ವಿಧಾನಸಭಾ ಚುನಾವಣೆಗೆ ಮಸ್ಕಿ ಕಣದಲ್ಲಿ 7 ಜನರಿದ್ದು, ಅವರ ಪೈಕಿ ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ಸಾಗಿದೆ. ಕಣದಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಬಸನಗೌಡ ತುರ್ವಿಹಾಳ, ಜೆಡಿಎಸ್ನ ರಾಘವೇಂದ್ರ ನಾಯಕ ಬಳಗನೂರು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಂಗಮ್ಮ ಅಂಕುಶದೊಡ್ಡಿ ಮತ್ತು ಸೋಮನಗೌಡ, ಈಶಪ್ಪಗೌಡ ಮಾಲೀಪಾಟೀಲ್ ಹಾಗೂ ಹನುಮಂತಪ್ಪ ಅವರು ಪಕ್ಷೇತರಾಗಿ ಸ್ಪರ್ಧಿಸುತ್ತಿದ್ದಾರೆ
ರಾಮಕೃಷ್ಣ ದಾಸರಿ
ರಾಯಚೂರು (ಮೇ.6) : ಕಳೆದ ಐದು ವರ್ಷದಲ್ಲಿ ಎರಡು ಚುನಾವಣೆಗಳನ್ನು ಎದುರಿಸಿದ ಮಸ್ಕಿ ವಿಧಾನಸಭಾ ಕ್ಷೇತ್ರದ ಮತದಾರರು ಈ ಸಲ ಯಾರನ್ನು ಆಯ್ಕೆ ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲೆಡೆ ಮನೆಮಾಡಿದೆ. 2018ರಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕಂಡಿದ್ದ ಕ್ಷೇತ್ರದ ಮತದಾರರು ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ 2021ರಲ್ಲಿ ಉಪಚುನಾವಣೆಯನ್ನು ಎದುರಿಸಬೇಕಾಗಿತ್ತು. ಈ ಬಾರಿ ಯಾರ ಪರವಾಗಿ ಒಲವನ್ನು ತೋರುತ್ತಿದ್ದಾರೆ ಎನ್ನುವ ಗುಟ್ಟನ್ನು ಮತದಾರರು ಬಿಟ್ಟುಕೊಡುತ್ತಿಲ್ಲ.
undefined
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಫಲದಿಂದ ಹೊಸದಾಗಿ ಉದಯಗೊಂಡು ಪರಿಶಿಷ್ಟಪಂಗಡಕ್ಕೆ ಮೀಸಲಿನ ಮಸ್ಕಿ ವಿಧಾನಸಭಾ ಕ್ಷೇತ್ರವು ಕಳೆದ ಮೂರು ಸಾರ್ವತ್ರಿಕ ಮತ್ತು ಒಂದು ಉಪಚುನಾವಣೆಯನ್ನು ಎದುರಿಸಿ ಇದೀಗ ನಾಲ್ಕನೇ ಚುನಾವಣೆಗೆ ಸಿದ್ಧಗೊಂಡಿದೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಮೊದಲ ಸಲ ಶಾಸಕರಾಗಿ ಆಯ್ಕೆಯಾಗಿರುವ ಆರ್.ಬಸನಗೌಡ ತುರ್ವಿಹಾಳ ಅವರನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಮಣಿಸಿ ತಿರುಗೇಟು ನೀಡಲು ಬಿಜೆಪಿ ಪಣತೊಟ್ಟಿದ್ದು, ಆ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ರಣತಂತ್ರ ರೂಪಿಸುತ್ತಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ದಿವಾಳಿ ಹಂತಕ್ಕೆ ತಲುಪಿದೆ: ಬಿಎಸ್‌ವೈ
ಕ್ಷೇತ್ರದ ಇತಿಹಾಸ:
ಇತಿಹಾಸ ಪ್ರಸಿದ್ಧವಾದ ಅಶೋಕ ಶಿಲಾ ಶಾಸನವಿರುವ ಹೆಗ್ಗಳಿಕೆ ಹೊಂದಿರುವ ಮಸ್ಕಿ(Maski assembly constituency)ಯಲ್ಲಿ ಲಿಂಗಸುಗೂರು ತಾಲೂಕಿನ 54, ಸಿಂಧನೂರು ತಾಲೂಕಿನ 74 ಮತ್ತು ಮಾನ್ವಿ ತಾಲೂಕಿನ 42 ಹಳ್ಳಿಗಳನ್ನು ಸೇರಿಸಿ ಪುನರ್ ವಿಂಗಡಿಸಲಾಗಿತ್ತು. ಈ ಹಿಂದೆ ಮೂರು ತಾಲೂಕುಗಳನ್ನೊಳಗೊಂಡ ಕ್ಷೇತ್ರವು ಇದೀಗ ನೂತನ ತಾಲೂಕಾಗಿ ಮಾರ್ಪಟ್ಟಿದ್ದು, ಮಸ್ಕಿ, ಹಾಲಾಪೂರು, ಗುಡದೂರು, ಪಾಮನಕಲ್ಲೂರು, ಬಳಗಾನೂರು, ಗುಂಜಳ್ಳಿ, ತುರ್ವಿಹಾಳ ಸೇರಿದಂತೆ ಒಟ್ಟು 7 ಹೋಬಳಿಗಳು ಹಾಗೂ 123 ಹಳ್ಳಿಗಳು ಮಸ್ಕಿ ವಿಧಾನಸಭಾ ವ್ಯಾಪ್ತಿಗೆ ಸೇರಿವೆ.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ(Amaregowda Bayyapur) ಗರಡಿಯಲ್ಲಿ ಪಳಗಿದ್ದ ಪ್ರತಾಪಗೌಡ ಪಾಟೀಲ್(Pratap gowda patil), ಬಯ್ಯಾಪುರ ಜೊತೆಗೆ ಕಾಂಗ್ರೆಸ್‌ಗೆ ವಲಸೆ ಬಂದಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆಗೊಂಡು ಪರಿಶಿಷ್ಟಪಂಗಡಕ್ಕೆ ಮೀಸಲಾಯಿತೋ ಆಗ ಬಿಜೆಪಿಗೆ ಜಿಗಿದ ಪ್ರತಾಪಗೌಡ ಟಿಕೆಟ್ ಗಿಟ್ಟಿಸಿಕೊಂಡು ಶಾಸಕರಾಗಿಯೂ ಆಯ್ಕೆಯಾದರು. 2008ರಲ್ಲಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್ 2013ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ, ಎರಡನೇ ಸಲ ಗೆಲವು ದಾಖಲಿಸಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲವು ಕಂಡ ಪ್ರತಾಪಗೌಡ ಪಾಟೀಲ್ ಹ್ಯಾಟ್ರಿಕ್ ಬಾರಿಸಿ ಎರಡೇ ವರ್ಷದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸೋತಿದ್ದರು.
