
ಬೆಂಗಳೂರು (ಏ.05): ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರೇ ಕೆಲವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಒಬ್ಬರು ಬಸವರಾಜ ಬೊಮ್ಮಾಯಿ ಮಾಮ ಅವರು. ಇಂದು ನಾನು ನಿಮ್ಮ ಪರ ನಿಂತುಕೊಳ್ಳುತ್ತೇನೆ ಎಂದು ಹೇಳಿದ್ದೇನೆ ಎಂದು ಕಿಚ್ಚ ಸುದೀಪ ತಿಳಿಸಿದರು.
ಚಿಕ್ಕ ವಯಸ್ಸಿನಿಂದ ಅವರನ್ನು ನಾನು ಮಾಮ ಎಂದು ಕೆರೆದುಕೊಂಡು ಬಂದಿದ್ದೇನೆ. ಈಗ ಮಾತನಾಡುವ ಸಮಯ ಬಂದಿದೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರೇ ಕೆಲವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಒಬ್ಬರು ಬಸವರಾಜ ಬೊಮ್ಮಾಯಿ ಮಾಮ ಅವರು. ಇಂದು ನಾನು ನಿಮ್ಮ ಪರ ನಿಂತುಕೊಳ್ಳುತ್ತೇನೆ ಎಂದು ಹೇಳಿದ್ದೇನೆ. ನಾವು ಬೆಳೆದುಬಂದ ಹಾದಿಯಲ್ಲಿ ಗಾಡ್ ಫಾದರ್ ಯಾರೂ ಇರಲಿಲ್ಲ. ಗಾಡ್ ಅಂಡ್ ಫಾದರ್ ಬೇರೆ ಬೇರೆಯಾಗಿಯೇ ಇದ್ದಾರೆ. ನಾನು ಚಿತ್ರರಂಗಕ್ಕೆ ಬಂದಾಗ ಮಾಮ ಕೂಡ ಆಗತಾನೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದರು. ಆಗ ನನಗೂ ಸಹಾಯ ಮಾಡಿದ್ದ ವ್ಯಕ್ತಿಗೆ ನಾನು ಪರವಾಗಿ ನಿಂತುಕೊಳ್ಳಲು ಬಂದಿದ್ದೇನೆ. ಜೊತೆಗೆ, ನಾನು ಸ್ನೇಹಿತರ ಪರ ನಿಂತುಕೊಳ್ಳುತ್ತೇನೆ ಎಂದು ಹೇಳಿದರು.
ಚಿತ್ರರಂಗದವರೇ ಮಾಡಿದ ಕೃತ್ಯ, ಯಾರು ಅಂತ ಗೊತ್ತಿದೆ; ಬೆದರಿಕೆ ಪತ್ರದ ಬಗ್ಗೆ ಸುದೀಪ್ ಶಾಕಿಂಗ್ ಹೇಳಿಕೆ
ಬೊಮ್ಮಾಯಿ ಮಾಮ ಹೇಳಿದ ಕಡೆ ಪ್ರಚಾರ ಮಾಡ್ತೇನೆ: ನಾನು ಪಕ್ಷದಿಂದ ಪ್ರಚಾರ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಕಷ್ಟದಲ್ಲಿದ್ದಾಗ ಇವರು ಯಾವ ಪಕ್ಷದಲ್ಲಿ ಇದ್ದೀರಿ ಎಂದು ಕೇಳಿ ಸಹಾಯವನ್ನು ಪಡೆದಿಲ್ಲ. ಹೀಗಾಗಿ, ನಾನು ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪ್ರಾಚಾರ ಮಾಡಲು ಮುಂದಾಗಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ಯಾರು ಸಹಾಯ ಮಾಡಿದ್ಆರೋ ಅವರು ಯಾವುದೇ ಪಕ್ಷದಲ್ಲಿದ್ದರೂ ಕಂಡಿತವಾಗಿ ನಾನು ಅವರ ಪರವಾಗಿ ನಿಲ್ಲುತ್ತೇನೆ. ಇನ್ನು ಪ್ರಕಾಶ್ ರಾಜ್ ಅವರು ಸಿನಿಮಾದಲ್ಲಿ ಭಾರಿ ಆತ್ಮೀಯತೆ ಇದೆ. ಅವರು ಯಾವುದೇ ಟ್ವೀಟ್ ಮಾಡಿದರೂ ಉತ್ತಮ ಕಲಾವಿದರಾಗಿದ್ದಾರೆ. ಅವರೊಂದಿಗೆ ಬೇರೆ ಸಿನಿಮಾ ಯಾವಾಗ ಮಾಡುತ್ತೇನೆ ಎಂದು ಕಾಯುತ್ತಿದ್ದೇನೆ.
