ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು 400ಕ್ಕೂ ಅಧಿಕ ಸೀಟು ಗೆಲ್ಲಬೇಕು ಅಂದಿದ್ದಾರೆ. 400 ಯಾಕೆ ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ರಾಜ್ಯಸಭೆಯಲ್ಲಿ ಇಲ್ಲ. ಸಂವಿಧಾನ ತಿದ್ದುಪಡಿ ಮಾಡೋದಾದರೆ ಬಹುಮತ ಅವಶ್ಯ ಎಂದು ಅನಂತಕುಮಾರ ಹೆಗ್ಡೆ ತಿಳಿಸಿದರು.
ಕಾರವಾರ, ಉತ್ತರಕನ್ನಡ (ಮಾ.9): ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು 400ಕ್ಕೂ ಅಧಿಕ ಸೀಟು ಗೆಲ್ಲಬೇಕು ಅಂದಿದ್ದಾರೆ. 400 ಯಾಕೆ ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ರಾಜ್ಯಸಭೆಯಲ್ಲಿ ಇಲ್ಲ. ಸಂವಿಧಾನ ತಿದ್ದುಪಡಿ ಮಾಡೋದಾದರೆ ಬಹುಮತ ಅವಶ್ಯ ಎಂದು ಅನಂತಕುಮಾರ ಹೆಗ್ಡೆ ತಿಳಿಸಿದರು.
ಲೋಕಸಭಾ ಚುನಾವಣೆ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಈ ಹಿಂದೆ ಕಾಂಗ್ರೆಸ್ ನವ್ರು ಸಂವಿಧಾನದ ಮೂಲರೂಪವನ್ನ ತಿರುಚಿದ್ದಾರೆ. ಅದರ ಬೇಡದೆ ಇರೋದನ್ನೆಲ್ಲ ತುರುಕಿದ್ದರು. ಆ ಮೂಲಕ ಇಡೀ ಹಿಂದೂ ಸಮಾಜವನ್ನು ಧಮನಿಸುವ ರೀತಿ ಕಾನೂನು ತಂದಿಟ್ಟಿದ್ದರು. ಇದೆಲ್ಲವೂ ಬದಲಾಗಬೇಕಿದ್ರೆ ಈ ಅಲ್ಪಮತದಲ್ಲಿ ಆಗುವುದಿಲ್ಲ. ಎರಡೂ ಕಡೆ 2/3 ಬಹುಮತ ಬೇಕಾಗುತ್ತೆ. ಕಾಂಗ್ರೆಸ್‌ನವರ ಸಂಖ್ಯೆ ಜಾಸ್ತಿಯಾದಾಗ ಏನೇ ತಿದ್ದುಪಡಿ ತಂದ್ರೂ ರಾಜ್ಯಸಭೆಯಲ್ಲಿ ಪಾಸ್ ಆಗೊಲ್ಲ. ಸಿಎಎಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಮುಂದೆ ಸಿಎಎ ಜಾರಿಯಾಗದಿದ್ರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಲಿ ಇರೋದಿಲ್ಲ ಎಂದರು.
ಸಂವಿಧಾನಕ್ಕೆ ಮೋದಿ ಸರ್ಕಾರದಿಂದ ಆತಂಕ: ಸಿಎಂ ಸಿದ್ದರಾಮಯ್ಯ
ಸಿಎಎ ಜಾರಿ ಆಗದಿದ್ರೆ ಏನಾಗುತ್ತಂದ್ರೆ ಇದೊಂದು ದೇಶದ್ರೋಹಿಗಳ ಆಡಂಬರ ಆಗುತ್ತೆ. ಹೀಗಾಗಿ ಎಲ್ಲ ಕಡೆ 2/3 ಮೆಜಾರಿಟಿ ಬರ್ಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತಾ. ಜಾತ್ರೆಗೆ ಒಂದು ಕಳೆ ಬರೋದೇ ಆವಾಗ. ಗೆದ್ದ ನಂತರ ನಾವು ಮೇಲೆ ಹೋಗಿಬಿಡ್ತಿವಿ. ಗ್ರಾಮ ಪಂಚಾಯತ್, ಲೋಕಸಭೆ, ವಿಧಾನಸಭೆ ಯಾವುದೇ ಇರಲಿ, ನಾನೇ ಅನ್ನೋದು ಬಂದುಬಿಡುತ್ತೆ. ನಾನೇ ದೇವ್ರು ಅನ್ನೋ ಭಾವನೆ ಬಂದುಬಿಡುತ್ತೆ, ಪತನ ಶುರುವಾಗೋದೇ ಅಲ್ಲಿಂದ. ಹಿಂದಿನ ಬಾರಿ 68% ವೋಟು ನಮಗೆ ಬಂದಿತ್ತು. ಒಟ್ಟು ಹಿಂದೂಗಳ 85% ವೋಟು ಈ ಕ್ಷೇತ್ರದಲ್ಲಿ ಬಂದಿತ್ತು. ಕೆಲವೊಂದು 15, 10ರಷ್ಟು ಸೋಡಾಬಾಟ್ಲಿ ಇರ್ತಾವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದರು.
ಕೇಂದ್ರದ ಹಣ ನಿಮ್ಮಪ್ಪನ ಮನೆ ಆಸ್ತೀನಾ?: ಸಿಎಂ ವಿರುದ್ಧ ಅನಂತಕುಮಾರ ಹೆಗಡೆ ಮತ್ತೆ ವಾಗ್ದಾಳಿ!
ಈ ದೇಶ ಸರಿ ಆಗಬೇಕು ಅಂದ್ರೆ ಹಿಂದೂಗಳಿಂದಲೇ ಹೊರತು ಬೇರೆಯವರಿಂದ ಅಲ್ಲ, ಅದು ಸಾಧ್ಯವೂ ಇಲ್ಲ. ಮೊದಲು ಈ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದರು.