ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದಿದ್ದಾರೆ. ನಗರದ ಮಯೂರ ವೃತ್ತದಲ್ಲಿ ಇರುವ ಬಿಜೆಪಿ ಸೇವಾ ಸೌಧದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿಡ್ಲಘಟ್ಟ (ಸೆ.15): ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದಿದ್ದಾರೆ. ನಗರದ ಮಯೂರ ವೃತ್ತದಲ್ಲಿ ಇರುವ ಬಿಜೆಪಿ ಸೇವಾ ಸೌಧದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಕ್ಕೆ 28 ಸೀಟು ಗೆದ್ದು ಮೋದಿಜೀ ಯವರಿಗೆ ಕೈಬಲ ಪಡಿಸಬೇಕು ಏಕೆಂದರೆ ಭಾರತಕ್ಕೆ ಸದೃಢವಾದ ಆಡಳಿತ ನೀಡುತ್ತಿರುವ ಮೋದಿ ಸರ್ಕಾರವನ್ನು ದೇಶದ ಜನತೆ ಬಯಸುತ್ತಿದ್ದು, ಇಂಡಿಯಾ ಒಕ್ಕೂಟ ರಚಿಸಿರುವ ವಿಪಕ್ಷಗಳ ಆಟ ನಡೆಯುವುದಿಲ್ಲ ಎಂದರಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆಯೆಂದು ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷದ ರಾಜ್ಯ ನಾಯಕರು ಗೌರಿ ಗಣೇಶ ಹಬ್ಬದ ಬಳಿಕ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡಮಲೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಸಭಾ ಚುಣಾವಣೆಯ ದೃಷ್ಟಿಯಿಂದ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಆ ಮೂಲಕ ಪ್ರಧಾನಿ ಮೋದಿ ರವರ 9 ವರ್ಷಗಳ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯದ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆಯು ನಾವು ಜನಾಂದೋಲನ ನಡೆಸಲಿದ್ದೇವೆಂದು ಮುನಿಸ್ವಾಮಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?
ಸೇವಾ ಕಾರ್ಯಗಳಿಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ 17ರಂದು ಜನಪ್ರಿಯ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ , ಬಸವರಾಜ್ ಬೊಮ್ಮಾಯಿ , ಸದಾನಂದಗೌಡ ಸೇರಿದಂತೆ ಬಿಜೆಪಿ ರಾಜಾಧ್ಯಕ್ಷರಾದ ನವೀನ್ ಕುಮಾರ್ ಕಟೀಲ್ , ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡಮಲೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡುತ್ತಾರೆ. ರಕ್ತದಾನ ಶಿಬಿರ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ವಿತರಿಸಲಾಗುವುದು. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರೀಯ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಅವಮಾನ: ಕ್ಯಾಂಪಸ್‌ನಲ್ಲಿ ಪರ-ವಿರುದ್ದ ಹೋರಾಟ
ಬೀದಿ ಬದಿಯ ವ್ಯಾಪಾರಸ್ಥರಿಗೆ ಮೊದಲಿಗೆ ಹತ್ತು ಸಾವಿರ ರೂಪಾಯಿಗಳಂತೆ ನೀಡುತ್ತೇವೆ ನಂತರ ಇಪ್ಪತ್ತು ಸಾವಿರ ರೂಪಾಯಿ ಅದನ್ನು ಸರಿಯಾಗಿ ಮರುಪಾವತಿ ಮಾಡಿದರೆ ಐವತ್ತು ಸಾವಿರ ಮೊತ್ತದ ಸಾಲವನ್ನು ನೀಡಲಾಗುವುದು ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಇದೇ ವೇಳೆ ಸಂಸದರು ತಿಳಿಸಿದರು.ಸಮಾಜ ಸೇವಕ ಸೀಕಲ್ ರಾಮಚಂದ್ರ ಗೌಡ ,ಚಿಂತಾಮಣಿ ವೇಣು , ರಮೇಶ್ ಬಾಯಿರಿ , ಅರಿಕೆರೆ ಮುನಿರಾಜು , ನಂದೀಶ್ , ಆನಂದ್ ಗೌಡ , ಕನಕಪ್ರಸಾದ್ , ಸುರೇಶ್ ಮತ್ತಿತರರು ಹಾಜರಿದ್ದರು.