ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ಟಿಕೆಟ್​ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಕೊಪ್ಪಳದ ಬಿಜೆಪಿ ಮುಖಂಡ

By Govindaraj SFirst Published Sep 15, 2023, 8:36 PM IST
Highlights

ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೆ ಕೊಪ್ಪಳ ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಪತಿಗೆ ಲಕ್ಷ ಲಕ್ಷ ಟೋಪಿ ಹಾಕಿದ ಘಟನೆ ನಡೆದಿದೆ. ಪತ್ನಿಯ ಬಿಜೆಪಿ ಟಿಕೆಟ್ ಗಾಗಿ ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. 

ಕೊಪ್ಪಳ (ಸೆ.15): ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೆ ಕೊಪ್ಪಳ ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಪತಿಗೆ ಲಕ್ಷ ಲಕ್ಷ ಟೋಪಿ ಹಾಕಿದ ಘಟನೆ ನಡೆದಿದೆ. ಪತ್ನಿಯ ಬಿಜೆಪಿ ಟಿಕೆಟ್ ಗಾಗಿ ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಲಕ್ಷ ಲಕ್ಷ ಕಳೆದುಕೊಂಡಿದ್ದಾರೆ. ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ, ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಮೊದಲಿಗೆ ತರುತ್ತೇವೆಂದು ವಂಚನೆ ಮಾಡಲಾಗಿದೆ. 

ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಭಾರಿ ಪ್ರಯತ್ನ ಮಾಡಿದ್ದರು. ಈ ವೇಳೆ ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ತರುತ್ತೇವೆ ಎಂದು ಮೂವರು ವಂಚಿಸಿದ್ದಾರೆ. ಸರ್ವೆಯಲ್ಲಿ ನಿಮ್ಮ ಪತ್ನಿಯವರ ಹೆಸರು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನಕ್ಕೆ ತರಲು 25 ಲಕ್ಷ ಹಣಕ್ಕೆ ಟೀಂ ಬೇಡಿಕೆ ಇಟ್ಟಿದ್ದರು. ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೆ ವಂಚನೆ ಮಾಡಲಾಗಿದ್ದು, ದೆಹಲಿ ಮೂಲದ ವಿಶಾಲ್ ನಾಗರ್ ವಂಚಿಸಿದ್ದಾನೆ. ಬರೋಬ್ಬರಿ 21 ಲಕ್ಷ ಹಣವನ್ನು ತಿಮ್ಮಾರೆಡ್ಡಿ ನೀಡಿದ್ದಾರೆ.

ಮೂವರ ವಿರುದ್ದ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ಜೂನ್ ತಿಂಗಳಲ್ಲಿ ದೂರನ್ನು ತಿಮ್ಮಾರೆಡ್ಡಿ ದಾಖಲಿಸಿದ್ದಾರೆ. ತಮಗೆ ಅಮಿತ್ ಶಾ ಪರಿಚಯವೆಂದು ವಂಚನೆ ಮಾಡಲಾಗಿದ್ದು, ರಾಜ್ಯದಲ್ಲಿ ಸಮೀಕ್ಷೆ ಮಾಡ್ತಿದ್ದೆವೆ, ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೆವೆಂದಿದ್ದ ವಂಚಕರು, ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥನೆಂದು ವಿಶಾಲ್ ನಾಗ್ ಪರಿಚಯಿಸಿಕೊಂಡಿದ್ದ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಲು ಬದ್ದ: ಸಚಿವ ದಿನೇಶ್ ಗುಂಡೂರಾವ್

ಹೀಗಾಗೇ ಆತನನ್ನ ನಂಬಿ ವಿಶಾಲ್  ನಾಗರ್ ಗೆ 21  ಲಕ್ಷ ನೀಡಿದ್ದ ಆಕಾಂಕ್ಷಿಯ ಪತಿ. ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ದೂರು ನೀಡಲಾಗಿದ್ದು, ನನ್ನ ರೀತಿಯೇ ಬಹಳ ಜನರಿಗೆ ಮೋಸ ಮಾಡಿದ್ದಾನೆ ಎಂದು ತಿಮ್ಮಾರೆಡ್ಡಿ ಆರೋಪ ಮಾಡಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ  ಆಕಾಂಕ್ಷಿಗಳು? ಕೋಟ್ಯಂತರ ಹಣ ಕಳೆದುಕೊಂಡಿದ್ದು, ಬಗೆದೆಷ್ಟು ಜೆಪಿ ಟಿಕೆಟ್ ಗಾಗಿ ನಡೆದ ಡೀಲ್ ಪ್ರಕರಣಗಳು ಹೊರಬರುತ್ತಿದೆ.

click me!