ವಿಶ್ವವೇ ಭಾರತದತ್ತ ಕಣ್ತೆರೆದು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ತೇಜಸ್ವಿ ಸೂರ್ಯ

By Kannadaprabha News  |  First Published Mar 30, 2023, 12:25 PM IST

 ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಎಂಟೇ ವರ್ಷದಲ್ಲಿ ದೇಶ ಕಾಣದ ಅಭಿವೃದ್ಧಿಯನ್ನು ಸಾಧಿಸಿದೆ. ಈಗ ವಿಶ್ವವೇ ಭಾರತದತ್ತ ಕಣ್ತೆರೆದು ನೋಡುತ್ತಿದೆ ಎಂದು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಶ್ವಿ ಸೂರ್ಯ(MP Tejasvi surya) ಹೇಳಿದರು.


ನರೇಗಲ್ಲ (ಮಾ.30) : ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಎಂಟೇ ವರ್ಷದಲ್ಲಿ ದೇಶ ಕಾಣದ ಅಭಿವೃದ್ಧಿಯನ್ನು ಸಾಧಿಸಿದೆ. ಈಗ ವಿಶ್ವವೇ ಭಾರತದತ್ತ ಕಣ್ತೆರೆದು ನೋಡುತ್ತಿದೆ ಎಂದು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಶ್ವಿ ಸೂರ್ಯ(MP Tejasvi surya) ಹೇಳಿದರು.

ಪಟ್ಟಣದ ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯ ಪಕ್ಕದ ಬಯಲು ಜಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿಯ ಯುವ ಚೈತನ್ಯ ಸಮಾವೇಶ(BJP Yuva chaitanya convention)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

undefined

ಮೇ.13 ರಂದು ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ: ಸಂಸದ ತೇಜಸ್ವಿ ಸೂರ್ಯ

ಭರವಸೆ ನೀಡುತ್ತಲೇ ರಾಜಕೀಯದಲ್ಲಿ ಮುನ್ನುಗ್ಗುತ್ತಿರುವವರಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಬೇಕು. ನಾಡಿನ ಉಳಿವಿಗಾಗಿ ಮತ್ತೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಕೈ ಬಲಪಡಿಸಬೇಕು. ಈ ಬಾರಿ ಪ್ರತಿಯೊಬ್ಬರೂ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಹೇಳಿದರು.

ನೀವೆಲ್ಲೋ ಒಂದು ಮೂಲೆಯಿಂದ ಹಾಕುವ ಒಂದು ಮತ ಈ ದೇಶದ ಚಿತ್ರಣವನ್ನು ರೂಪಿಸುತ್ತದೆ. ಇದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಂಡು ಈ ಬಾರಿ ಮತದಾನ ಮಾಡಬೇಕಿದೆ ಎಂದು ಹೇಳಿದರು.

ಈ ದೇಶದಲ್ಲಿ ಕೊಟ್ಟಮಾತಿನಂತೆ ನಡೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ ಪಕ್ಷ ಮಾತ್ರ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಅನ್ಯ ಪಕ್ಷದ ಮುಖಂಡರು ಗ್ಯಾರಂಟಿ ಕಾರ್ಡ್‌ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರವೇ ಬರುವುದು ಗ್ಯಾರಂಟಿ ಇಲ್ಲ ಎಂದು ಸೂಕ್ಷ್ಮವಾಗಿ ತಿವಿದರು.

ಸೂರಿಲ್ಲದವರಿಗೆ ಸೂರು, ಉಜ್ವಲ ಯೋಜನೆ ಅಡಿ ಗ್ಯಾಸ್‌ ಸಿಲಿಂಡರ್‌, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಹೀಗೆ ನೂರಾರು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸದಾ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಡಬಲ್‌ ಎಂಜಿನ್‌ನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದರು.

ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು..!

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವು ಹಿರೇಮನಿ, ತಾಲೂಕು ಯುವ ಘಟಕದ ಅಧ್ಯಕ್ಷ ರವಿ ದೇಶಣ್ಣವರ, ರಾಜ್ಯ ಕಾರ್ಯಾಕಾರಿಣಿ ಸದಸ್ಯ ಪವನ ಮೇಟಿ, ರೋಣ ತಾಲೂಕಾ ಮಂಡಳದ ಅಧ್ಯಕ್ಷ ಮುತ್ತಣ್ಣ ಕಡಗದ, ರಾಜ್ಯ ಅಲ್ಪ ಸಂಖ್ಯಾತರ ಮೋರ್ಚಾದ ಕಾರ್ಯದರ್ಶಿ ರವಿ ದಂಡೀನ, ಉಮೇಶ ಮಲ್ಲಾಪುರ, ನರೇಗಲ್ಲ ಘಟಕದ ಅಧ್ಯಕ್ಷ ಉಮೇಶ ಸಂಗನಾಳಮಠ, ಯುವ ಘಟಕದ ಅಧ್ಯಕ್ಷ ಬಸವರಾಜ ವಂಕಲಕುಂಟಿ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಚಲವಾದಿ, ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ ಮತ್ತಿತರರಿದ್ದರು.

click me!