ಮಸ್ಕಿ ಕ್ಷೇತ್ರ ರಚನೆಯಾಗಿ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಸ್ಪರ್ಧಿಸಿ 35,711 ಮತಗಳನ್ನು ಪಡೆದಿದ್ದರು. 28,068 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಪ್ಪ ನಾಯಕ ವಿರುದ್ಧ ಪ್ರತಾಪಗೌಡ 7643 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು 45,552 ಮತಗಳನ್ನು ಪಡೆದು ಎರಡನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪ್ರತಿ ಸ್ಪರ್ಧಿ ಕೆಜೆಪಿಯಿಂದ 26,405 ಮತಗಳನ್ನು ಪಡೆದಿದ್ದ ಮಾವ ಮಹಾದೇವಪ್ಪ ಗೌಡ ವಿರುದ್ಧ 19,147 ಅಂತರದಲ್ಲಿ ಗೆಲವು ಸಾಧಿಸಿದ್ದರು. ಇನ್ನು ಬಿಎಸ್‌ಆರ್‌ನ ಶೇಖರಪ್ಪ ತಳವಾರ 18,197 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 60,387 ಮತಗಳನ್ನು ಪಡೆದಿದ್ದ ಪ್ರತಾಪಗೌಡ ಪಾಟೀಲ್ 60,174 ಮತಗಳನ್ನು ಗಳಿಸಿದ್ದ ಬಿಜೆಪಿ ಆರ್.ಬಸನಗೌಡ ತುರ್ವಿಹಾಳ ಅವರನ್ನು ಕೇವಲ 213 ಮತಗಳ ಅಂತರದಿಂದ ಪರಾಭವಗೊಳಿಸಿ ಮೂರನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದರು. 2021ರಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 55,731 ಮತಗಳನ್ನು ಪಡೆದಿದ್ದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‌ನಿಂದ ಕಣಕ್ಕಿಳಿದು 86,337 ಮತಗಳನ್ನು ಗಳಿಸಿದ್ದ ಆರ್.ಬಸನಗೌಡ ತುರ್ವಿಹಾಳ ವಿರುದ್ಧ ಬರೋಬ್ಬರಿ 30,606 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
ಒಂದು ಉಪಚುನಾವಣೆ ಸೇರಿ ಒಟ್ಟು 4 ಚುನಾವಣೆಗಳನ್ನು ಎದುರಿಸಿರುವ ಮಸ್ಕಿ ಕ್ಷೇತ್ರದ ಮತದಾರರು ಮೂರು ಸಲ ಪ್ರತಾಪಗೌಡ ಪಾಟೀಲ್ ಹಾಗೂ ಒಂದು ಬಾರಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಅವಕಾಶ ನೀಡಿದ್ದಾರೆ. ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಕಣದಲ್ಲಿ 7 ಜನರಿದ್ದು, ಅವರ ಪೈಕಿ ಬಿಜೆಪಿ-ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ಸಾಗಿದೆ. ಕಣದಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಬಸನಗೌಡ ತುರ್ವಿಹಾಳ, ಜೆಡಿಎಸ್ನ ರಾಘವೇಂದ್ರ ನಾಯಕ ಬಳಗನೂರು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಂಗಮ್ಮ ಅಂಕುಶದೊಡ್ಡಿ ಮತ್ತು ಸೋಮನಗೌಡ, ಈಶಪ್ಪಗೌಡ ಮಾಲೀಪಾಟೀಲ್ ಹಾಗೂ ಹನುಮಂತಪ್ಪ ಅವರು ಪಕ್ಷೇತರಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪ್ರತಾಪಗೌಡ ಪಾಟೀಲ್ ಉಪಚುನಾವಣೆ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಪೂರ್ಣ ಪ್ರಮಾಣದ ಅವಧಿಗೆ ಶಾಸಕರಾಗಲು ಕಾಂಗ್ರೆಸ್ನ ಆರ್.ಬಸನಗೌಡ ತುರ್ವಿಹಾಳ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
'ಮಸ್ಕಿಗೆ ಬರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಪ್ಪು ಬಾವುಟ ಪ್ರದರ್ಶನ'
ಮಸ್ಕಿ ಕ್ಷೇತ್ರದ ಮತದಾರರ ಸಂಖ್ಯೆ
ಜಾತಿ ಲೆಕ್ಕಾಚಾರ
ಈವರೆಗೆ ಆಯ್ಕೆಯಾದವರು......
ಅವಧಿ ಅಭ್ಯರ್ಥಿ ಪಕ್ಷ
2018 ರ ಫಲಿತಾಂಶ
2021ರ ಉಪಚುನಾವಣೆ ಫಲಿತಾಂಶ
ಅಭ್ಯರ್ಥಿ ಪಕ್ಷ ಪಡೆದ ಮತ