ಪಕ್ಷ, ಸಿದ್ಧಾಂತದ ವಿಚಾರ ಬಂದಾಗ ಮಾತೂ ಆಡುತ್ತೇನೆ, ಕೆಲಸವನ್ನೂ ಮಾಡ್ತೇನೆ: ಪ್ರತಾಪ್‌ ಸಿಂಹ

By Kannadaprabha News  |  First Published May 25, 2023, 2:30 AM IST

ರಾಜಕೀಯ ಹಿನ್ನಡೆಯ ಹೊರತಾಗಿಯೂ ನಾನು ಹಿಡಿದ ಕೆಲಸ ಬಿಡುವುದಿಲ್ಲ. ಈಗಾಗಲೇ ನಮ್ಮ ಸರ್ಕಾರದಿಂದ ಅನುಮೋದನೆ ಅಥವಾ ಮಂಜೂರಾತಿ ಪಡೆದಿರುವ ಅಂತಿಮಘಟ್ಟಕ್ಕೆ ತಂದಿರುವ ಕೆಲಸಗಳನ್ನು ಮಾಡಲು ನಿಮ್ಮ ಆಶೀರ್ವಾದ ಮತ್ತು ಪೋತ್ಸಾಹ ಸದಾ ನನ್ನ ಮೇಲಿರಲಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದ ಸಂಸದ ಪ್ರತಾಪ ಸಿಂಹ 


ಮೈಸೂರು(ಮೇ.25): ವಿಧಾನಸಭೆ ಚುನಾವಣೆ ಸೋಲಿನ ನಂತರ ನೊಂದು ಹತಾಶನಾಗಿದ್ದೆ. ನಾನು ತಂದಿರುವ ಒಂದೊಂದು ಯೋಜನೆಗಳನ್ನು ತ್ವರಿತ ಅನುಷ್ಠಾನಗೊಳಿಸಲು ನಮ್ಮದೇ ರಾಜ್ಯ ಸರ್ಕಾರವಿದ್ದರೆ ಖಂಡಿತ ಅನುಕೂಲವಾಗುತ್ತಿತ್ತು. ನಮ್ಮ ಸರ್ಕಾರ ಇದ್ದಿದ್ದರಿಂದಲೇ ಎಲ್ಲ ವಿರೋಧ ಅಡೆತಡೆಗಳನ್ನು ಮೆಟ್ಟಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ರಾಜಕೀಯ ಹಿನ್ನಡೆಯ ಹೊರತಾಗಿಯೂ ನಾನು ಹಿಡಿದ ಕೆಲಸ ಬಿಡುವುದಿಲ್ಲ. ಈಗಾಗಲೇ ನಮ್ಮ ಸರ್ಕಾರದಿಂದ ಅನುಮೋದನೆ ಅಥವಾ ಮಂಜೂರಾತಿ ಪಡೆದಿರುವ ಅಂತಿಮಘಟ್ಟಕ್ಕೆ ತಂದಿರುವ ಕೆಲಸಗಳನ್ನು ಮಾಡಲು ನಿಮ್ಮ ಆಶೀರ್ವಾದ ಮತ್ತು ಪೋತ್ಸಾಹ ಸದಾ ನನ್ನ ಮೇಲಿರಲಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

Latest Videos

undefined

ಆರು ಬಾರಿ ಗೆದ್ದರೂ ಸಚಿವ ಸ್ಥಾನಕ್ಕಾಗಿ ಕಾಯಬೇಕು ಮೈಸೂರು ಜಿಲ್ಲೆಯ ಮೂವರು ಶಾಸಕರು!

ಮೈಸೂರು- ಬೆಂಗಳೂರು ದಶಪಥ ರಸ್ತೆಯ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸುವುದು, ಮೈಸೂರು- ಕುಶಾಲನಗರ ನಾಲ್ಕು ಪಥ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭಿಸುವುದು, ಮೈಸೂರು ನಗರ ಪಾಲಿಕೆಯು ವಿದ್ಯಾರಣ್ಯಪುರಂ ಸೀವೇಜ್‌ ಫಾರಂನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಯೋಜನೆಯ ತ್ವರಿತ ಅನುಷ್ಠಾನ, ಚಾಮುಂಡಿ ಬೆಟ್ಟವನ್ನು ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಅಭಿವೃದ್ದಿಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಮೈಸೂರು ವಸ್ತು ಪ್ರದರ್ಶನ ಮೈದಾನವನ್ನು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ ಯೋಜನೆಯಡಿ ಅಭಿವೃದ್ಧಿಗೆ ಆದ್ಯತೆ, ಜಲ ಜೀವನ್‌ ಮಿಷನ್‌ ಯೋಜನೆಯಡಿ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹಾಗೂ ಇತರೆ 303 ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಅನುಷ್ಠಾನ ಸಂಬಂಧ ಸಭೆ, ಕೊಡಗು ಜಿಲ್ಲೆಯಾದ್ಯಂತ ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಪೂರೈಸುವ ಕಾಮಗಾರಿ ಅನುಷ್ಠಾನ ಕುರಿತ ಸಭೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ, ಶಾಸ್ತ್ರೀಯ ಕನ್ನಡ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪಿಸುವುದು. ಹೊರವರ್ತುಲ ರಸ್ತೆ ನಿರ್ಮಾಣ ಸಂಬಂಧ ಎಂಡಿಎ ಅಧಿಕಾರಿಗಳೊಂದಿಗೆ ಸಭೆ, ಮೈಸೂರು ತಾಲ್ಲೂಕು, ಹುಯಿಲಾಳು ಗ್ರಾಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ, ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿ ತುರ್ತಾಗಿ ಕೈಗೊಳ್ಳುವ ಸಂಬಂಧ ಗತಿ ಶಕ್ತಿ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಸಿದ್ದರಾಮಣ್ಣ ಸಿಎಂ ಆಗಲೆಂದು ಮನೆದೇವ್ರು ವರ ಕೊಟ್ಟಿದ್ದ, ಸಹೋದರ ಸಿದ್ದೇಗೌಡ ಹರ್ಷ

ಮೈಸೂರಿನ ಪಪಂ ಹಾಗೂ ನಗರ ಸಭೆ ವ್ಯಾಪ್ತಿಯಲ್ಲಿ ಜಲ ಜೀವನ್‌ ಮಿಷನ್‌ ಅನುಷ್ಠಾನ, ದಡದಕಲ್ಲಹಳ್ಳಿ ಗ್ರಾಮದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಸಂಶೋಧನಾ ಘಟಕ ನಿರ್ಮಾಣ, ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುವುದು, ಹುಣಸೂರಿನ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಟೆಂಡರ್‌ ಕರೆಸಿ ಕಾಮಗಾರಿ ಆರಂಭಿಸುವುದಾಗಿ ಅವರು ಹೇಳಿದರು.

ಜಲ ಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಹುಣಸೂರು ತಾಲೂಕಿನ 164 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದು, ಬೃಹತ್‌ ಮೈಸೂರು ನಿರ್ಮಾಣ ಸಂಬಂಧ ಮೈಸೂರು ನಗರ ಪಾಲಿಕೆಯಲ್ಲಿ ಪ್ರಸ್ತಾವನೆ ಮಂಡನೆ, ಪಿರಿಯಾಪಟ್ಟಣದ ಗ್ರಾಮದೇವತೆ ಮಸಣಿಕಮ್ಮ ದೇವಾಲಯದ ಮರುನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.

click me!