ಸಿದ್ದರಾಮುಲ್ಲಾಖಾನ್ ಅಂದರೆ ಶುದ್ಧ ಜಾತ್ಯತೀತ ಪ್ರಶಸ್ತಿ. ಜಾತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಪ್ಪ ಯಾರಿಗೆ ಗೊತ್ತಿರಲ್ವೋ ಅವರಿಗೆ ಜಾತಿ ಅಂದರೆ ಗೊತ್ತಿರಲ್ಲ. ಅಂತಹವರು ಜಾತ್ಯತೀತರು ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮತ್ತೆ ಏಕವಚನದಲ್ಲೇ ಗದಾಪ್ರಹಾರ ನಡೆಸಿದರು.
ಬೆಳಗಾವಿ (ಮಾ.09): ಸಿದ್ದರಾಮುಲ್ಲಾಖಾನ್ ಅಂದರೆ ಶುದ್ಧ ಜಾತ್ಯತೀತ ಪ್ರಶಸ್ತಿ. ಜಾತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಪ್ಪ ಯಾರಿಗೆ ಗೊತ್ತಿರಲ್ವೋ ಅವರಿಗೆ ಜಾತಿ ಅಂದರೆ ಗೊತ್ತಿರಲ್ಲ. ಅಂತಹವರು ಜಾತ್ಯತೀತರು ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮತ್ತೆ ಏಕವಚನದಲ್ಲೇ ಗದಾಪ್ರಹಾರ ನಡೆಸಿದರು. ಬೈಲಹೊಂಗಲ ತಾಲೂಕಿನ ಸಂಪಗಾಂವಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳಿರುವ ಸಿದ್ದರಾಮಯ್ಯ ದೆಹಲಿಗೆ ಹೋಗಿ ಡೊಂಬರಾಟ ಮಾಡಿದರು. ಸಿದ್ದರಾಮಯ್ಯನವರೇ ಇದರ ಪರಿಣಾಮ ಏನಾಗುತ್ತೆ ಗೊತ್ತಾ ನಿಮಗೆ?
ದೇಶದಲ್ಲಿ ಶೇ.99.9 ತೆರಿಗೆ ಕೊಡುವವರು ಹಿಂದೂಗಳು. ಮುಸಲ್ಮಾನರ ಸಿರಿಯಾದಲ್ಲಿ ತೆರಿಗೆ ಕೊಡಬಾರದು ಕೊಟ್ಟರೆ ಅದು ಹರಾಮ್ ಅದು ಪಾಪ ಆಗುತ್ತದೆ. ಇಸ್ಲಾಮಿಕ್ ದೇಶ ಆಗಿಲ್ಲ, ನೀವು ಟ್ಯಾಕ್ಸ್ ಕೊಡಬೇಡಿ. ಇಸ್ಲಾಮಿಕ್ ದೇಶ ಆದ ಮೇಲೆ ಟ್ಯಾಕ್ಸ್ ಕೊಡಿ ಎಂದು ಅವರ ಧರ್ಮಶಾಸ್ತ್ರ ಹೇಳುತ್ತದೆ. ಅದಕ್ಕಾಗಿ ಮುಸ್ಲಿಮರು ಟ್ಯಾಕ್ಸ್ ಕೊಡುವುದಿಲ್ಲ ಎಂದರು. ನಂಬರ್ 2 ಬಿಜಿನೆಸ್ ಮಾಡುವುದರಲ್ಲಿ ಅವರೇ ಇರುತ್ತಾರೆ. ಟ್ಯಾಕ್ಸ್ ಕೊಡುವುದಿಲ್ಲ. ಅದರಲ್ಲಿ ಮತ್ತೆ ಹಕ್ಕು, ನಮ್ಮ ದುಡ್ಡಿನಿಂದ ಹೋಗಿ ಅವರು ಚರ್ಚ್, ಮಸೀದಿ ಕಟ್ಟಿದ್ದಾರೆ. ಅವರ ಅಪ್ಪನ ದುಡ್ಡ ಅಲ್ಲ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೊಡಿ ಎಂದು ಕೇಳಿದರೆ? ಆದರೆ ನಾವು ಸಣ್ಣ ಬುದ್ಧಿ ಜನ ಅಲ್ಲ, ಹಂಚಿಕೊಂಡು ತಿನ್ನುತ್ತೇವೆ.
