ಕರ್ನಾಟಕ ವಿಧಾ​ನ​ಸಭಾ ಚುನಾವಣೆ: ಜೆಡಿಎಸ್‌ ಅಭ್ಯ​ರ್ಥಿ​ಗಳ ಪಟ್ಟಿ ಶೀಘ್ರದಲ್ಲೇ ಫೈನಲ್‌, ಕುಮಾ​ರಸ್ವಾ​ಮಿ

By Kannadaprabha News  |  First Published Oct 22, 2022, 3:30 AM IST

ಟಿ.ನ​ರ​ಸೀ​ಪುರ, ಪಿರಿ​ಯಾ​ಪ​ಟ್ಟಣ ಕ್ಷೇತ್ರ​ದಲ್ಲಿ ಹಾಲಿ ಶಾಸ​ಕ​ರಿಗೆ ಟಿಕೆಟ್‌, ಎಚ್‌.ಡಿ.​ಕೋ​ಟೆ​ಯಲ್ಲಿ ಇಬ್ಬರು ಆಕಾಂಕ್ಷಿ​ತ​ರಿಗೆ ಒಮ್ಮತದ ತೀರ್ಮಾ​ನಕ್ಕೆ ಸೂಚನೆ, ನಿಖಿಲ್‌ ಸ್ಪರ್ಧೆ  ಕುರಿತು ಪಕ್ಷ ತೀರ್ಮಾನ: ಎಚ್‌ಡಿಕೆ 


ರಾಮ​ನ​ಗ​ರ(ಅ.22): ಮೈಸೂರು ಭಾಗದ ವಿಧಾ​ನ​ಸಭಾ ಕ್ಷೇತ್ರದ ಜೆಡಿ​ಎಸ್‌ ಅಭ್ಯ​ರ್ಥಿಗಳ ಪಟ್ಟಿ​ಯನ್ನು 15ರಿಂದ 20 ದಿನ​ದೊ​ಳಗೆ ಫೈನಲ್‌ ಮಾಡ​ಲಾ​ಗು​ವುದು ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರಸ್ವಾ​ಮಿ ಸ್ಪಷ್ಟಪಡಿಸಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಇನ್ನೂ ಯಾವುದೇ ಕ್ಷೇತ್ರ​ಗಳ ಪಕ್ಷದ ಅಭ್ಯ​ರ್ಥಿಗಳ ಪಟ್ಟಿ ತಯಾ​ರಾ​ಗಿ ಅಂತಿ​ಮ​ಗೊಂಡಿಲ್ಲ. ಶಾಸಕ ಜಿ.ಟಿ.​ದೇ​ವೇ​ಗೌ​ಡರು ಪ್ರಕ​ಟಿ​ಸಿ​ರುವ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಪರಿ​ಶೀ​ಲಿಸಿ ಫೈನಲ್‌ ಮಾಡ​ಲಾ​ಗು​ವುದು. ಟಿ.ನರಸೀಪುರ, ಪಿರಿಯಾಪಟ್ಟಣ ಕ್ಷೇತ್ರ​ದಲ್ಲಿ ಹಾಲಿ ಶಾಸ​ಕರಿದ್ದಾರೆ. ಚಾಮುಂಡೇ​ಶ್ವರಿ ಕ್ಷೇತ್ರ​ದಿಂದ ಜಿ.ಟಿ.ದೇವೇಗೌಡ ಸ್ಪರ್ಧಿ​ಸು​ವರು. ಹುಣಸೂರು ಕ್ಷೇತ್ರ​ದ​ಲ್ಲಿ ಹರೀಶ್‌ಗೌಡ ಅವ​ರನ್ನು ನಿಲ್ಲಿಸುವ ನಿರ್ಣಯ ಆಗಿದೆ. ಇನ್ನು ಎಚ್‌.ಡಿ.ಕೋಟೆ ಕ್ಷೇತ್ರ​ದಲ್ಲಿ ಇಬ್ಬರು ಆಕಾಂಕ್ಷಿ​ಗ​ಳಿದ್ದು, ಒಮ್ಮತದ ತೀರ್ಮಾನಕ್ಕೆ ಬರುವಂತೆ ಇಬ್ಬ​ರಿಗೂ ತಿಳಿಸಿದ್ದೇನೆ. 15-20 ದಿನಗಳ ಒಳಗೆ ಮಾಹಿತಿ ಪಡೆದು ಅ​ಭ್ಯ​ರ್ಥಿ​ಗಳ ಪಟ್ಟಿ ಫೈನಲ್‌ ಮಾಡು​ತ್ತೇನೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಹೇಳಿ​ದರು.

