ಲೋಕಸಭೆ ಕಲಾಪದಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನ ಪ್ರರ್ದರ್ಶನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ.
ಚಿಕ್ಕಮಗಳೂರು (ಜು.01): ಲೋಕಸಭೆ ಕಲಾಪದಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನ ಪ್ರರ್ದರ್ಶನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ರಾಹುಲ್ ಗಾಂಧಿ ವಿಪಕ್ಷ ನಾಯಕ ಅನ್ನೋ ಜವಾಬ್ದಾರಿ ಮರೆತಿದ್ದಾರೆ. ಹಿಂದೂಗಳ ಮನಸ್ಸಿನಲ್ಲಿ ದ್ವೇಷ ಭಾವನೆ ಬಿತ್ತುವವರು ಇವರಾಗಿದ್ದಾರೆ. ಹಿಂದೂ ಧರ್ಮ 'ಸರ್ವೇ ಜನ ಸುಖಿನೋಭವಂತು' ಅನ್ನೋದನ್ನ ಪ್ರತಿಪಾದಿಸಿದೆ. ಹಿಂದೂ ಅನ್ನೋದು ವಿಶ್ವವೇ ಒಂದು ಕುಟುಂಬ ಅಂತ ಭಾವಿಸೋದು. ಹಿಂದೂ ಅನ್ನೋದು ಅಣುರೇಣು ತೃಣಕಾಷ್ಟಗಳಲ್ಲೂ ಭಗವಂತನನ್ನ ಕಾಣೋದು. ಹಿಂದೂ ಅನ್ನೋದು ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿಪಕ್ಷಿಯೂ ಚೆನ್ನಾಗಿರಬೇಕೆಂದು ಪ್ರಾರ್ಥಿಸೋದು ಆಗಿದೆ ಎಂದರು.
undefined
ಆದರೆ, ಅನ್ನ ಬೆಂದಿದೆಯಾ ಅಂತ ನೋಡೋಕೆ ಎಲ್ಲಾ ಅಕ್ಕಿಯನ್ನ ಮುಟ್ಟಿ ನೋಡಬೇಕಿಲ್ಲ. ರಾಹುಲ್ ಗಾಂಧಿ ತಮ್ಮ ಚೊಚ್ಚಲ ಭಾಷಣದಲ್ಲಿಯೇ ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ ಎಂಬುದನ್ನು ಪ್ರದರ್ಶನ ಮಾಡಿದ್ದಾರೆ. ನನಗೆ ಭಾರತ, ಭಾರತೀಯತೆ, ಹಿಂದೂ, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎಂದು ಟ್ವೀಟ್ ಮಾಡಿಸಿದ್ದಾರೆ ಎನಿಸುತ್ತದೆ. ಸಂಸತ್ತಿನ ಕಲಾಪದಲ್ಲಿ ಮಾತನಾಡುವ ಮೂಲಕ ಸಹಸ್ರಾರು ವರ್ಷದ ಸನಾತನ ಪರಂಪರೆಗೆ ಅಪಮಾನದ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ತನ್ನ ಹೇಳಿಕೆಗೆ ರಾಷ್ಟ್ರದ ಕ್ಷಮೆಯಾಚನೆ ಮಾಡ್ಬೇಕು ಅಂತ ಆಗ್ರಹಿಸ್ತೇನೆ. ತಕ್ಷಣ ಕ್ಷಮೆಯಾಚಿಸಿ ತನ್ನ ತಪ್ಪನ್ನ ಸರಿಪಡಿಸಿಕೊಳ್ಳಬೇಕಾದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರಿಗೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುವ ಯೋಗ್ಯತೆಯಿಲ್ಲ; ಡಾ.ಕೆ. ಅನ್ನದಾನಿ