ಲೋಕಸಭೆ ಚುನಾವಣೆ ನಂತ್ರ ದಲಿತ ಸಿಎಂ ಬಗ್ಗೆ ದನಿ: ಸಚಿವ ಸತೀಶ್ ಜಾರಕಿಹೊಳಿ
ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಅಂತಾ ಕೇಳಿದರೆ ಬೆಂಕಿ ಬೀಳುತ್ತವೆ ಎಂದು ಕುಟುಗಿದರು. ಯಾವತ್ತಿದ್ದರೂ ಅಪಪ್ರಚಾರ ಸುಳ್ಳು ಹೇಳೋದು ಕಾಂಗ್ರೆಸ್ ಸ್ವಭಾವ. ಎಲ್ಲರಿಗಿಂತ ಚೊಲೋ ಸುಳ್ಳು ಹೇಳುವ ಟ್ರೈನಿಂಗ್ ಬೇಕಾದರೆ ಕಾಂಗ್ರೆಸ್‌ನಿಂದ ಕಲಿಯಬೇಕು. ಈ ಕಾಂಗ್ರೆಸ್ ಸುಳ್ಳು ಹೇಳಿ ಹೇಳಿ ಪ್ರತಿ ಚುನಾವಣೆಯಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ. ಮೂರ್ಖ ಪ್ರಶ್ನೆಗಳಿಗೆ ನಾವು ಉತ್ತರ ಕೊಡಬಾರದು ಸುಮ್ಮನೆ ಇದ್ದು ಬಿಡಬೇಕು ಎಂದು ಹೇಳಿದರು. ನೀತಿ ನಿಯತ್ತು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಎರಡು ಸರಿ ಇದ್ದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಹಾಗೇ ಕೆಲಸ ಮಾಡುತ್ತದೆ. ನೀತಿ ನಿಯತ್ತು ಎರಡು ಇಲ್ಲಾ ಅಂದರೆ ಸಿದ್ದರಾಮುಲ್ಲಾಖಾನ್ ಸರ್ಕಾರ ರೀತಿ ಆಗುತ್ತದೆ ಎಂದು ಕುಟುಕಿದರು.
ರಿಬ್ಬನ್ ಕಟ್ ಮಾಡುವವರು ಬೇರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಮೋದಿ ಅವರು ಕರೆಕೊಟ್ಟಿದ್ದಾರೆ. ಆದ್ದರಿಂದ ಮತ್ತೋಮ್ಮೆ ಮೋದಿ ಅತ್ಯಂತ ಬಹುಮತದಿಂದ ಗೆಲ್ಲಬೇಕು. ಮೋದಿ ಯೋಜನೆಗಳು ದೇಶದ ಪ್ರತಿಯೊಂದು ಮನೆಗಳಿಗೂ ಮುಟ್ಟಿವೆ. ಅಲ್ಲದೇ ಗ್ರಾಮ ಪಂಚಾಯತಿಗೆ ಶೇ. 80 ರಷ್ಟು ಅನುದಾನ ಕೇಂದ್ರದಿಂದ ಬರುತ್ತೆ ರಾಜ್ಯ ಸರ್ಕಾರದಿಂದಲ್ಲ. ಕೇಂದ್ರ ಸರ್ಕಾರ ನೇರವಾಗಿ ಕೆಲಸ ಮಾಡೋದಿಲ್ಲ ಡಿಸಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತದೆ. ರೈಲ್ವೆ, ಏರ್ಪೋರ್ಟ್, ಡಿಫೆನ್ಸ್ , ಟೆಲಿಕಾಂ ಇಂತಹವುಗಳನ್ನು ಬಿಟ್ಟು ಬೇರೆ ಎಲ್ಲಾ ಕೆಲಸಗಳು ರಾಜ್ಯ ಸರ್ಕಾರದಿಂದ ಆಗಬೇಕಾಗುತ್ತದೆ. ಹಣ ನಾವು ಕೊಡತೇವಿ ರಿಬ್ಬನ್ ಕಟ್ ಮಾಡುವವರು ಬೇರೆಯವರಿರುತ್ತಾರೆ ಎಂದು ವ್ಯಂಗ್ಯವಾಡಿದರು.
