ಸಿದ್ದರಾಮಯ್ಯ ಅಭಿವೃದ್ಧಿ ಇಲ್ಲದ ಸೌಂಡ್ ಬಾಕ್ಸ್ : ಅಶ್ವತ್ಥ ನಾರಾಯಣಗೌಡ ವ್ಯಂಗ್ಯ

By Ravi JanekalFirst Published Apr 8, 2024, 6:41 PM IST
Highlights

ಸಿದ್ದರಾಮಯ್ಯನವರು ಬಹಳ ಡೈಲಾಗ್ ಹೊಡೆಯುತ್ತಿದ್ದಾರೆ, ಆದರೆ ಅವರದು ಬರಿ ಸೌಂಡ್ ಬಾಕ್ಸ್. ಅವರು ಬಹಳ ಚೆನ್ನಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಆದರೆ ಚೆನ್ನಾಗಿ ಕೆಲಸ ಮಾಡುವುದನ್ನು ಕಲಿತಿಲ್ಲ ಎಂದು ಕೊಡಗು ಮೈಸೂರು ಬಿಜೆಪಿ ಚುನಾವಣಾ ಉಸ್ತುವಾರಿ ಅಶ್ವತ್ಥ್ ನಾರಾಯಣ ಗೌಡ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.8): ಸಿದ್ದರಾಮಯ್ಯನವರು ಬಹಳ ಡೈಲಾಗ್ ಹೊಡೆಯುತ್ತಿದ್ದಾರೆ, ಆದರೆ ಅವರದು ಬರಿ ಸೌಂಡ್ ಬಾಕ್ಸ್. ಅವರು ಬಹಳ ಚೆನ್ನಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಆದರೆ ಚೆನ್ನಾಗಿ ಕೆಲಸ ಮಾಡುವುದನ್ನು ಕಲಿತಿಲ್ಲ ಎಂದು ಕೊಡಗು ಮೈಸೂರು ಬಿಜೆಪಿ ಚುನಾವಣಾ ಉಸ್ತುವಾರಿ ಅಶ್ವತ್ಥ್ ನಾರಾಯಣ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್(Kodagu BJP Candidate Yaduveer wadeyar) ಅವರ ಪರವಾಗಿ ಪ್ರಚಾರ ನಡೆಸಿ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಗಾಗಿ ಖಂಡಿತ ಬಹಳ ಕಸರತ್ತು ಮಾಡುತ್ತಿದ್ದಾರೆ. ಐವತ್ತು ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ, 15 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ತಮ್ಮ ಅನುಭವ ಹೇಳುತ್ತಾರೆ. ನಿಜವಾಗಿಯೂ ಯಾವುದೂ ಆಡಳಿತದಲ್ಲಿ ಕಾರ್ಯ ರೂಪದಲ್ಲಿ ಕಾಣುತ್ತಿಲ್ಲ. ಎಲ್ಲಡೆ ಬರೀ ಗ್ಯಾರಂಟಿ ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ಬರೀ ಸಾಲದ ಗ್ಯಾರಂಟಿ ನೀಡುತ್ತಿದ್ದಾರೆ ಅಷ್ಟೇ. ಕರ್ನಾಟಕದ ರಾಜ್ಯದ ಜನತೆಗೆ ಸಾಲ ಒಂದೇ ಗ್ಯಾರಂಟಿ. ಜನರ ಮೇಲೆ ಸಾಲ ತೆಗೆದುಕೊಂಡು ಅವರಿಗೆ ಮೂರು ನಾಮ ಬಳಿಯಲು ಹೊರಟಿದ್ದಾರೆ ಸಿದ್ದರಾಮಯ್ಯ. ಹೀಗಾಗಿ ಕಾಂಗ್ರೆಸ್ ಗೆ ಮತ ನೀಡಬೇಡಿ ಎಂದು ಅಶ್ವತ್ಥ್ ನಾರಾಯಣ ಗೌಡ ಸಿದ್ದರಾಮಯ್ಯ ಹಾಗೂ ಕಾಂಗತ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. 

ಮೋದಿ ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ವಾ?: ಸಚಿವ ಶಿವರಾಜ ತಂಗಡಗಿ

ರಾಜ್ಯದ ಜನರು ಈಗ ಯಾಕಾದರೂ ಕಾಂಗ್ರೆಸ್ ಗೆ ಮತ ಹಾಕಿದೆವೋ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಸೋಮವಾರಪೇಟೆಯ ಜೆಸಿಐ ವೇದಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಜಂಟಿಯಾಗಿ ಮತಯಾಚನೆ ನಡೆಸಿದವು. ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಂದಲೂ ಮತಯಾಚನೆ ನಡೆಸಿದರು. ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ಮಾಜಿ ಶಾಸಕ ಅಪ್ಪರಂಜನ್ ಹಾಗೂ ಪ್ರಮುಖ ಬಿಜೆಪಿ ನಾಯಕರು ಯದುವೀರ್ ಅವರೊಂದಿಗೆ ಇದ್ದು ಪ್ರಚಾರ ನಡೆಸಿದರು. ಈ ವೇಳೇ ಸಿದ್ದರಾಮಯ್ಯ ಅವರು ಬರೀ ಸೌಡ್ ಬಾಕ್ಸ್, ಈ ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೇ ಅಷ್ಟೇ ಎಂದು ಸಿದ್ದರಾಮಯ್ಯನವರ ರೀತಿ ಹೂಂಕರಿಸಿ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೌಡ ಅವರು ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದರು. 

ಮೋದಿ, ಅಮಿತ್ ಶಾ ಮಾತಿಗೆ ತಲೆ ಅಲ್ಲಾಡಿಸುವ ಸಂಸದರು ಬೇಡ; ಸೌಮ್ಯರೆಡ್ಡಿಗೆ ವೋಟ್ ಮಾಡಿ: ಸಿಎಂ ಮನವಿ

ಒಬ್ಬ ವ್ಯಕ್ತಿಯಾಗಿ ಮೋದಿ(Narendra Modi) ನಮಗೆ ಎದುರಾಳಿಯೇ ಅಲ್ಲ ಎಂಬ ಸಿದ್ಧರಾಮಯ್ಯ ಹೇಳಿಕೆಯ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ(Siddaramaiah)ನವರು ಬರೀ ಸೌಂಡ್ ಮಾಡುತ್ತಾರೆ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಅವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಮಾಡುವುದಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿ ಇದ್ದಾರೆ. ಆದರೆ ಸಂಪೂರ್ಣ ಸೋಲುತ್ತಾರೆ. ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನು ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ. ಮಂಜುನಾಥ್(Bengaluru rural Lok sabha BJP Candidate Dr Manjunnath) ಅವರು ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿಕೆಶಿ ಟೀಂಗೆ ಬುದ್ದಿಕಲಿಸಲಿದ್ದಾರೆ ಎಂದಿದ್ದಾರೆ. ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮುಕ್ತ ದೇಶವಾಗಬೇಕಾಗಿತ್ತು. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ, ಈ ಶಾಪ ಮುಕ್ತ ಮಾಡಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಸೋಲಿಸಲಿದ್ದಾರೆ ಎಂದಿದ್ದಾರೆ.

click me!