ಸೂಟ್‌ಕೇಸ್‌ನಿಂದ ಡಿಜಿಟಲ್, ಭಾರತದಲ್ಲಿ ಬಜೆಟ್ ನಡೆದು ಬಂದ ಹಾದಿ, ಆರ್ಥಿಕತೆ ಬದಲಿಸಿದ ನೀತಿಗಳ ಮಾಹಿತಿ ಇಲ್ಲಿದೆ
ದೇಶದಲ್ಲಿ ಮೊದಲ ಬಾರಿಗೆ 1947ರ ನ.26ರಂದು ಕೇಂದ್ರದ ಮೊದಲ ಬಜೆಟ್‌ಗೆ ಸಾಕ್ಷಿಯಾಗಿತ್ತು. ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಅಂದು ದೇಶದ ಪ್ರಪ್ರಥಮ ಆಯವ್ಯಯ ಮಂಡಿಸಿದ್ದರು.
ನವದೆಹಲಿ: ಮೊದಲಿಗೆ ಬಜೆಟ್ ಪ್ರತಿಯನ್ನು ಸೂಟ್‌ಕೇಸ್‌ನಲ್ಲಿ ತಂದು ಮಂಡಿಸುವ ಪರಿಪಾಠವಿತ್ತು. ಆದರೆ 2019ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವೆಯಾದ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಬ್ರೀಫ್‌ಕೇಸ್ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ, ಸಾಂಪ್ರದಾಯಿಕ ಲೆಡ್ಜರ್‌ನಲ್ಲಿ ಬಜೆಟ್ ಪತ್ರ ತಂದಿದ್ದರು. 2021ರಲ್ಲಿ ನಿರ್ಮಲಾ ಟ್ಯಾಬ್‌ನಲ್ಲಿ ಬಜೆಟ್ ಮಂಡಿಸಿ ಡಿಜಿಟಲ್ ಬಜೆಟ್ ಮಂಡನೆಗೆ ನಾಂದಿ ಹಾಡಿದರು. 1860ರಲ್ಲಿ ದೇಶ ಮೊದಲ ಬಾರಿಗೆ ಬ್ರಿಟಿಷ್ ಆಡಳಿತದಲ್ಲಿ ಬಜೆಟ್‌ಗೆ ಸಾಕ್ಷಿಯಾಗಿತ್ತು. ಆದರೆ ದೇಶ ದಾಸ್ಯದಿಂದ ಮುಕ್ತವಾದ ಬಳಿಕ ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊದಲ ಬಾರಿಗೆ 1947ರ ನ.26ರಂದು ಕೇಂದ್ರದ ಮೊದಲ ಬಜೆಟ್‌ಗೆ ಸಾಕ್ಷಿಯಾಗಿತ್ತು. ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಅಂದು ದೇಶದ ಪ್ರಪ್ರಥಮ ಆಯವ್ಯಯ ಮಂಡಿಸಿದ್ದರು.
ಸಂಜೆ ಬದಲು ಬೆಳಗ್ಗೆ ಹೊತ್ತು ಮಂಡನೆ
ಮೊದಲಿಗೆ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆ ದಿನ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಬ್ರಿಟನ್‌ನಲ್ಲಿ ಅದು ಬೆಳಗ್ಗೆ ಸಮಯವಾಗಿರುವ ಕಾರಣ, ಅಲ್ಲಿನ ಸಮಯಕ್ಕೆ ಹೊಂದಿಕೆಯಾಗುವಂತೆ ಬ್ರಿಟಿಷರು ಬಜೆಟ್ ಸಮಯ ನಿಗದಿ ಮಾಡಿದ್ದರು. ಆದರೆ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ, ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಬೆಳಿಗ್ಗೆ 11 ಗಂಟೆಗೆ ಬಜೆಟ್ ಸಮಯ ಬದಲಾವಣೆ ಮಾಡಲಾಯಿತು.
ಸ್ವತಂತ್ರ ದೇಶದ ಮೊದಲ ಬಜೆಟ್ ಹೇಗಿತ್ತು?
ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದ ಬಜೆಟ್ ಕೇಬಲ ಏಳು ತಿಂಗಳ ಅವಧಿಗೆ ಮಂಡಿಸಿದ್ದ ಮಧ್ಯಂತರ ಬಜೆಟ್ ಆಗಿತ್ತು. ಸ್ವತಂತ್ರ ದೇಶದ ಮೊದಲ ಬಜೆಟ್ ಸಂಜೆ 5 ಗಂಟೆಗೆ ನಡೆದಿತ್ತು. ಅಂದಿನ ಬಜೆಟ್ ಗಾತ್ರ 197.39 ಕೋಟಿ ರೂಪಾಯಿ. ಸ್ವತಂತ್ರ ಭಾರತದ ಬಳಿಕ ಭಾರತ 73 ಪೂರ್ಣ ಪ್ರಮಾಣದ ಬಜೆಟ್ ಮತ್ತು 14 ಮಧ್ಯತರ ಬಜೆಟ್ ಕಂಡಿದೆ.