ಟೀಕಾಪ್ರಹಾರ: ಕಾಂಗ್ರೆಸ್ ಬಂದು ಒಂದು ವರ್ಷವಾಗಿದೆ. ಈಗಾಲೇ ಲಗಾ ಹೊಡಿತಾ ಇದೆ. ಈ ಸರ್ಕಾರದಲ್ಲಿ ದುಡ್ಡೆ ಇಲ್ಲ. ಕಳೆದ ಹತ್ತು ತಿಂಗಳುಗಳಲ್ಲಿ ರಾಜ್ಯ ಸರ್ಕಾರ ದಿವಾಳಿ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡಿಲ್ಲದಂತಹ ಪರಿಸ್ಥಿತಿ ಬಂದಿದೆ. ಬಿಜೆಪಿ ಸರ್ಕಾರ ಹೋದ ಮೇಲೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೆವ್ವ ಬಡಿದಿದೆ ಎಂದು ರಾಜ್ಯ ಸರ್ಕಾರ ವಿರುದ್ದ ಮತ್ತೆ ಟೀಕಾಪ್ರಹಾರ ನಡೆಸಿದರು.
ಜಾತಿಯಿಂದ ದೂರ ಹೋಗಲು ಕಾಂಗ್ರೆಸ್ ಯೋಚನೆ: ಈ ದೇಶದ ಜನರನ್ನು ಹುಚ್ಚರನ್ನಾಗಿ ಕಾಂಗ್ರೆಸ್ ಮಾಡುತ್ತಿದೆ. ಈ ದೇಶದ ಧರ್ಮ, ಜಾತಿಯಿಂದ ದೂರ ಹೋಗಬೇಕು ಎಂದು ಕಾಂಗ್ರೆಸ್ ಯೋಚನೆ ಮಾಡುತ್ತಿದೆ. ನಮ್ಮ ನಮ್ಮ ತಲೆಯಲ್ಲಿ ಜಾತ್ಯತೀತ ಇರಲ್ಲ, ಈ ಭೂತ ನಮ್ಮ ತಲೆಯಲ್ಲಿ ಬಿಟ್ಟಿದ್ದು ಇಂದಿರಾ ಗಾಂಧಿ. ಜಾತ್ಯತೀತ ಬಂದ ಮೇಲೆ ಕಾಂಗ್ರೆಸ್ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆ ನಿರಂತರ ಅತ್ಯಾಚಾರ ಮಾಡಿದೆ. 1975ರ ಮೊದಲು ಶಾಲೆಯಲ್ಲಿ ವಚನ, ರಾಮಾಯಣ ಹೇಳಿಕೊಡುತ್ತಿದ್ದರು. ಸಂವಿಧಾನದಲ್ಲಿ 28ನೇ ಪರಿಚ್ಛೇದ ಬದಲಾವಣೆ ಮಾಡಿದರು. ಜತೆಗೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ಕೊಡುವ ಹಕ್ಕನ್ನು ಕಿತ್ತುಕೊಂಡರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಿ: ಸಚಿವ ತಿಮ್ಮಾಪುರ
ನಂತರ ಬಸವಣ್ಣ, ಅಕ್ಕಮಹಾದೇವಿ, ಮಹಾಭಾರತ ಎಲ್ಲ ಉಲ್ಲೇಖ ಪಠ್ಯಪುಸ್ತಕದಿಂದ ತೆಗೆದು ಹಾಕಿದರು. ಸಂವಿಧಾನವನ್ನು ತಿದ್ದುವ ಮೂಲಕ ಕಾಂಗ್ರೆಸ್ ಇದನ್ನುಮಾಡಿದೆ. ಆರ್ಟಿಕಲ್ 30ರಲ್ಲಿ ಮುಸ್ಲಿಮರಿಗೆ, ಚರ್ಚ್‌ಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಅಧಿಕಾರ ಕೊಟ್ಟಿದ್ದರಿಂದ ಮದರಸಾ ಮತ್ತು ಚರ್ಚ್‌ಗಳಲ್ಲಿ ಅವರಿಗೆ ಬೇಕಾದ ಶಿಕ್ಷಣ ಕೊಡುತ್ತಾರೆ. ಇದರಿಂದ ನಮ್ಮ ಮಕ್ಕಳು ಚಲೋ ಹುಡುಗಿ ಸಿಕ್ಕರೆ ಅಪ್ಪ ಮಕ್ಕಳನ್ನು ಆಶ್ರಮಕ್ಕೆ ಬಿಟ್ಟು ಓಡಿ ಹೋಗುತ್ತಾರೆ. ನಮ್ಮ ಮಕ್ಕಳು ಪ್ರಾಣಿಗಳಂತೆ ಬದುಕುತ್ತವೆ. ಸಂವಿಧಾನದ ಮೂಲಕ ನಮ್ಮ ಧರ್ಮ ಒಡೆದರು. ಇದಕ್ಕೆ ಮೋದಿ ಮತ್ತೊಮ್ಮೆ ಬರಬೇಕು ಎಂದು ಹೇಳಿದರು.