ಆ ಮನುಷ್ಯನನ್ನ ನೋಡುದ್ರೆ ಗೊತ್ತಾಗುತ್ತದೆ, ಯಾರೋ ಟ್ಯೂಷನ್ ಕೊಟ್ಟಿದ್ದನ್ನ ಇಲ್ಲಿ ಹೇಳುತ್ತಿದ್ದಾನೆ. ಆ ಟ್ಯೂಷನ್ ಕೊಡೋರು ಭಾರತ ವಿರೋಧಿಗಳು ಇಲ್ಲವೇ, ಹಿಂದೂ ವಿರೋಧಿಗಳು ಇರಬೇಕು. ಆ ಮೂಲಕವೇ ತನ್ನ ಅಯೋಗ್ಯತನ ಏನು ಅನ್ನೋದನ್ನ ಇವರು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಎರಡು ಅವಧಿಯಲ್ಲಿ ಅಧಿಕೃತ ವಿಪಕ್ಷದ ನಾಯಕನಾಗೋ ಯೋಗ್ಯತೆಯನ್ನ ಜನ ಕೊಟ್ಟಿರಲಿಲ್ಲ. 3ನೇ ಬಾರಿ ಅವಕಾಶ ಸಿಕ್ಕಾಗ ಕಾಂಗ್ರೆಸ್ ಓರ್ವ ಅಯೋಗ್ಯನನ್ನ ಕೂರಿಸಿ ನಾವು ವಿಪಕ್ಷಕ್ಕೂ ಲಾಯಕ್ಕಲ್ಲ ಅನ್ನೋದು ತೋರಿಸಿದೆ ಎಂದು ಟೀಕೆ ಮಾಡಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಈ ಹೇಳಿಕೆಯನ್ನ ನಿಮ್ಮ ಕಾಂಗ್ರೆಸ್ ಪಕ್ಷ ಒಪ್ಪುತ್ತಾ? ನೀವು ಗುಲಾಮಗಿರಿಯನ್ನ ಒಪ್ಪದಿದ್ದರೆ ಈ ಹೇಳಿಕೆಯನ್ನ ವಿರೋಧಿಸುತ್ತೀರ. ನೀವು ಗುಲಾಮಗಿರಿಯನ್ನ ಒಪ್ಪಿದರೆ, ಗುಲಾಮಿ ಮಾನಸೀಕತೆಯಿಂದ ಅವರು ಹೇಳಿದ್ದೆಲ್ಲಾ ಸರಿ ಅಂತ ಜೀ ಹೂಜರ್ ಅಂತೀರಾ ಎಂದು ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ 50:50 ಸೈಟು ಹಂಚಿಕೆ ರದ್ದು; ಸಚಿವ ಬೈರತಿ ಸುರೇಶ್ ಆದೇಶ
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮೂಡಾ) 5 ಸಾವಿರ ಕೋಟಿ ರೂ. ಹಗರಣದ ಬಗ್ಗೆ ಮಾತನಾಡಿ, ಸಿಎಂ ತವರು ಜಿಲ್ಲೆಯಲ್ಲಿಯೇ ಅತೊ ದೊಡ್ಡ ಹಗರಣ ನಡೆದಿದೆ. ಚಾರ್ಲ್ ಶೋಭರಾಜ್ ಬದುಕಿದ್ರೆ ನನ್ನನ್ನ ಮೀರಿಸೋರು ಅಂತ, ಕಾಂಗ್ರೆಸ್ಸಿಗರಿಗೆ ಸರ್ಟಿಫಿಕೇಟ್ ಕೊಡೋನು. ಕಾಂಗ್ರೆಸ್ಸಿನದ್ದು ದೊಡ್ಡ ಲೂಟಿ, ಮಹಾ ಮೋಸ. ಬೋರ್ ಏಕೆ ಕೊರೆದಿಲ್ಲ ಅಂದ್ರೆ ಸಚಿವ ಹೇಳ್ತಾನಂತೆ ಈಗ 50 ಲಕ್ಷ ರೂ. ಕೊಡು, 1 ಬೋರ್ ವೆಲ್ ಗೆ 3500 ಕೊಡು ಅಂತ. ಅದಕ್ಕೆ ನಾವು ಅಗ್ರಿಮೆಂಟ್ ಮಾಡಿಕೊಂಡಿಲ್ಲ ಅಂತಾ ಹೇಳಿದರು. ಇದು ಸರ್ಕಾರದ ಪರಿಸ್ಥಿತಿಯಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಒಂದು ಬೋರ್ ವೆಲ್ ಗೆ 3500 ಲಂಚ ಕೇಳುತ್ತಾರೆ ಎಂದು ಆರೋಪಿಸಿದರು.