ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಖಂಡಿತವಾಗಿಯೂ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಮಂಡ್ಯ (ಡಿ.29): ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಖಂಡಿತವಾಗಿಯೂ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲನೆ ಮಾಡಿದ ಸಿ.ಪಿ. ಯೋಗೇಶ್ವರ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಂಸದೆ ಸುಮಲತಾ ಅವರು ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ, ನನಗೆ ಆತ್ಮ ವಿಶ್ವಾಸ ಇದೆ. ಸುಮಲತಾ ಬಿಜೆಪಿ ಸೇರ್ತಾರೆ ಅಂತಾ. ಯಾಕಂದ್ರೆ ಇವತ್ತು ಅವರ ಭಾವಚಿತ್ರ ಇರೋ ಪೋಸ್ಟರ್ ಎಲ್ಲಾ ಕಡೆ ಹಾಕಿದ್ದಾರೆ. ಅವರು ಸೇರ್ಪಡೆ ಆಗೋಲ್ಲ ಅಂದಿದ್ದರೆ ಅವರ ಬೆಂಬಲಿಗರು ವಿರೋಧ ಮಾಡುತ್ತಿದ್ದರು. ಇದು ಮೌನಂ ಅರೇ ಸಮ್ಮತಿ ಲಕ್ಷಣಂ ಎನ್ನುವಂತೆ ಅವರು ಬಿಜೆಪಿ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ ಅನ್ನಿಸುತ್ತದೆ ಎಂದು ತಿಳಿಸಿದರು.
Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್ ಆರೋಪ
ಇನ್ನು ಸಂಸದೆ ಸುಮಲತಾ ಅವರೊಂದಿಗೆ ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಾನು ಪಕ್ಷೇತರ ಸಂಸದೆಯಾಗಿ ಗೆದ್ದಿದ್ದೇನೆ. ಜನರು ಏನನ್ನುತ್ತಾರೆ ಅನ್ನೋ ಆತಂಕ ಅವರಲ್ಲಿ ಇತ್ತು ಅನ್ನಿಸುತ್ತಿದೆ. ಇನ್ನು ಒಂದೂವರೆ ವರ್ಷ ಅವರ ಕಾಲಾವಧಿ ಇರುತ್ತದೆ. ಮುಂದೆ ಚುನಾವಣೆ ಕೂಡ ಇರುತ್ತದೆ. ಮುಂದಿನ ದಿನಗಳಲ್ಲಿ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿದರು.
ಕೆ.ಆರ್.ಪೇಟೆ ಕ್ಷೇತ್ರ ಅಭಿವೃದ್ಧಿ ಆಗಿದೆ: ರಾಜ್ಯದ 2023ರ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಸಾಕಷ್ಟು ಮುಖಂಡರ ಭೇಟಿಯಾಗುತ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಅನೇಕರು ಬಿಜೆಪಿಗೆ ಬರ್ತಾರೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಸಚಿವ ನಾರಾಯಣಗೌಡ ಬಿಜೆಪಿ ಬಂದ ನಂತರ ಕೆ.ಆರ್.ಪೇಟೆ ಅಭಿವೃದ್ಧಿ ಆಗಿದೆ. ಉಳಿದ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಕುಂಠಿತವಾಗಿವೆ. ಈಗ ಅಧಿಕಾರದಲ್ಲಿರುವ ಸರ್ಕಾರ ಇನ್ನು ನಾಲ್ಕೈದು ತಿಂಗಳಷ್ಟೇ ಇರುತ್ತದೆ. ಇವಾಗ ಮಂತ್ರಿಯಾದ್ರೆ ಜನಪರ ಕಾರ್ಯಕ್ರಮ ಮಾಡೋದು ಅಸಾಧ್ಯ. ಅವಕಾಶ ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು. ನಮಗೆ ಆ ಬಗ್ಗೆ ಆಸಕ್ತಿ ಕೂಡ ಇಲ್ಲ. ನನ್ನ ಗುರಿ ಇರೋದು ಮಂಡ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲೋದು. ಆ ಬಗ್ಗೆ ನಾನು ತಂತ್ರಗಾರಿಕೆ ಮಾಡ್ತಿದ್ದೇನೆ ಎಂದರು.
Assembly election: ಬಿಜೆಪಿಯೊಂದಿಗೆ ಶೀಘ್ರ ಜನಾರ್ಧನರೆಡ್ಡಿ ಪಕ್ಷದ ವಿಲೀನ: ಸಿ.ಪಿ. ಯೋಗೇಶ್ವರ
ಯೋಗಿ ಆದಿತ್ಯನಾಥ್ ಹಿಂದುತ್ವದ ಸಂಕೇತ:
ಯೋಗಿ ಆದಿತ್ಯನಾಥ್ ಬಿಟ್ಟರೆ ಕರ್ನಾಟಕದಲ್ಲಿ ಯಾರು ಸ್ವಾಮೀಜಿಗಳು ಇಲ್ವಾ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ರಾಮ ಮಂದಿರ ಕಟ್ಟುವ ವೇಳೆ ಎಲ್ಲಾ ಸ್ವಾಮೀಜಿಗಳು ಬರ್ತಾರೆ. ಯೋಗಿ ಆದಿತ್ಯನಾಥ್ ಹಿಂದೂತ್ವಕ್ಕೆ ದೇಶದಲ್ಲಿ ಸಿಂಬಾಲಿಕ್ ಆಗಿದ್ದಾರೆ. ಹೀಗಾಗಿ ಅವರ ಹೆಸರನ್ನು ಹೇಳಿದ್ದಾರೆ. ನಮ್ಮ ಸ್ವಾಮೀಜಿಗಳು ಇಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ. ಕುಮಾರಸ್ವಾಮಿ ಇಷ್ಟು ದಿನ ಒಕ್ಕಲಿಗರ ಹೆಸರು ಹೇಳಿಕೊಂಡು ರಾಜಕೀಯ ಮಾಡ್ತಾ ಇದ್ದರು. ಒಕ್ಕಲಿಗರಿಗಾಗಿ ಕುಮಾರಸ್ವಾಮಿ ಏನು ಮಾಡಿಲ್ಲ ಎಂದು ಕಾಲೆಳೆದರು.