ನೆಹರೂ ಕೂಡ ಬಜೆಟ್ ಮಂಡಿಸಿದ್ದರು
ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಕೂಡ ಬಜೆಟ್ ಮಂಡನೆ ಮಾಡಿದ್ದರು. 1958ರಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ರಾಜೀನಾಮೆ ನೀಡಿದ ಬಳಿಕ ನೆಹರೂ ಅವರು ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡಿಸಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು.
ಅತಿ ಹೆಚ್ಚು ಬಜೆಟ್ ಮಂಡನೆ ಮೊರಾರ್ಜಿಯದ್ದು
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಈ ತನಕ ಹೆಚ್ಚು ಬಜೆಟ್ ಮಂಡಿಸಿದವರಲ್ಲಿ ಅಗ್ರ ಗಣ್ಯರು. ಜವಾಹರ್‌ಲಾಲ್ ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ದೇಸಾಯಿ ಒಟ್ಟು 10 ಬಜೆಟ್ ಮಂಡಿಸಿದ್ದಾರೆ. ಮೊರಾರ್ಜಿ 1959ರ ಫೆ. 28ರಂದು ಮೊದಲ ಸಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು.
ಹಿಂದಿಯಲ್ಲಿಯೂ ಕೇಂದ್ರ ಬಜೆಟ್ ಮದ್ರಣ
ದೇಶದ 3 ನೇ ಹಣಕಾಸು ಸಚಿವರಾಗಿದ್ದ ಸಿ.ಡಿ ದೇಶಮುಖ್‌ರವರು 1951-1957ವರೆಗಿನ ತಮ್ಮ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬಜೆಟ್ ಮಂಡಿಸಿದರು. ಅದಕ್ಕೂ ಮುನ್ನ ಇಂಗ್ಲೀಷ್ ಬಾಷೆಯಲ್ಲಿ ಮಾತ್ರ ಮಂಡಿಸಲಾಗುತ್ತಿತ್ತು.
ಬಜೆಟ್ ಮಂಡಿಸಿದ ಮೊದಲ ಮಹಿಳೆ
ಸಂಸತ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಬಜೆಟ್ ಮಂಡಿಸಿದ ಮಹಿಳೆ ಇಂದಿರಾಗಾಂಧಿ. ಇಂದಿರಾ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಬಜೆಟ್ ಮಂಡಿಸಿದ್ದರು. ಈ ಮೂಲಕ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದರು.
ಮೊದಲ ಹಣಕಾಸು ಸಚಿವೆ ನಿರ್ಮಲಾ
ಏಳನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆಯುವುದಕ್ಕೆ ಹೊರಟಿರುವ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಹಣಕಾಸು ಸಚಿವೆ. ಬಜೆಟ್ ಮಂಡಿಸಿದ ಮೊದಲ ಸಚಿವೆ ಕೂಡಾ ಹೌದು.
ಸುದೀರ್ಘ ಬಜೆಟ್ ಮಂಡನೆ ದಾಖಲೆ
ಸುದೀರ್ಘ ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಹೆಸರಿನಲ್ಲಿದೆ. 2020 ಫೆ.1ರಂದು 2 ಗಂಟೆ 40 ನಿಮಿಷ ಸುದೀರ್ಘ ಅವಧಿಯಲ್ಲಿ ಬಜೆಟ್ ಮಂಡಿಸಿದ್ದರು. ಅದಕ್ಕೂ ಮುನ್ನ ಎನ್‌ಡಿಎ ಜಸ್ವಂತ್ ಸಿಂಗ್ ಹೆಸರಲ್ಲಿ ಈ ದಾಖಲೆಯಿತ್ತು. 2003ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಜಸ್ವಂತ್ 2 ಗಂಟೆ 13 ನಿಮಿಷ ಬಜೆಟ್ ಮಂಡಿಸಿದ್ದರು.
Budget 2024 LIVE: ಮೂರನೇ ಬಾರಿ ಮೋದಿಗೆ ಅಧಿಕಾರ, ಬಜೆಟ್‌ನಲ್ಲಿ ಇರುತ್ತಾ ಬಡಬದುಕಿಗೆ ಪರಿಹಾರ?
ಅತಿ ಕಡಿಮೆ ಬಜೆಟ್ ಮಂಡನೆ
ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡನೆ ಮಾಡಿರುವ ಹೆಸರು ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರ ಹೆಸರಿನಲ್ಲಿದೆ. 1977ರಲ್ಲಿ ಕೇವಲ 800 ಪದಗಳ ಬಜೆಟ್ ಮಂಡಿಸಿದ್ದರು.
ದೊಡ್ಡ ಮತ್ತು ಕಡಿಮೆ ಗಾತ್ರದ ಬಜೆಟ್
ಇದುವರೆಗಿನ ಅತಿದೊಡ್ಡ ಬಜೆಟ್ ಗಾತ್ರದ ಬಜೆಟ್ ಮಂಡನೆಯಾಗಿದ್ದು ಮನಮೋಹನ್ ಸಿಂಗ್ ಕಾಲದಲ್ಲಿ. 1991ರಲ್ಲಿ ಮಮೋಹನ್ ಸಿಂಗ್ 18,650 ಪದಗಳ ಬಜೆಟ್ ಮಂಡಿಸಿದ್ದರು. ಅತಿ ಕಡಿಮೆ ಪದಗಳ ಬಜೆಟ್ ಮಂಡನೆ ಆಗಿದ್ದು,1977ರಲ್ಲಿ ಹೆಚ್.ಎಂ ಪಟೇಲ್ 800 ಪದಗಳ ಬಜೆಟ್ ಮಂಡಿಸಿದ್ದರು.