27 ವರ್ಷ ಬೆಳೆಸಿದ ಅಭಿಮಾನಿಗಳಿಗೆ ಬೇಸರ ತರೊಲ್ಲ: ನಾನು ಈಗಲೂ ಸ್ಪಷ್ಟವಾಗಿ ಹೇಳುತ್ತೇನೆ ರಾಜಕೀಯಕ್ಕೆ ಬಂದಿಲ್ಲ. ರಾಜಕೀಯಕ್ಕೆ ಬರದಿರುವ ಕಾರಣ ನನ್ನ ಅಭಿಮಾನಿಗಳು ಖುಷಿಯಾಗಿದ್ದಾರೆ. ನಾನು 27 ವರ್ಷದಿಂದ ಕಷ್ಟಪಡುತ್ತಿದ್ದೇನೆ. ಅಭಿಮಾನಿಗಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಎಲ್ಲ ಅಭಿಮಾನಿಗಳಿಗೆ ಬೇಸರ ಆಗುವಂತೆ ನಾನು ಒಂದು ಪಕ್ಷವನ್ನು ಸೇರುವುದಿಲ್ಲ. ಕೇಸರಿ ಅಥವಾ ಕಮಲದ ಚಿಹ್ನೆಗೆ ಅನ್ನುವುದಕ್ಕಿಂತ ಬೊಮ್ಮಾಯಿ ಅವರಿಗೆ ನನ್ನ ಬೆಂಬಲವಿದೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ.
ಚುನಾವಣೆ ಸ್ಪರ್ಧೆ ದೂರದ ಮಾತು: ಬೊಮ್ಮಾಯಿ ಅವರಿಗೆ ಸಪೋರ್ಟ್ ಮಾಡುತ್ತೇನೆ ಎಂದು ನಾನು ಹೇಳಿದಾಕ್ಷಣ ಎಲ್ಲರ ಪರವಾಗಿಯೂ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲ. ಆದರೆ, ಬೊಮ್ಮಾಯಿ ಮಾಮ ಹಾಗೂ ಅವರು ಹೇಳಿದ ಕೆಲವರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ. ನನಗೆ ಹಲವು ಸಿನಿಮಾಗಳನ್ನು ಮಾಡುವುದಿದೆ. ನಾನು ಸಿನಿಮಾಗಳನ್ನು ಮಾಡುತ್ತೇನೆ ಹೊರತು ರಾಜಕೀಯಕ್ಕೆ ಬರುವುದಿಲ್ಲ. ಯಾವುದೇ ಒತ್ತಡದ ಸಂದರ್ಭವಿದೆ ಸ್ಪರ್ಧೆ ಮಾಡುವುಂತೆ ಹೇಳಿದರೂ ನಾನು ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಾನು ಕೇವಲ ಚಿತ್ರನಟ ಮಾತ್ರ ಬೇರೆ ಯಾವುದೇ ರಾಜಕೀಯ ವ್ಯಕ್ತಿಯಲ್ಲ. ನಾನು ಚಿಕ್ಕವನಿದ್ದಾಗ ಕಷ್ಟದ ದಿನಗಳಲ್ಲಿ ನೆರವಾದವರು ಬೊಮ್ಮಾಯಿ ಮಾಮ. ಆದರೆ, ಯಾವ ರೀತಿಯಾಗಿ ಕಷ್ಟ ಇದೆ ಎಂದು ಹೇಳೊಕೊಳ್ಳಲು ಆಗುವುದಿಲ್ಲ. ಅದನ್ನು ಹೇಳುತ್ತಾ ಕೂರುವ ಬದಲು ಒಂದು ಪುಸ್ತಕವನ್ನೇ ಬರೆಯಬಹುದು ಎಂದು ಹೇಳಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ
ಯಾವುದೇ ಒತ್ತಡಕ್ಕೆ ಬೆದರಿಕೆಗೆ ಮಣಿಯೊಲ್ಲ: ಐಟಿ- ಇಡಿ ರೇಡ್ ಮಾಡುವ ದಾಳಿ ಮಾಡುತ್ತೇವೆ ಎಂದು ಬೆದರಿಸಿ ನಿಮ್ಮನ್ನು ಸಿನಿಮಾ ಪ್ರಚಾರಕ್ಕೆ ಕರೆತಂದಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್ ಅವರು, ನಾನು ಪ್ರೀತಿಯಿಂದಲೇ ಪ್ರಚಾರ ಮಾಡುವುದಕ್ಕಾಗಿ ಬಂದಿದ್ದೇನೆ. ನನ್ನ ಮನೆಯ ಮೇಲೆ ಈಗಾಗಲೇ ದಾಳಿ ಮಾಡಿಯೂ ಆಗಿದೆ, ಅಧಿಕಾರಿಗಳು ಏನೂ ಸಿಗದೇ ವಾಪಸ್ ಹೋಗಿದ್ದೂ ಆಗಿದೆ. ಈಗ ಅವರ ಮೇಲಿನ ಪ್ರೀತಿಯಿಂದ ಜೊತೆಗೆ ನಿಲ್ಲುತ್ತಿದ್ದೇನೆ. ಇನ್ನು ಸರ್ಕಾರದ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪವಿದ್ದರೂ ನಾನು ಆ ಬಗ್ಗೆ ಮಾತನಾಡುವುದಿಲ್ಲ. ದೇಶದಲ್ಲಿ ಕಾನೂನು ತುಂಬಾ ಪ್ರಭಲವಾಗಿದೆ. ಕಾನೂನಿನ ಅಡಿಯಲ್ಲಿಯೇ ಹೋಗುತ್ತಿದ್ದೇವೆ. ಯಾವುದೇ ಭ್ರಷ್ಟಾಚಾರ ಆರೋಪಗಳು ಇದ್ದರೂ ಕೂಡ ಅದನ್ನು ಸರ್ಕಾರ ಮತ್ತು ಕಾನೂನು ನೋಡಿಕೊಳ್ಳುತ್ತದೆ. ನನ್ನ ಬೆಂಬಲ ಒಳ್ಳೆಯ ವಿಚಾರಕ್ಕೆ ಇರಲಿದೆ ಎಂದರು.
ಸುದೀಪ್ ಬೆಂಬಲಕ್ಕೆ ಧನ್ಯವಾದ ಸಲ್ಲಿಕೆ: ಸುದೀಪ್ ಭಾರಿ ಜನಪ್ರಿಯ ನಟ ಆಗಿರುವುದರಿಂದ ಅವರು ಎಲ್ಲಿ ಪ್ರಚಾರ ಮಾಡಬೇಕು ಎಂಬ ಬಗ್ಗೆ ಬ್ಲೂಪ್ರಿಂಟ್ ಮಾಡುತ್ತೇವೆ. ಸುದೀಪ್ ಅವರು ತಮ್ಮ ಅಭಿಮಾನಿಗಳಿಗೆ ಬೇಸರ ಆಗದಂತೆ ಪ್ರಚಾರ ಮಾಡಲಿದ್ದಾರೆ. ಇನ್ನು ದೇಶ ಮತ್ತು ರಾಜ್ಯದ ಬಗ್ಗೆ ಸುದೀಪ್ ಅವರಿಗೆ ಅವರ ತಂದೆ ಸಂಜೀವಣ್ಣ ಮತ್ತು ತಾಯಿ ಸರೋಜಕ್ಕ ಅವರಿಗೂ ಧನ್ಯವಾದವನ್ನು ಹೇಳುತ್ತೇನೆ. ಈ ನಿಲುವು ತೆಗೆದುಕೊಳ್ಳಲು ಎಷ್ಟು ಸಮಯ ತೆಗೆದುಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಸುದೀಪ್ ಬೆಂಬಲದಿಂದ ಬಿಜೆಪಿ ಪ್ರಚಾರದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.
ನಗರದ ಅಶೋಕ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.