Tap to resize

Latest Videos

ಮೈತ್ರಿ ಅನಿವಾರ್ಯ ಎಂದು ನಮ್ಮನ್ನು ಟೀಕಿಸುತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ರಾಮ​ನ​ಗರ ಕ್ಷೇತ್ರ​ದಿಂದ ನಿಖಿಲ್‌ ಕುಮಾ​ರ​ಸ್ವಾಮಿ ಸ್ಪರ್ಧೆ ಮಾಡು​ತ್ತಾ​ರೆಯೆ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಕುಮಾ​ರ​ಸ್ವಾಮಿ, ಹಲವಾರು ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕರೆಯುತ್ತಿದ್ದಾರೆ. ನಾನು ಎಲ್ಲಾ ಕ್ಷೇತ್ತಗಳಲ್ಲು ಜೆಡಿಎಸ್‌ ಗೆಲ್ಲಿಸಿಕೊಂಡು ಬರಬೇಕೆಂದುನಿಖಿಲ್‌ಗೆ ಹೇಳಿದ್ದೇನೆ. ಅಂತಿಮವಾಗಿ ಎಲ್ಲಿ ನಿಲ್ಲಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದ​ರು.

ಈಗಲ್‌ಟನ್‌ನಲ್ಲಿ ಚನ್ನ​ಪ​ಟ್ಟಣ ಕ್ಷೇತ್ರದ ಮುಖಂಡರು ಮತ್ತು ಕಾರ್ಯ​ಕ​ರ್ತರ ಸಭೆ ಕರೆ​ಯ​ಲಾ​ಗಿದೆ. ಕ್ಷೇತ್ರದ ಜವಾ​ಬ್ದಾರಿ ತೆಗೆ​ದು​ಕೊಂಡು ಪಕ್ಷ ಸಂಘ​ಟನೆ ಮಾಡುವ ಕುರಿತು ಚರ್ಚಿ​ಸಲು ಪ್ರತಿ ಹಳ್ಳಿಯಿಂದ ಪ್ರಮುಖ ಮುಖಂಡರು ಮತ್ತು ಕಾರ್ಯ​ಕ​ರ್ತರನ್ನು ಬರಲು ಹೇಳಿದ್ದೇನೆ. ನವೆಂಬರ್‌ 1ರಿಂದ ಪಂಚರತ್ನ ಯೋಜನೆ ಕಾರ್ಯಕ್ರಮವಿದೆ. ಇಡಿ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ 120 ದಿನಗಳ ಕಾಲ ನಡೆಯಲಿದೆ. ಹೀಗಾಗಿ ಕ್ಷೇತ್ರಕ್ಕೆ ಪದೇ ಪದೆ ಬರಲು ಸಾಧ್ಯ ವಿಲ್ಲ. ಕಾರ್ಯಕರ್ತರೆ ಜವಾಬ್ದಾರಿ ವಹಿಸುವ ಸೂಚನೆ ನೀಡಲು ಕರೆದಿದ್ದೇನೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ನನ್ನ ಗಮನಕ್ಕೆ ಬಂದ ಕೂಡಲೇ ಬಗೆಹರಿಸುತ್ತೇನೆ ಎಂದು ಹೇಳಿ​ದರು.

ಈ ವೇಳೆ ಶಾಸಕ ಎ.ಮಂಜುನಾಥ್‌, ವಿಧಾನ ಪರಿ​ಷತ್‌ ಮಾಜಿ ಸದಸ್ಯ ರಮೇಶ್‌, ವಿ.ಜಿ.ದೊಡ್ಡಿ ಲೋಕೇಶ್‌, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್‌, ಬೆಳಗುಂಬ ಗ್ರಾಪಂ ಅಧ್ಯಕ್ಷ ಕೋಟಪ್ಪ, ಮಂಚನಬೆಲೆ ಲೋಕೇಶ್‌, ಚಂದ್ರಶೇಖರ್‌ ಇತರರಿದ್ದರು.
 

click me!