ಕಾರ್ಕಳದಲ್ಲೇ ನನ್ನ ರಾಜಕೀಯ ಜನನ, ಕಾರ್ಕಳದಲ್ಲೇ ಮರಣ: ಸಚಿವ ಸುನೀಲ್ ಕುಮಾರ್

By Suvarna NewsFirst Published Dec 3, 2022, 6:33 PM IST
Highlights

ರಾಜಕೀಯವಾಗಿ ನನಗೆ ಕಾರ್ಕಳದಲ್ಲೇ ಜನ್ಮ ಕಾರ್ಕಳದಲ್ಲೇ ಮರಣ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ  ಸಚಿವ ಸುನೀಲ್ ಕುಮಾರ್ ಗುಡುಗಿದ್ದಾರೆ. ಈ ಮೂಲಕ ಸುನೀಲ್ ಕುಮಾರ್ ಈ ಬಾರಿ ಕಾರ್ಕಳದಿಂದ ಸ್ಪರ್ಧಿಸುವುದಿಲ್ಲ ಎಂಬ ವದಂತಿ ತಳ್ಳಿ ಹಾಕಿದ್ದಾರೆ.

ಉಡುಪಿ (ಡಿ.3): ರಾಜಕೀಯವಾಗಿ ನನಗೆ ಕಾರ್ಕಳದಲ್ಲೇ ಜನ್ಮ ಕಾರ್ಕಳದಲ್ಲೇ ಮರಣ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಬಿ ಸುನೀಲ್ ಕುಮಾರ್ ಗುಡುಗಿದ್ದಾರೆ. ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಮೂಲಕ ಸುನೀಲ್ ಕುಮಾರ್ ಈ ಬಾರಿ ಕಾರ್ಕಳದಿಂದ ಸ್ಪರ್ಧಿಸುವುದಿಲ್ಲ ಎಂಬ ವದಂತಿ ತಳ್ಳಿ ಹಾಕಿದ್ದಾರೆ. ಕಾರ್ಕಳದಿಂದ ನಾನು ಸ್ಪರ್ಧಿಸುವ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ, ಯಾರೋ ನಾಲ್ಕೈದು ಜನ ಮಾತನಾಡುತ್ತಾರೆ ಅಂದ್ರೆ ಸಾವಿರಾರು ಜನ ಕಾರ್ಯಕರ್ತರಿಗೆ ಅದನ್ನು ತಡೆಯುವ ಶಕ್ತಿ ಇದೆ. ಅಪಪ್ರಚಾರದ ಬಾಯಿಗಳನ್ನು ತಡೆಯುವ ಶಕ್ತಿ ಇದೆ ಎಂದು ಹೇಳಿದ್ದಾರೆ. ಸುನೀಲ್ ಕುಮಾರ್ ಹತ್ರ 100 ಲಾರಿ ಇದೆ ಅಂದ್ರು, ನನ್ನ ಜಾತಿ ಯಾವುದು ಗೊಂದಲ ಇದೆ ಅಂದಿದ್ದರು. ಕಾರ್ಕಳ ನಗರದ ಜಿಎಸ್‌ಬಿ ಸಮುದಾಯ ನನ್ನ ವಿರೋಧವಿದೆ ಅಂದ್ರು. ಸುನೀಲ್ ಕುಮಾರ್ ಗೆ ಬಂಟ ಸಮುದಾಯ ವಿರೋಧವಿದೆ ಎಂದು ಸುದ್ದಿ ಹಬ್ಬಿಸಿದರು. ಸುನೀಲ್ ಕುಮಾರ್ ಗೆ ಬಿಲ್ಲವರು ಓಟು ಹಾಕಲ್ಲ ಎಂದು ಸುದ್ದಿ ಹಬ್ಬಿಸಿದರು. ಈಗ ನಾನು ಕಾರ್ಕಳದಲ್ಲಿ ಸ್ಪರ್ಧಿಸಲ್ಲ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ತೇನೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಸುನೀಲ್ ಕುಮಾರ್ ಗೆ ಕಾರ್ಕಳದಲ್ಲೇ ರಾಜಕೀಯ ಜನ್ಮ ಸುನೀಲ್ ಕುಮಾರ್ ಗೆ ಕಾರ್ಕಳದಲ್ಲೇ ಮರಣ ಎಂದು ಘೋಷಿಸಿದರು.

ಮಿಂಚಿನ ಹುಳದ ರೂಪದಲ್ಲಿ ಕೆಲವರು ಬರುತ್ತಾರೆ, ಏನೂ ಮಾಡಲು ಆಗಲ್ಲ. ಮಳೆಗಾಲದಲ್ಲಿ ಅಣಬೆಗಳ ತರ ಹುಟ್ಟಿಕೊಳ್ಳುತ್ತಾರೆ. ಮಳೆ ಇಲ್ಲದಾಗ ಇವರಿಗೆ ಅಸ್ತಿತ್ವವೇ ಇರುವುದಿಲ್ಲ. ಬಿಜೆಪಿ ಕಾರ್ಕಳದಲ್ಲಿ ಯಾವತ್ತಿದ್ದರೂ ಒಂದು ಆಲದ ಮರ ಎಂದರು.

ಸ್ಥಾನಮಾನಕ್ಕಾಗಿ ಕೋಟ ಹಾಗೂ ಸುನೀಲ್ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ: ಪ್ರಣವಾನಂದ ಸ್ವಾಮೀಜಿ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾಗಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾಯಿತು, ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಘೋಷಣೆಯಾಗಿದೆ. ಲವ್ ಜಿಹಾದ್ ವಿರುದ್ಧ ಕಾನೂನು ರಚನೆಯಾಗಿದ್ದು ನಮ್ಮ ಕಾಲದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದು ನಾವು. ಹನುಮಗಿರಿಗೆ 100 ಕೋಟಿ ರೂಪಾಯಿ ನೀಡಿದ್ದು ನಮ್ಮ ಸರ್ಕಾರ.ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಬಿಜೆಪಿ ಸರಕಾರ ಎಂದ ಸುನೀಲ್ ಕುಮಾರ್,ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣಕ್ಕೆ ಇಷ್ಟೆಲ್ಲಾ ಕೆಲಸವಾಗಿದೆ ಎಂದರು.

ನನ್ನ ಸ್ಪರ್ಧೆ ಕಾರ್ಕಳದಲ್ಲೆ, ಬೇರೆ ಕ್ಷೇತ್ರಕ್ಕೆ ಹೋಗಲ್ಲ: ಸಚಿವ ಸುನಿಲ್‌

 

ಶಿವ ಸೇನೆಯ ಹಿಂದುತ್ವ ಬಹಳ ಒಳ್ಳೆಯದು ಎಂದು ನಮಗೆ ಅನಿಸುತ್ತಿತ್ತು.ಶಿವಸೇನೆಯ ನಾಯಕರು ಹೇಳಿಕೆ ಕೊಟ್ಟರೆ ಶಹಬ್ಬಾಸ್ ಎನ್ನುತ್ತಿದ್ದೆವು. ಬಿಜೆಪಿ ಸಂಘ ಪರಿವಾರದ ಹಿಂದುತ್ವಕ್ಕಿಂತ ಶಿವಸೇನೆ ಗಟ್ಟಿ ಎಂದು ಭಾವಿಸಿದ್ದೆವು‌.ಈಗ ಅದೇ ಶಿವ ಸೇನೆ ವೈಯಕ್ತಿಕ ಹಿತಾಸಕ್ತಿ ಗೋಸ್ಕರ , ಅಧಿಕಾರದ ಲಾಲಸೆಗೋಸ್ಕರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಬೊಟ್ಟು ಮಾಡಿದ ಸುನೀಲ್ ಕುಮಾರ್, ಇದನ್ನು ಈ ದೇಶ ಯಾವತ್ತು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

click me!