ನನಗೆ ಟಿಕೆಟ್ ಕೈ ತಪ್ಪಿದಾಗ ಹಣದಾಸೆಗೆ ಒಳಪಡಲಿಲ್ಲ, ನನ್ನದು ಹೋರಾಟದ ಬದುಕು, ನಾನೊಬ್ಬ ಫೈಟರ್: ವೀಣಾ ಕಾಶಪ್ಪನವರ

By Govindaraj S  |  First Published Jul 1, 2024, 8:46 PM IST

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ನಾನೇನು ಹಣಕ್ಕಾಗಿ ಮಾರಾಟ ಆದವಳಲ್ಲ, ಆಗುವುದೂ ಇಲ್ಲ, ನಾನೊಬ್ಬ ಫೈಟರ್ ಎಂದು ಬಾಗಲಕೋಟೆ ನಗರದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ‌ ಘಟಕದ ಪ್ರ.ಕಾರ್ಯದರ್ಶಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ. 


ಬಾಗಲಕೋಟೆ (ಜು.01): ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ನಾನೇನು ಹಣಕ್ಕಾಗಿ ಮಾರಾಟ ಆದವಳಲ್ಲ, ಆಗುವುದೂ ಇಲ್ಲ, ನಾನೊಬ್ಬ ಫೈಟರ್ ಎಂದು ಬಾಗಲಕೋಟೆ ನಗರದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ‌ ಘಟಕದ ಪ್ರ.ಕಾರ್ಯದರ್ಶಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ. ನವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ವೇಳೆ ನಾಮಿನೇಶನ್'ಗೆ ಬಂದವರು ವಾಪಸ್ ಪ್ರಚಾರಕ್ಕೆ ಬರಲಿಲ್ಲ, ಎಂಟು ಕೋಟಿ ಹತ್ತು ಕೋಟಿ ತೆಗೆದುಕೊಂಡಿದ್ದಾರೆಂಬ ವಿನಾಕಾರಣ ಆರೋಪದ ಮಾತುಗಳು ಕೇಳಿ ಬರುತ್ತಿವೆ ಎಂದರು. 

ಆದ್ರೆ ನಾನು ದುಡ್ಡಿಗಾಗಿ ಮಾರಾಟ ಆದವಳಲ್ಲ ಆಗುವುದಿಲ್ಲ, ನಾನು ಮತ್ತೆ ಬಾಗಲಕೋಟೆ ಲೋಕಸಭೆ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವೆ ಎಂದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿ, ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿಗೆ ಟಿಕೆಟ್ ಸಿಕ್ಕು ಅವರು ಕಣಕ್ಕಿಳಿದು ಸೋಲುಂಡಿದ್ದು, ಇಂದು ವೀಣಾ‌ ಕಾಶಪ್ಪನವರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Tap to resize

Latest Videos

ವೀಣಾ ಕಾಶಪ್ಪನವರ್‌ಗೆ ರಾಜಕೀಯದಲ್ಲಿ ಒಳ್ಳೆ ಭವಿಷ್ಯವಿದೆ: ಗ್ರಾಮೀಣ ಮಕ್ಕಳೂ ಕೆಎಎಸ್- ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾಗಲು ವೀಣಾ ಕಾಶಪ್ಪನವರ್ ಫೌಂಡೇಶನ್ ನೆರವಾಗುತ್ತಿದ್ದು, ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ವೀಣಾ ವಿ ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆ ತರಬೇತಿ ಕೇಂದ್ರ ಮತ್ತು ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಪಡೆಯಲು ಪಾಸಾಗಲು ವೀಣಾ ಕಾಶಪ್ಪನವರ್ ಫೌಂಡೇಶನ್ ನೆರವಾಗಲಿದೆ. ಈಗ 200 ಅಭ್ಯರ್ಥಿಗಳಿಂದ ಆರಂಭವಾಗಿ 1500 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಫೌಂಡೇಶನ್ ನೆರವಾಗಲಿದೆ ಎಂದು ತಿಳಿಸಿದರು.

ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್‌!

ಸಾವಿರಾರು ವಿದ್ಯಾರ್ಥಿಗಳ ಕೆಎಎಸ್- ಪಿಎಸ್‌ಐ ಆಗುವ ಕನಸನ್ನು ನನಸು ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸದಲ್ಲಿ ಕಾಶಪ್ಪನವರ್ ದಂಪತಿ ತೊಡಗಿದ್ದಾರೆ. ಇವರಿಗೆ ನಿಮ್ಮ ಆಶೀರ್ವಾದ ಇರಲಿ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಜಿಲ್ಲೆ ನೆನಪಿಡುವ ಕೆಲಸಗಳನ್ನು ವೀಣಾ ಅವರು ಮಾಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳು ಈ KAS ಅಕಾಡೆಮಿ ಮೂಲಕ ಇನ್ನಷ್ಟು ವಿಸ್ತಾರವಾಗುತ್ತಿದೆ ಎಂದು ವಿವರಿಸಿದರು. ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ಪ್ರತಿಭೆಗೆ ಅವಕಾಶಗಳು ಬೇಕು. ಆ ಅವಕಾಶವನ್ನು ಸೃಷ್ಟಿಸುವ ಕೆಲಸವನ್ನು ವೀಣಾ ಕಾಶಪ್ಪ ದಂಪತಿ ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದರು.

click me!