ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?

By Govindaraj S  |  First Published Sep 15, 2023, 10:03 PM IST

ತಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ನೀಡುವ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟದ್ದು. ರಾಜ್ಯದ ಕಾಂಗ್ರೆಸ್ ಸರ್ಕಾರ ಬರಗಾಲಪೀಡಿತ ರೈತರ ನೆರವಿಗೆ ಬಾರದೆ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ.


ಶಿವಮೊಗ್ಗ (ಸೆ.15): ತಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ನೀಡುವ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟದ್ದು. ರಾಜ್ಯದ ಕಾಂಗ್ರೆಸ್ ಸರ್ಕಾರ ಬರಗಾಲಪೀಡಿತ ರೈತರ ನೆರವಿಗೆ ಬಾರದೆ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ. ಸಚಿವ ಡಿ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗದರೂ ಇನ್ನೂ ಬಂಧನವಾಗಿಲ್ಲ ಯಾಕೆ ಎಂದು ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಮತ್ತು ಹಿರೇ ಕೊರಲಹಳ್ಳಿ ಗ್ರಾಮಗಳಲ್ಲಿ ನಮ್ಮ ದೇಶ ನಮ್ಮ ಮಣ್ಣು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಯೋಧರ ಮನೆಗಳಿಗೆ ತೆರಳಿ  ಮಣ್ಣು ಸಂಗ್ರಹ ಮಾಡಿ ಶಾಸಕ ಬಿ ವೈ ವಿಜೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. 

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಪ್ರಸಕ್ತ ರಾಜಕೀಯ ವಿಚಾರ ಗಳ ಕುರಿತು ಮಾತನಾಡಿದರು. ಸಚಿವ ಡಿ ಸುಧಾಕರ್ ಮೇಲೆ  ಎಫ್ಐಆರ್ ದಾಖಲು ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿ,  ಸಚಿವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪದಲ್ಲಿ ಹುರುಳಿಲ್ಲ ಎಂದು ಡಿಸಿಎಂ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಸಚಿವರು ತಪ್ಪೇ ಮಾಡಿಲ್ಲ ಎಂದು ಡಿಸಿಎಂ ಕ್ಲೀನ್ ಚಿಟ್ ಕೊಟ್ಟಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಒಂದು ಕಡೆ ದಲಿತರ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ಸಿಗರ ಕಪಟ ನಾಟಕ ರಾಜ್ಯದ ಜನತೆಗೆ ಗೊತ್ತಾಗಿದೆ. ಸಚಿವರ ಬಂಧನ ಮಾಡಲು ಯಾಕೆ ಇಷ್ಟು ತಡ ಮಾಡುತ್ತಿದ್ದಾರೆ. 

Latest Videos

undefined

ಕಾಂಗ್ರೆಸ್‌ ರಾಜಕಾರಣ ಸಂಪೂರ್ಣ ಬಡವರ ಪರ: ಸಚಿವ ಮಧು ಬಂಗಾರಪ್ಪ

ದಲಿತರನ್ನು ಅವಹೇಳನ ಮಾಡುವ ಸಚಿವರನ್ನು ಇಟ್ಟುಕೊಂಡು ಸರ್ಕಾರ ನಡೆಸುತ್ತಾರೆಂದರೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.  ರಾಜ್ಯದ ಜನ ಬರಗಾಲದ ಹಿನ್ನೆಲೆ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಸರ್ಕಾರ ಗ್ಯಾರಂಟಿಗಳ ಭರಾಟೆಯಲ್ಲಿ ಬರಗಾಲ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿದೆ. ಕ್ಯಾಬಿನೆಟ್ ಉಪ ಸಮಿತಿಯ ತೀರ್ಮಾನದಂತೆ 194 ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಘೋಷಣೆ ಮಾಡಿ ಕೇಂದ್ರಕ್ಕೆ ಕಳಿಸಿದರೆ ಸಾಲದು. ರಾಜ್ಯ ಸರ್ಕಾರದ ಕರ್ತವ್ಯವೇನು ನಿಮ್ಮ ಕರ್ತವ್ಯದಿಂದ ಓಡಿ ಹೋಗುವ ಕೆಲಸ ಮಾಡದೀರಿ. 

ಕೇಂದ್ರ ಸರ್ಕಾರ ಏನ್ ಡಿ ಆರ್ ಎಸ್ ನಿಯಮಾವಳಿಗಳನ್ನು ಸಡಿಲಗೊಳಿಸಬೇಕೆಂದು ಪತ್ರ ಬರೆಯುತ್ತೀರಾ.‌ಆದರೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ. ಬಿಎಸ್ ವೈ ಅಧಿಕಾರಾವಧಿಯಲ್ಲಿ ಅತಿವೃಷ್ಟಿ ಆದಾಗ ಕೇಂದ್ರ ಪರಿಹಾರಕ್ಕೆ ಕಾಯದೆ ಮನೆ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರದ ಒಂದೂಕಾಲು ಲಕ್ಷ ಪರಿಹಾರ ದೊಂದಿಗೆ ರಾಜ್ಯದಿಂದ ಮೂರು ಮುಕ್ಕಾಲು ಲಕ್ಷ ಪರಿಹಾರ ನೀಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ತೋರಿಸಿ ಮಾಡುವ ಕೆಲಸ ಬಿಟ್ಟು ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಶೋಭೆ ತರುವುದಿಲ್ಲ. 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೊನ್ನೆ ಗ್ಯಾರಂಟಿ: ಕೆ.ಎಸ್‌.ಈಶ್ವರಪ್ಪ ಭವಿಷ್ಯ

ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದರು.  ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿಸದ್ಯ ಶಿಕಾರಿಪುರದ ಶಾಸಕನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಯಾವುದೇ ಸ್ಥಾನಮಾನದ ಜವಾಬ್ದಾರಿ ನೀಡುವುದು ವರಿಷ್ಠರಿಗೆ ಬಿಟ್ಟದ್ದು ಎಂದರು.  ಹಾಗೆಯೇ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಹಿನ್ನೆಲೆ ಶಿಕಾರಿಪುರ ತಾಲೂಕಿನ ಚುಚ್ಚುಗುಂಡಿ ಹಿರೇ ಕೊರಲಹಳ್ಳಿ ಗ್ರಾಮಗಳಲ್ಲಿ ಮಣ್ಣನ್ನು ಸಂಗ್ರಹಿಸಿದ್ದೇನೆ. ಇದೇ ರೀತಿ ಶಿಕಾರಿಪುರ ತಾಲೂಕಿನ 41 ಗ್ರಾಮಗಳಲ್ಲೂ ಮಣ್ಣಿನ ಸಂಗ್ರಹ ಕಾರ್ಯ ನಡೆದಿದೆ ಎಂದರು.

click me!