ಬಿಜೆಪಿ ಆಡಳಿತದ ವೈಫಲ್ಯದಿಂದಲೇ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರು (ಮೇ.6) : ಬಿಜೆಪಿ ಆಡಳಿತದ ವೈಫಲ್ಯದಿಂದಲೇ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಬೆ ಅಣೆಕಟ್ಟಿಗೆ ಒಳಹರಿವು ನಿಲ್ಲುವ ಸಮಯದಲ್ಲೇ ನೀರಿನ ಸಮರ್ಪಕ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಬೇಕಾಗಿತ್ತು. ಆದರೆ ಮೇಯರ್ ಆಗಲಿ, ಶಾಸಕರಾಗಲೀ, ಸಂಸದರಾಗಲೀ ನೀರಿನ ನಿರ್ವಹಣೆ ನಿಟ್ಟಿನಲ್ಲಿ ಯಾವುದೇ ಸಭೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ರೇಶನಿಂಗ್ ಆರಂಭಿಸುವಂತಾಗಿದೆ ಎಂದರು.
ಮನೆ ಮನೆಗೆ ತಿರುಗಿ ಮತದಾನ ಜಾಗೃತಿ ಮೂಡಿಸುತ್ತಿರುವ ಮೂರನೇ ತರಗತಿ ಬಾಲಕಿ!
ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟತೀವ್ರ ಕುಸಿತ ಆಗುವಾಗಲೇ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಬೇಕಿತ್ತು. ಎಎಂಆರ್ ಅಣೆಕಟ್ಟಿನ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸುವುದನ್ನು ನಿಲ್ಲಿಸಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿತ್ತು. ಇದು ಯಾವೊಂದೂ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನವೀನ್ ಡಿಸೋಜ ಆರೋಪಿಸಿದರು.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ನೀರಿನ ದರವನ್ನು ವಿಪರೀತ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ 24 ಸಾವಿರ ಲೀಟರ್ ನೀರಿಗೆ 65 ರು. ದರ ಇದ್ದದ್ದು, ಈಗ 165 ರು.ಗೂ ಹೆಚ್ಚಾಗಿದೆ. ಆಸ್ತಿ ತೆರಿಗೆಯಲ್ಲೂ ಭಾರಿ ಏರಿಕೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಬಜರಂಗದಳ ಆಕ್ರೋಶ
ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ಎ.ಸಿ. ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ಮಾಜಿ ಸದಸ್ಯ ದೀಪಕ್ ಪೂಜಾರಿ ಇದ್ದರು.