Karnataka Assembly Election 2023: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ

By Gowthami KFirst Published Dec 29, 2022, 6:00 PM IST
Highlights

ಸಂಸದ  ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂಬ ವದಂತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಜಿಗಜಿಣಗಿ, ನಾ ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ವಿರೋಧಿ, ಕಾಲೇಜು ದಿನಗಳಿಂದಲೂ ಕಾಂಗ್ರೆಸ್ ವಿರೋಧಿ  ಎಂದಿದ್ದಾರೆ.

ವಿಜಯಪುರ (ಡಿ.29): ಸಂಸದ  ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂಬ ವದಂತಿ ವಿಚಾರಕ್ಕೆ ಸ್ವತಃ ರಮೇಶ ಜಿಗಜಿಣಗಿ ಪ್ರತಿಕ್ರಿಯೆ  ನೀಡಿದ್ದಾರೆ. ಗೋರಿಯಲ್ಲಿ ಕಾಲಿಡಲು ಹೊರಟ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವದಾ...? ಎಂದು ಕೇಳಿದ್ದು, ನಾ ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ವಿರೋಧಿ, ಕಾಲೇಜು ದಿನಗಳಿಂದಲೂ ಕಾಂಗ್ರೆಸ್ ವಿರೋಧಿ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯದಿಂದ ನಾನು ಆ ಪಕ್ಷಕ್ಕೆ ಮೊದಲಿನಿಂದಲೂ ವಿರೋಧ ಮಾಡುತ್ತಿದ್ದೇನೆ. ಹಿಂದೆ ನಮ್ಮ ದಲಿತ ಸಮುದಾಯದಲ್ಲಿ ವಿದ್ಯಾವಂತರರಿರಲಿಲ್ಲ. ಈಗ ಎಲ್ಲರೂ ವಿದ್ಯಾತವಂತರಿದ್ದಾರೆ. ತಿಳಿದುಕೊಂಡಿರುವವರು ಇದ್ದಾರೆ. ಈಗ ನಮ್ಮ ಜನರಿಗೆ ಹೋಗಿ ಕೇಳ್ರೀ ಕಾಂಗ್ರೆಸ್ ನಿಂದ ಆದಂತಹ ಅನ್ಯಾಯದ ಕುರಿತು ನಮ್ಮ ಜನರೇ ಹೇಳುತ್ತಾರೆ. ಹಿಂದೆ ನಾನೇ ಚುನಾವಣೆಗೆ ನಿಂತಾಗ ನಮ್ಮ ಅಜ್ಜಿ ನನಗೆ ಮತ ಹಾಕಿರಲಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಹಾಕಿದ್ದರು. ಆದರೆ ಈಗ ದಲಿತ ಸಮುದಾಯದವರು ಪ್ರಜ್ಞಾವಂತರಾಗಿದ್ದಾರೆ ಎಂದು ಸಂಸದ ಜಿಗಜಿಣಗಿ ಹೇಳಿದ್ದಾರೆ.

ಇನ್ನು ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ಸಂಸದ ಜಿಗಜಿಣಗಿ ಟಿಕೆಟ್ ಅಕಾಂಕ್ಷಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಂಸದ ಜಿಗಜಿಣಗಿ ನಾನು ಯಾವುದೇ ಟಿಕೇಟ್ ಆಕಾಂಕ್ಷಿ ಅಲ್ಲ. ಟಿಕೆಟ್ ಕೊಟ್ಟರೂ ಸಹಿ ಕೊಡದಿದ್ದರೂ ಆರಾಮವಾಗಿ ಮನೆಯಲ್ಲಿ ಇರುವೆ. ನಾನು 45 ವರ್ಷದಿಂದ ರಾಜಕಾರಣ ಮಾಡುತ್ತಿರುವೆ ಎಂದರು.

ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಫುಲ್ ಆಕ್ಟಿವ್, ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಪಕ್ಷಕ್ಕೆ ಸೇರ್ಪಡೆ

ರಾಜ್ಯದಲ್ಲಿ ದಲಿತ‌ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ  ಜಿಗಜಿಣಗಿ, ದಲಿತ ಸಿಎಂ ಆಗುವದಿದ್ದರೆ ಈ ಜಗತ್ತಿನಲ್ಲಿ ಯಾರಿಂದಲೂ ತಪ್ಪಿಸಲು ಆಗುವದಿಲ್ಲ. ಹಣೆ ಬರಹರದಲ್ಲಿ ಸಿಎಂ ಆಗುವುದು ಇದ್ದರೆ ಯಾರಿಂದಲೂ ತಪ್ಪಿಸಲು ಆಗಲ್ಲ. ಯಾವಾನಾದರೂ ಒಬ್ಬ ಗಂಡು ಮಗ ಯಾರ ತಲೆ ಮೇಲೆಯಾದರೂ ಏರಿ ಸಿಎಂ ಆಗುತ್ತಾನೆ. ನಾನು ನಾಗಠಾಣ ಮತಕ್ಷೇತ್ರಕ್ಕೂ ಆಕಾಂಕ್ಷಿ ಅಲ್ಲ, ಪಾರ್ಲಿಮೆಂಟಿಗೂ ಆಕಾಂಕ್ಷಿ ಅಲ್ಲ. ನನಗೇನು ಇನ್ನೂ ವಯಸ್ಸಾಗಿಲ್ಲ, ಇನ್ನೂ ಆರಾಮವಾಗಿದ್ದೇನೆ. ನಮ್ಮ ಬಸವರಾಜ ಗೆ 82 ವರ್ಷವಾಗಿದ್ದೆ, ಯಡಿಯೂರಪ್ಪನವರದ್ದು ವಯ್ಯಸ್ಸಾಗಿಲ್ಲವಾ ಆದರೂ ನಮ್ಮ ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರು ಎಂದು ಜಿಗಜಿಣಗಿ ಹೇಳಿದರು.

Assembly election: ಬಿಜೆಪಿ ಹಣೆಬರಹವನ್ನೇ ಬದಲಿಸ್ತಾರಾ ಅಮಿತ್ ಶಾ? ಮಂಡ್ಯ

ಗಡಿ ವಿಚಾರದ ಕುರಿತಂತೆ ಮಹಾರಾಷ್ಟ್ರ ಮತ್ತೆ ಕ್ಯಾತೆ ತೆಗೆದಿರುವ ವಿಚಾರಕ್ಕೆ ಸಂಬಂಧಿಸಿ  ಮಾತನಾಡಿದ   ಜಿಗಜಿಣಗಿ,  ನೋಡ್ರಿ ಇದೆಲ್ಲಾ ಸಮಸ್ಯೆ, ಅಂದ್ರ ಐದು ವರ್ಷ ಮಕ್ಕೊಂಡಿರ್ತಾರ. ಚುನಾವಣೆ ಬಂದೊಡನೆ ಈ ಸಮಸ್ಯೆ ಎತ್ತುತ್ತಾರೆ. ಎಲ್ಲಾ ಮಹಾರಾಷ್ಟ್ರ, ಗಡಿ, ಕರ್ನಾಟಕ ಮತ್ತ ಐದು ವರ್ಷ ಏನು ಮಾಡ್ತಿದ್ರೆಪಾ...? ಚುನಾವಣೆ ಬಂದಾಗ ಇದೆಲ್ಲಾ ಒಂದು ತಂತ್ರ, ರಾಜಕೀಯ ತಂತ್ರ ಅದೊಂದು ಅಷ್ಟೇ. ಎಂದು ಹೇಳಿದರು.

click me!