
ರಾಯಚೂರು (ಮೇ.6) : ಓಸಾಮಾಬಿನ್ ಲಾಡೆನ್, ಮುಲ್ಲ ಓಮರ್‌ಗಳಿಗೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ತರುತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಗುಡುಗಿದರು.
ತಾಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ್ ಅವರ ಪರವಾದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ರಾಮನಗರದಲ್ಲಿದ್ದ ಶಿವನ ಬೆಟ್ಟವನ್ನು ಯೇಸು ಬೆಟ್ಟಮಾಡಿದರು. ಸಿದ್ದರಾಮಯ್ಯ ಟಿಪ್ಪುವಿನ ಜನ್ಮಕುಂಡಲಿ ಬರೆಸಿದ್ದಾರೆ. ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿಯೇ ಡಿಕೆಶಿ ಅವರ ಹೆಲಿಕಾಪ್ಟರ್ಗೆ ಹದ್ದು ಹೊಡೆದಿದೆ. ಸಿದ್ದರಾಮಯ್ಯನ ಕಾರಿನ ಮೇಲೆ ಕಾಗೆ ಕುಳಿತಿದೆ. ಇದು ಕಾಂಗ್ರೆಸ್ ನಾಯಕರನ್ನು ಕಂಡರೆ ಪ್ರಾಣಿ-ಪಕ್ಷಿಗಳಿಗೂ ಆಗಲ್ಲ ಎನ್ನುವುದನ್ನು ತಿಳಿಯುತ್ತಿದೆ ಎಂದು ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ(Siddaramaiah)ಗೆ ಟಾಂಗ್ ನೀಡಿದರು.
KARNATAKA ELECTION 2023: ಮಸ್ಕಿ ಕ್ಷೇತ್ರ ವಶಕ್ಕೆ ಮುಂದುವರಿದ ಗೌಡರ ಕದನ
ಸಿದ್ದರಾಮಯ್ಯ ವರುಣಾದಲ್ಲಿ ಮನೆಗೆ ಹೋಗುವುದು ನಿಶ್ಚಿತ. ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ತಿಣಕಾಡುತ್ತಿರುವ ಅವರು ರಾಜ್ಯದ ಸಿಎಂ ಆಗಲು ಹೊರಟಿದ್ದಾರೆ. ಹಿಂದೆ ವರುಣಾದಲ್ಲಿ ನಾಮಪತ್ರ ಹಾಕಿದ ನಂತರ ಬರುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕ ನಂತರ ಸೋಲಿನ ಭೀತಿ ಶುರುವಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಪುಕ್ಕಟೆ ಯೋಜನೆಗಳು ಬಗ್ಗೆ ಮಾತನಾಡುತ್ತಾರೆ ಹೊರತು ಅವರಿಗೆ ದೂರದೃಷ್ಟಿಯಿಲ್ಲ. ಸಿದ್ದರಾಮಯ್ಯರನ್ನು ಮೈಸೂರು ಜನರೆ ನಂಬುವುದಿಲ್ಲ. ಹಾಲಿ ಸಿಎಂರನ್ನು 35 ಸಾವಿರ ಮತಗಳ ಅಂತರದಿಂದ ಜನರು ಗೆಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಡಾ.ಮನಸುಖ ಮಾಂಡವೀಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ, ರಾಜ್ಯ ಉಸ್ತುವಾರಿ ಡಿ.ಕೆ.ಅರುಣಾ, ಅಭ್ಯರ್ಥಿ ತಿಪ್ಪರಾಜು ಹವಲ್ದಾರ,ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿದರು.
ದೇವದುರ್ಗ: ಜೆಡಿಎಸ್ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಎಪಿಎಂಸಿ ಅಧ್ಯಕ್ಷ ಅಚುತರೆಡ್ಡಿ, ಮುಖಂಡರಾದ ಎನ್.ಕೇಶವರೆಡ್ಡಿ, ಎಚ್.ಜಗದೀಶ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.