ಬಜೆಟ್ ವಿಶೇಷತೆಗಳು
ಕಪ್ಪು ಬಜೆಟ್:
550 ಕೋ.ರು.ಗಳ ಹೆಚ್ಚಿನ ಬಜೆಟ್ ಕೊರತೆಯಿಂದಾಗಿ 1973-74ರ ಆರ್ಥಿಕ ವರ್ಷದಲ್ಲಿ ಯಶವಂತ್ ರಾವ್ ಬಿ ಚೌಹ್ಹಾಣ್ ಮಂಡಿಸಿದ ಬಜೆಟ್‌ನ್ನು ‘ಕಪ್ಪು ಬಜೆಟ್’ ಎಂದು ಕರೆಯಲಾಗುತ್ತದೆ.
ನವಯುಗ ಬಜೆಟ್:
1991ರಲ್ಲಿ ಮನಮೋಹನ್ ಸಿಂಗ್ ಆರ್ಥಿಕ ಬಿಕ್ಕಟ್ಟಿನ ನಡುವೆ ಬಜೆಟ್ ಮಂಡಿಸಿದರು. ಇದನ್ನು ‘ನವಯುಗ’ ಬಜೆಟ್ ಎಂದು ಕರೆಯಲಾಗುತ್ತದೆ.
ರೈಲ್ವೆ ಬಜೆಟ್ ವಿಲೀನ:
92 ವರ್ಷಗಳ ಕಾಲ ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್ 2017ರಲ್ಲಿ ಕೇಂದ್ರ ಬಜೆಟ್‌ನಲ್ಲಿ ವಿಲೀನಗೊಂಡಿತು.
ಕುಟುಂಬದ ಮೂವರ ಬಜೆಟ್:
ಒಂದೇ ಕುಟುಂಬದ ಮೂವರು ಬಜೆಟ್ ಮಂಡಿಸಿದ್ದಾರೆ. ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಜೆಟ್ ಮಂಡಿಸಿದ್ದಾರೆ. ಮೂವರು ಕೂಡ ಪ್ರಧಾನಿಯಾಗಿದ್ದಾಗಲೇ ಬಜೆಟ್ ಮಂಡಿಸಿದ್ದು ವಿಶೇಷ.
ಬಜೆಟ್‌ಗಿದೆ 164 ವರ್ಷಗಳ ಇತಿಹಾಸ, ಇಂದು ಸಂಸತ್‌ನಲ್ಲಿ 88ನೇ ಕೇಂದ್ರ ಬಜೆಟ್ ಮಂಡನೆ ।
ಆರ್ಥಿಕತೆ ಬದಲಿಸಿದ ನೀತಿಗಳು
1950 ಜಾನ್ ಮಥಾಯಿ: ಪಂಚವಾರ್ಷಿಕ ನೀತಿ,ಯೋಜನಾ ಆಯೋಗ ಟಿ.ಟಿ. ಕೃಷ್ಣಮಾಚಾರಿ: ಸಂಪತ್ತು ತೆರಿಗೆ, ಸ್ವಯಂಪ್ರೇರಿತ ಬಹಿರಂಗ ಪಡಿಸುವಿಕೆ, 1986 ವಿ.ಪಿ.ಸಿಂಗ್: ರಾಜ್ ಮತ್ತು ಪರೋಕ್ಷ ತೆರಿಗೆ ಸುಧಾರಣೆ, 1987 ರಾಜೀವ್ ಗಾಂಧಿ: ಕನಿಷ್ಠ ಪರ್ಯಾಯ ತೆರಿಗೆ , 1991 ಮನಮೋಹನ್ ಸಿಂಗ್: ಭಾರತದ ಆರ್ಥಿಕತೆಯ ಉದಾರೀಕರಣ, 1997 ಪಿ.ಚಿದಂಬರಂ: ಕಸ್ಟಮ್ಸ್ ಸುಂಕ ಕಡಿತ, ಅಬಕಾರಿ ಸುಂಕದ ಸರಳೀಕೃತ ಯೋಜನೆ, 2000 ಶವಂತ್ ಸಿನ್ಹಾ: ಐಟಿ ಕ್ಷೇತ್ರದಲ್ಲಿ ಸುಧಾರಣೆ, 2015
-ಅರುಣ್ ಜೇಟ್ಲಿ: ಜಿಎಸ್‌ಟಿ ಪರಿಚಯ, 2022- ನಿರ್ಮಲಾ ಸೀತಾರಾಮನ್: ಮೂಲಭೂತ ಸೌಕರ್ಯಕ್ಕೆ ವಿಶೇಷ ಆದ್ಯತೆ