ಬಿಜೆಪಿ ಸೇರಿದ ಮುದ್ದಹನುಮೇಗೌಡ, ಶಶಿಕುಮಾರ್‌, ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌

Published : Nov 03, 2022, 11:21 AM IST
ಬಿಜೆಪಿ ಸೇರಿದ ಮುದ್ದಹನುಮೇಗೌಡ, ಶಶಿಕುಮಾರ್‌, ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌

ಸಾರಾಂಶ

Muddahanumegowda Joins BJP: ಮಾಜಿ ಸಂಸದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಮತ್ತು ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ಇಂದು ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಹಿನ್ನೆಲೆ ಕಳೆದ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಿರಲಿಲ್ಲ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಎಸ್‌ಟಿ ಸೋಮಶೇಖರ್‌, ಅಶ್ವಥ್‌ ನಾರಾಯಣ್‌ ಸೇರಿದಂತೆ ಹಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ಮುದ್ದಹನುಮೇಗೌಡ, ಶಶಿಕುಮಾರ್‌ ಮತ್ತು ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಬದಲಿಗೆ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಟಿಕೆಟ್‌ ನೀಡಲಾಗಿತ್ತು. ಇದರಿಂದ ಅವರು ಬೇಸರ ಗೊಂಡಿದ್ದರು. ಅದರ ನಂತರ ಕಾಂಗ್ರೆಸ್‌ ನಾಯಕರು ಮತ್ತು ಮುದ್ದಹನುಮೇಗೌಡ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು. ಇದೀಗ ಕಾಂಗ್ರೆಸ್‌ ಪಕ್ಷದಿಂದ ಆಚೆ ನಡೆದಿರುವ ಮುದ್ದಹನುಮೇಗೌಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬೊಮ್ಮಾಯಿ‌, ಕಾರಜೋಳ, ಜಗ್ಗೇಶ್, ಕಟೀಲ್, ಸಿಪಿ ಯೋಗಿಶ್ವರ್, ಮಸಾಲಾ ಜಯರಾಂ ಪ್ರಮುಖರು ಭಾಗಿಯಾಗಿದ್ದರು. ಮಾಜಿ ಸಂಸದರಾದ ಮುದ್ದಹನುಮೇಗೌಡ, ಶಶಿಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಸೇರ್ಪಡೆಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಡಾ. ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ರಾಜ್ಯಸಭಾ ಸದಸ್ಯ ಜಗ್ಗೇಶ್,  ಶಾಸಕ ಮಸಾಲೆ ಜಯರಾಂ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಸಿ.ಪಿ. ಯೋಗೇಶ್ವರ್, ಅ.‌ದೇವೇಗೌಡ ಉಪಸ್ಥಿತತರಿದ್ದರು. 

ಕೇಸರಿ ಶಾಲು ಹಾಕಿ, ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಸಿಎಂ ಬೊಮ್ಮಾಯಿ‌ ಮತ್ತು ರಾಜ್ಯಾಧ್ಯಕ್ಷ ಕಟೀಲ್. "ಚರ್ವಿತ ಚರಣ ರಾಜಕೀಯ ಬಹಳ ವರ್ಷ ನಡೆಯಿತು.
ಬಳಿಕ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡು ಸೋತಿದೆ. ಬಿಜೆಪಿ ಜನಪರ ಕೆಲಸ ಮಾಡಿದೆ. ಜನರ ವಿಶ್ವಾಸ ಗಳಿಸಿದೆ. ಕಳೆದ ಬಾರಿಗಿಂತ ಲೋಕಸಭೆಯಲ್ಲಿ ಈ ಬಾರಿ ಬಿಜೆಪಿ ಮತ್ತಷ್ಟು ಹೆಚ್ಚು ಸ್ಥಾನ ಗೆದ್ದಿದೆ. ಈ ಕಾರ್ಯಕ್ರಮ ಮುಂದಿನ ರಾಜಕೀಯಕ್ಕೆ ದಿಕ್ಸೂಚಿ ಆಗಿದೆ. ಕರ್ನಾಟಕ ರಾಜಕಾರಣ ಹೊಸ ತಿರುವು ಪಡೆದುಕೊಳ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಯಾವ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತೋ, ಆ ವಿಶ್ವಾಸವನ್ನು ಜನಮತವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ನ ಬಹುತೇಕ ಸಚಿವರು ಎಲ್ಲರು ಕೂಡ ಸೋತಿದ್ರು. ಆದರೂ ಕೂಡ ಹಿಂಬಾಲಿಗಲಿಂದ ಅಧಿಕಾರಕ್ಕೆ ಬಂದು ಜೆಡಿಎಸ್ ಜೊತೆ ಮಾಡಿದ್ರು. ಆ ಪ್ರಯೋಗವೂ ಕೂಡ ಇದೀಗ ವಿಫಲವಾಗಿದೆ. ಕೊವೀಡ್ ಇದ್ರು ಬಿಜೆಪಿ ಜನರ ಜೊತೆ ನಿಂತು, ಜನಪರ ಕೆಲಸ ಮಾಡಿ, ಜನಮನ್ನಣೆ ಗಳಿಸಿದೆ. ಮುದ್ದಹನುಮೇಗೌಡ ಜನಪರ ನಾಯಕ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ. ಸಿಕ್ಕಿದೆ. ಶಶಿಕುಮಾರ್ ಮೊದಲು ನಮ್ಮಲ್ಲೆ ಇದ್ರು
ಈಗ ಮರಳಿ ಮನೆಗೆ ಬಂದಿದ್ದಾರೆ. ಎಲ್ಲಾ ಕಡೆ ನೋಡಿ, ನಮ್ಮ ಮನೆಯೇ ಉತ್ತಮ ಎಂದು ಬಂದಿದ್ದಾರೆ. ನಮ್ಮ ಮನೆಯಲ್ಲಿ ಸಿಗುವ ಗೌರವ ಎಲ್ಲೂ ಸಿಗೊದಿಲ್ಲ ಎಂದು ಬಂದಿದ್ದಾರೆ. ಶಶಿಕುಮಾರ್ ಬಂದಿರೋದಕ್ಕೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಶಶಿಕುಮಾರ್ ಎಸ್ ಟಿ ಸಮುದಾಯ," ಎಂದ ಬೊಮ್ಮಾಯಿ‌.

ಮುಂದುವರೆದ ಅವರು, "ಹನುಮಂತ ರಾವ್ ಮೇಲೂ ನಮಗೆ ಬಹಳ ವಿಶ್ವಾಸ ಇದೆ. ಬಿ ಎಸ್ ಅನಿಲ್ ಕುಮಾರ್ ಅವರಿಗೂ ನನಗೂ 35  ವರ್ಷಗಳ ಸಂಬಂಧ. ದೀನ ದಲಿತರ ಮೇಲೆ ಅವ್ರು ಅಪಾರ ವಾದ ಕಾಳಜಿ ಹೊಂದಿದ್ದಾರೆ. ಇವರಿಂದ ಒಟ್ಟಾರೆ ಮೌಲಿಕ ರಾಜಕಾರಣಕ್ಕೆ ಬೆಲೆ ಬಂದಿದೆ. ಸ್ಥಾನಮಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಪಾರ್ಲಿಮೆಂಟರಿ ಬೋರ್ಡ್ ಇದೆ. ನನ್ನನ್ನು ಸೇರಿದಂತೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ದವಾಗಿರಬೇಕು. ನೀವೆಲ್ಲಾ ಪಕ್ಷದ ತೀರ್ಮಾನಕ್ಕೆ ಬದ್ಧ ಆಗಿರಿರ್ತಿರಿ ಎಂದು ನಂಬಿದ್ದೇನೆ. ನಾವು ನಿಮ್ಮನ್ನು ಉತ್ತಮವಾಗಿ ನಡೆಸಿಕೊಳ್ಳುತ್ತೇವೆ," ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಲಕ್ಷ್ಮೀ ಹೆಬ್ಬಾಳಕರ

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮುದ್ದಹನುಮೇಗೌಡ, "ದೇಶ ಎಂದು ಅಗ್ರಗಣ್ಯ ಸ್ಥಾನದಲ್ಲಿ ಇದೆ. ಅದಕ್ಕೆ ಮೋದಿ‌ ಕಾರಣ. ನಾನು ಲೋಕಸಭೆಯಲ್ಲಿ ಅನೇಕ ಬಾರಿ ಸ್ಪರ್ಧೆ ಮಾಡಿದ್ದೇನೆ. ನಾನು ಯಾವತ್ತಿಗೂ ಮುಜುಗರ ಆಗುವ ರೀತಿ ಮಾತನಾಡಿಲ್ಲ. ಈ ಪಕ್ಷಕ್ಕೆ ನಾನು ದುಡಿಯುತ್ತೇನೆ. ಬಿಜೆಪಿ ಪ್ರಮುಖರು,ಸಚಿವರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಮಕೂರಿನ ಕಾರ್ಯಕರ್ತರ ಜೊತೆಗೂ ನನಗೆ ನಿಕಟ ಸಂಬಂಧ ಇತ್ತು. ಈ ಪಕ್ಷದಲ್ಲಿ ಕಾರ್ಯಕರ್ತ ನಾಗಿ ಸುಲಲಿತವಾಗಿ ಕೆಲಸ ಮಾಡುವ ವಿಶ್ವಾಸ ಇದೆ. ಅತ್ಯಂತ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡಿದ್ದಾರೆ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರಧಾನಿಗಳ ಕಾರ್ಯವೈಖರಿಯನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ಜನಪರ ಯೋಜನೆಗಳು ನನಗೆ ಮೆಚ್ಚುವಂತಾಗಿದೆ. ಭಾರತದ ಘನತೆಯನ್ನು ಪ್ರಪಂಚದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರಧಾನಿಗಳು ಮಾಡ್ತಿದ್ದಾರೆ. ನನಗೆ ಬಹಳ ವಿಶ್ವಾಸ ಇದೆ, ಹೊಂದಾಣಿಕೆ ಮಾಡಿಕೊಂಡು ಹೋಗ್ತೀನಿ. ಎಲ್ಲ ನೀತಿ ನಿಯಮ ಸಿದ್ದಾಂತ ವನ್ನು ನಾನು ಬಲ್ಲೆ. ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಾಗಿ ತೆಗೆದುಕೊಂಡು ಹೋಗ್ತೀನಿ," ಎಂದರು.

ಇದನ್ನೂ ಓದಿ: ಬ್ರಿಟೀಷ್-ಬಿಜೆಪಿ ಆಡಳಿತಕ್ಕೂ ವ್ಯತ್ಯಾಸವೇ ಇಲ್ಲ: ಸುಂದರೇಶ್‌

ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಸ್ವಲ್ಪವೂ ಪ್ರಸ್ತಾಪಿಸದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಮುದ್ದಹನುಮೇಗೌಡ ಹೊಗಳಿದರು.

ಸೇರ್ಪಡೆ ಬಳಿಕ ಮಾತನಾಡಿದ ಶಶಿಕುಮಾರ್‌ "ಬಿಜೆಪಿ ಪಕ್ಷಕ್ಕೆ ನಾನು ಹೊಸಬನಲ್ಲ. ಜೆಡಿಯು‌ನಲ್ಲಿದ್ದಾಗ ಎನ್‌ಡಿಯ ಭಾಗವಾಗಿದ್ದೆ ಎಂದರು. ವಾಜಪೇಯಿ ಸಮಯದಲ್ಲಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಕೆಲವೊಂದು ಏಳುಬೀಳು ಆಗುತ್ತೆ,ಜೀವನದಲ್ಲಿ ಕೆಲವೊಂದು ಸುರಳಿಯಾಗುತ್ತದೆ. ಕೆಲವೊಂದು ಆಸೆ,ನೀರಿಕ್ಷೆಗಳಿಂದ ಕೆಲವೊಂದು ತಪ್ಪುಗಳಾಗುತ್ತದೆ. ನಾನು ಎಸ್ ಟಿ ಸಮುದಾಯದವನಾದರೂ, ನಾನೊಬ್ಬ ನಟ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಕೆಲಸ ಮಾಡ್ತೀನಿ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಬಿಜೆಪಿ ನಾಯಕರಿಗೆ ಧನ್ಯವಾದಗಳು," ಎಂದರು. 

