುದು ಎಷ್ಟರ ಮಟ್ಟಿಗೆ ಸರಿ? ನಾನು ಭೇಟಿ ನೀಡಿದ್ದ ವೇಳೆ ಹೀಗೆ ಗೂಂಡಾ ವರ್ತನೆ ತೋರಿದರೆ ಹೇಗೆ? ಅನುದಾನ ಹಂಚಿಕೆ ತಾರತಮ್ಯದ ಆರೋಪದಲ್ಲೂ ಹುರುಳಿಲ್ಲ ಎಂದರು.
ದಾವಣಗೆರೆ: ಪಾಲಿಕೆಯ ಇತಿಹಾಸದಲ್ಲೇ ಇಂತಹ ಕೆಟ್ಟ ಆಡಳಿತ ನೋಡಿಲ್ಲ, ಗಡಿಗುಡಾಳ್ ಮಂಜುನಾಥ್
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಗಾಯತ್ರಿ ಬಾಗಿ, ಸದಸ್ಯ ಆರ್.ಶಿವಾನಂದ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ.ಗೋಣೆಪ್ಪ, ರಾಕೇಶ ಜಾಧವ್, ಸದಸ್ಯರಾದ ಜೆ.ಎನ್.ಶ್ರೀನಿವಾಸ, ಕೆ.ಪ್ರಸನ್ನಕುಮಾರ ಇತರರು ಇದ್ದರು.
ನನ್ನ ಸೇರಿ ಬಿಜೆಪಿಯ 8ಕ್ಕೂ ಹೆಚ್ಚು ಸದಸ್ಯರು 15ನೇ ಹಣಕಾಸು ಯೋಜನೆ ಅನುದಾನ ಪಡೆದಿಲ್ಲ. ಮಹಾ ನಗರ ಪಾಲಿಕೆಯ ವಿಪಕ್ಷವಾದ ಕಾಂಗ್ರೆಸ್ಸಿನವರು ಆರೋಪಿಸಿದಂತೆ ತಾರತಮ್ಯ ಸಹ ಆಗಿಲ್ಲ.
ಜೆ.ಎನ್.ಶ್ರೀನಿವಾಸ, ಬಿಜೆಪಿ ಸದಸ್ಯ.
ದಾವಣಗೆರೆ ಉತ್ತರದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ ಕಾಂಗ್ರೆಸ್ಸಿನ ಸದಸ್ಯರ ವಾರ್ಡ್‌ಗೂ ಅನುದಾನ ನೀಡಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಅಲ್ಲಿನ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬಿಜೆಪಿ ಸದಸ್ಯರ 8 ವಾರ್ಡ್‌ಗಳಿಗೆ ಅನುದಾನವನ್ನೇ ನೀಡಿಲ್ಲ.
ಎಲ್.ಡಿ.ಗೋಣೆಪ್ಪ, ಬಿಜೆಪಿ ಸದಸ್ಯ,