ಬಿಜೆಪಿ ಟಿಕೆಟ್ ವಂಚಿತ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಬೆಂಬಲಿಗನಿಗೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಬೂಟಿನಿಂದ ಹೊಡಿತೀನಿ ನನ್ನಮಗನೇ ಎಂದು ಬೈದಿದ್ದಾರೆ.
ಕೊಪ್ಪಳ (ಮಾ.14): ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿದೆ. ಈ ವೇಳೆ ಸಂಸದರ ಮನೆಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರಿಗೆ ನೀವ್ಯಾಕೆ ಮನೆಗೆ ಬಂದಿದ್ದೀರಿ ಎಂದು ಕರಡಿ ಸಂಗಣ್ಣನ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ 'ನೀನ್ಯಾವನೊ ನನ್ನ ಕೇಳೋಕೆ, ಬೂಟು ತಗೊಂಡು ಹೊಡಿತೀನಿ ನನ್ನಮಗನೆ' ಎಂದು ಬೈದಿದ್ದಾರೆ.
ಸಂಸದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲಿಯೇ ಅವರ ಬೆಂಬಲಿಗರು ಜಿಲ್ಲಾ ಬಿಜೆಪಿ ಕಚೇರಿಗೆ ಹೋಗಿ ದಾಂಧಲೆ ನಡೆಸಿದ್ದಾರೆ. ನಂತರ, ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದಾರೆ. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದ್ದಾನೆ. ಇದಕ್ಕೆ ತಿರುಗೇಟು ನೀಡಿದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳೂವುದಕ್ಕೆ ಎಂದು ಕೇಳಿದ್ದಾಳೆ.
undefined
ಸದಾನಂದಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!
ಆಗ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದು ಉತ್ತರಿಸಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ.. ನನ್ನ ಮಗನೇ... ಎಂದು ಬೈದಿದ್ದಾರೆ. ಈ ವೇಳೆ ಪೊಲೀಸರು ಬಂದು ಕಾರ್ಯಕರ್ತನನ್ನು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಮನೆಯಿಂದ ಹೊರಗೆ ಕಳಿಸಿದ್ದಾರೆ.
ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜುಗೆ ಅವಮಾನಿಸಿದ ಸಂಗಣ್ಣ ಬೆಂಬಲಿಗರು: ಇನ್ನು ಕೊಪ್ಪಳ ಲೋಕಸಭೆಯ ಬಿಜೆಪಿ ಟಿಕೆಟ್ ಪಡೆದುಕೊಂಡ ಡಾ.ಕೆ. ಬಸವರಾಜು ಕ್ಯಾವಟರ್ ಅವರು ಹಾಲಿ ಸಂಸದ ಕರಡಿ ಸಂಗಣ್ಣ ಅವರ ಬೆಂಬಲ ಕೇಳುವುದಕ್ಕೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮನೆಗೆ ಬಂದಿದ್ದಾರೆ. ಈ ವೇಳೆ ತನಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿದ್ದ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು ಅಭ್ಯರ್ಥಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಯಾರನ್ನು ಕೇಳಿ ಟಿಕೆಟ್ ಪಡೆದಿದ್ದೀರಿ ಎಂದು ಎಂದು ಪ್ರಶ್ನೆ ಮಾಡಿದ, ಕರಡಿ ಸಂಗಣ್ಣ ಪರ ಘೋಷಣೆ ಕೂಗಿದ್ದಾರೆ.
ನೀವು ಯಾರನ್ನು ಕೇಳಿ ಕೊಪ್ಪಳದ ಬಿಜೆಪಿ ಟಿಕೆಟ್ ಪಡೆದಿದ್ದೀರಿ. ನಿಮಗೆ ಮಾನ ಮರ್ಯಾದೆ ಇದ್ದರೆ, ಇಲ್ಲಿಗೆ ಬರಬಾರದಿತ್ತು. ಬಿಜೆಪಿಗೆ ಧಿಕ್ಕಾರ, ವಿಜಯೇಂದ್ರಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ಲೋಕಸಭಾ ಚುನಾವಣೆಯಲ್ಲಿ ನೀವು ಸೋಲುತ್ತೀರಿ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ. ಬಸವರಾಜುಗೆ ಹೇಳಿದರು. ಈ ವೇಳೆ ಮಾತನಾಡಲು ಬಂದ ಕರಡಿ ಸಂಗಣ್ಣ ಅವರನ್ನು ಮನೆಯ ಮೇಲ್ಮಹಡಿಗೆ ಕಳುಹಿಸಿದ ಕಾರ್ಯಕರ್ತರು, ಅಭ್ಯರ್ಥಿ ಡಾ. ಬಸವರಾಜ ಮತ್ತು ದೊಡ್ಡನಗೌಡ ಪಾಟೀಲ್ ಅವರನ್ನು ಭೇಟಿಯಾಗಲು ಬಿಡದೇ ವಾಪಸ್ ಹೋಗುವಂತೆ ಪಟ್ಟು ಹಿಡಿದರು. ಏನಿದ್ದರೂ ನೀವು ಪಾರ್ಟಿ ಕಚೇರಿಯಲ್ಲಿ ಮಾತನಾಡಿ, ಮನೆಗೆ ಬರಬೇಡಿ ಎಂದು ಆಗ್ರಹಿಸಿದರು. ಜೊತೆಗೆ, ಗೋ ಬ್ಯಾಕ್ ಬಸವರಾಜ್ ಎಂದು ಘೋಷಣೆ ಕೂಗಿದರು.
ಮೈಸೂರು ರಾಜವಂಶಸ್ಥ ಯದುವೀರ್ ರಾಜಕೀಯ ಪ್ರವೇಶ: ಈ ಹಿಂದೆಯೂ 4 ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಾಜವಂಶಸ್ಥರು
ಇನ್ನು ಕರಡಿ ಸಂಗಣ್ಣ ಅವರನ್ನು ಬೆಂಬಲಿಸುವಂತೆ ಕೇಳಲು ಬಂದಿದ್ದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜು ಹಾಗೂ ದೊಡ್ಡನಗೌಡ ಪಾಟೀಲ್ ಅವರು ಮಾತುಕತೆ ನಡೆಸಲು ಸಾಧ್ಯವಾಗದೇ ವಾಪಸ್ ತೆರಳಿದರು. ನಂತರ, ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಮುಂದಾದರು. ಈ ವೇಳೆ ಬಿಜೆಪಿ ಕಚೇರಿಗೂ ತೆರಳಿದ ಸಂಸದ ಕರಡಿ ಸಂಗಣ್ಣನ ಬೆಂಬಲಿಗರು ಸುದ್ದಿಗೋಷ್ಠಿ ನಡೆಯುವ ಸ್ಥಳದಲ್ಲಿ ಗದ್ದಲ ಉಂಟುಮಾಡಿದರು. ನಂತರ ಬೇಕೇಬೇಕು ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದರು. ಬಿಜೆಪಿ ಕಚೇರಿಯ ಮಾಧ್ಯಮ ಕೇಂದ್ರದ ಬಾಗಿಲು ಬಡಿದು ಕರಡಿ ಸಂಗಣ್ಣ ಪರವಾಗಿ ಘೋಷಣೆ ಕೂಗಿದರು.