ಇದನ್ನೂ ಓದಿ: ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, "ಇದು ಬದಲಾವಣೆ ಗಾಳಿ. ಕಾಂಗ್ರೆಸ್ ಸ್ವಲ್ಪ ದಿನದಲ್ಲಿ ಬಾಗಿಲು ಹಾಕಲಿದೆ. ಕಾಂಗ್ರೆಸ್ ಗರೆಲ್ಲಾ ಬಿಜೆಪಿ ಸೇರ್ತಾರೆ. ರಾಹುಲ್ ಕಾಲಿಟ್ಟಲೆಲ್ಲಾ ಸೋಲಾಗತ್ತೆ. ಅದಕ್ಕೆ ಉದಾಹರಣೆ, ಕೊಳ್ಳೆಗಾಲ. ಕೊಳ್ಳೆಗಾದಲ್ಲಿ ಬಿಜೆಪಿ ಏಳು ಸ್ಥಾನ ಗೆದ್ದಿದೆ. ಸಿದ್ದರಾಮಯ್ಯ ಒಳ್ಳೆಯ ಕನ್ನಡಕ ಹಾಕಬೇಕು‌. ಕಲಬುರಗಿಯಲ್ಲಿ 40 ಸಾವಿರ ಜನ ಸೇರಿದ್ರೊ ಐದು ಲಕ್ಷ ಜನ ಸೇರಿದ್ರೊ ಸಿದ್ದರಾಮಯ್ಯ ಅಧ್ಯಯನ ಮಾಡಬೇಕು. ನಾವು ನಿಮ್ಮ ಹಾಗೆ ಹೆಂಡ ಹಂಚಿ, ಬಿರ್ಯಾನಿ ನೀಡಿ ಜನರನ್ನು ಸೇರಿಸಿಲ್ಲ. ಸಿದ್ದರಾಮಣ್ಣ ಒಂದ್ಸಾರಿ ಕಲ್ಬುರ್ಗಿ ಗೆ ಹೋಗಿ ನೋಡಬೇಕಿತ್ತು. ಅಶ್ವಥ್ ನಾರಾಯಣ್ ಅವ್ರೇ, ನೀವು ಸಿದ್ದರಾಮಣ್ಣನಿಗೆ ಒಂದು ಕನ್ನಡಕ ಕೊಡಬೇಕಿತ್ತು. ಯಾಕೆಂದರೆ ಅಲ್ಲಿ ಸೇರಿದ್ದ ಜನರು ಎಷ್ಟು ಸೇರಿದ್ರು ಅಂತಾ ಸಿದ್ದರಾಮಯ್ಯ ಕನ್ನಡಕ ಹಾಕಿಕೊಂಡು ನೋಡಬೇಕಿತ್ತು. ನಾವು ಯಾರು ಎಣ್ಣೆ, ಬಿರಿಯಾನಿ ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದಿರಲಿಲ್ಲ. ಹಿಂದೆ ನಾನು ಮುದ್ದಹನುಮೇಗೌಡ  ಅವರನ್ನು ಪಕ್ಷಕ್ಕೆ ಕರೆದಿದ್ದೆ. ಆದರೆ ಅವಾಗ ಅವರು ಬಂದಿರಲಿಲ್ಲ. ಕೊನೆಗೆ ಅವರನ್ನು ಕಾಂಗ್ರೆಸ್ ಗೆ ಹೊರಗೆ ಹಾಕ್ತು. ಇವಾಗ್ಲಾದ್ರು ಮುದ್ದಹನುಮೇಗೌಡ ರಿಗೆ ಕಾಂಗ್ರೆಸ್ ಬಣ್ಣ ಏನೆಂದು ಗೊತ್ತಾಯ್ತಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಎರಡು ನಾಟಕ ಕಂಪನಿ ಗಳು ಇವೆ. ಹೀಗಾಗಿ ಕಲ್ಬುರ್ಗಿಯ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಸೋಲುವ ಭಯ ಶುರುವಾಗಿದೆ," ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!