ಕೇಂದ್ರ ಬಜೆಟ್‌ ಮಂಡನೆಗೂ ಮುನ್ನವೇ ಕಿಂಗ್‌ಮೇಕರ್ ಬಿಹಾರ ಸಿಎಂಗೆ ಶಾಕ್ ಕೊಟ್ಟ ಪಿಎಂ ಮೋದಿ

By Kannadaprabha NewsFirst Published Jul 23, 2024, 10:15 AM IST
Highlights

ವಿಶೇಷ ಸ್ಥಾನಮಾನ ನೀಡಲು ಅಗತ್ಯವಾದ ವ್ಯಾಪ್ತಿಯಲ್ಲಿ ಬಿಹಾರ ಬರುವುದಿಲ್ಲ ಎಂದು 2012ರಲ್ಲಿ ಸರ್ಕಾರ ರಚಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಹೀಗಾಗಿ ಅಂಥ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ.

ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ಅಳಿವು- ಉಳಿವು ನಿರ್ಧರಿಸಿರುವ ಸಾಮರ್ಥ್ಯ ಹೊಂದಿರುವ ಜೆಡಿಯುಗೆ ಬಿಗ್ ಶಾಕ್ ಎದುರಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಪ್ರಸ್ತಾಪ ಇದೆಯೇ ಎಂಬ ಜೆಡಿಯು ಸಂಸದ ರಾಮ್‌ಪ್ರೀತ್‌ ಮಂಡಲ್‌ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ, ವಿಶೇಷ ಸ್ಥಾನಮಾನ ನೀಡಲು ಅಗತ್ಯವಾದ ವ್ಯಾಪ್ತಿಯಲ್ಲಿ ಬಿಹಾರ ಬರುವುದಿಲ್ಲ ಎಂದು 2012ರಲ್ಲಿ ಸರ್ಕಾರ ರಚಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಹೀಗಾಗಿ ಅಂಥ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಹೇಳಿದೆ. 

ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಜೆಡಿಯು ಬಜೆಟ್‌ನಲ್ಲಿ 45000 ಕೋಟಿ ರು. ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಸರ್ಕಾರ ಈ ಮಾಹಿತಿ ನೀಡಿದೆ. ಈ ನಡುವೆ ಸರ್ಕಾರದ ಹೇಳಿಕೆಯನ್ನು ವಿಪಕ್ಷ ಆರ್‌ಜೆಡಿ ಕಟುವಾಗಿ ಟೀಕಿಸಿದೆ.

ಸೂಟ್‌ಕೇಸ್‌ನಿಂದ ಡಿಜಿಟಲ್, ಭಾರತದಲ್ಲಿ ಬಜೆಟ್‌ ನಡೆದು ಬಂದ ಹಾದಿ, ಆರ್ಥಿಕತೆ ಬದಲಿಸಿದ ನೀತಿಗಳ ಮಾಹಿತಿ ಇಲ್ಲಿದೆ

Latest Videos

ಲೋಕಸಭೆಯಲ್ಲಿ 12 ಸ್ಥಾನ ಹೊಂದಿರುವ ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಬೇಡಿಕೆಯನ್ನು ಪಕ್ಷ ಇರಿಸಿತ್ತು. ಒಂದು ವೇಳೆ ವಿಶೇಷ ಸ್ಥಾನಮಾನ ಸಾಧ್ಯವಾಗದೇ ಹೋದರೆ ವಿಶೇಷ ಪ್ಯಾಕೇಜ್‌ ನೀಡುವ ವಿಧಾನವನ್ನೂ ಪರಿಗಣಿಸಬಹುದು ಎಂದು ಸಲಹೆ ನೀಡಿತ್ತು.

ಇಂದಿನ ಇಂಡಿಯಾ ಕೂಟದ ಭಾಗವಾಗಿದ್ದ ಜೆಡಿಯು ಜಾರಿಗೊಳಿಸಿದ್ದ ಒಬಿಸಿ, ಎಸ್ಸಿಎಸ್ಟಿ ಸಮುದಾಯಕ್ಕೆ ಶೇ.65ರಷ್ಟು ಮೀಸಲು ಆದೇಶವನ್ನು ಇತ್ತೀಚೆಗೆ ಹೈಕೋರ್ಟ್‌ ವಜಾ ಮಾಡಿತ್ತು. ಇದು 2025ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಯುಗೆ ಶಾಕ್‌ ನೀಡಿತ್ತು. ಹೀಗಾಗಿ ಜನರ ಮುಂದೆ ಮತ್ತೊಮ್ಮೆ ತೆರಳುವ ಮುನ್ನ ವಿಶೇಷ ಸ್ಥಾನಮಾನ ಅಥವಾ ಹಣಕಾಸು ಪ್ಯಾಕೇಜ್‌ ಪಡೆಯುವ ಪಟ್ಟನ್ನು ಕೇಂದ್ರದ ಮುಂದೆ ಜೆಡಿಯು ಇರಿಸಿತ್ತು. ಇದರ ಜೊತೆಗೆ ಸಂವಿಧಾನದ 9ನೇ ಪರಿಚ್ಛೇದಲ್ಲಿ ಒಬಿಸಿ, ಅತ್ಯಂತ ಹಿಂದುಳಿದ ಸಮುದಾಯ, ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲು ನೀಡುವ ಅಂಶ ಸೇರಿಸುವ ಬಗ್ಗೆಯೂ ಒತ್ತಾಯ ಮಾಡಿತ್ತು.

ಬಜೆಟ್‌ಗಿದೆ 164 ವರ್ಷಗಳ ಇತಿಹಾಸ, ಇಂದು ಸಂಸತ್‌ನಲ್ಲಿ 88ನೇ ಕೇಂದ್ರ ಬಜೆಟ್‌ ಮಂಡನೆ ।

click me!