ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಯಾರೋ ನನಗೆ ಗೊತ್ತಿಲ್ಲ ಎಂದ ಡಿಕೆ ಸುರೇಶ್`!

By Ravi Janekal  |  First Published Mar 14, 2024, 2:04 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ ಮಂಜುನಾಥ್ ಸ್ಪರ್ಧಿಸಿರೋದನ್ನ ನಾನು ಸ್ವಾಗತಿಸುತ್ತೇನೆ. ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಮಾಡುವುದು ನನಗೆ, ಶಿವಕುಮಾರ್‌ಗೆ ಹೊಸದಲ್ಲ ಎಂದು ಸಂಸದ ಡಿಕೆ ಶಿವಕುಮಾರ ತಿಳಿಸಿದರು.


ರಾಮನಗರ (ಮಾ.14): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ ಮಂಜುನಾಥ್ ಸ್ಪರ್ಧಿಸಿರೋದನ್ನ ನಾನು ಸ್ವಾಗತಿಸುತ್ತೇನೆ. ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಮಾಡುವುದು ನನಗೆ, ಶಿವಕುಮಾರ್‌ಗೆ ಹೊಸದಲ್ಲ ಎಂದು ಸಂಸದ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್, ದೇವೇಗೌಡರು, ಎಚ್‌ಡಿ ಕುಮಾರಸ್ವಾಮಿಯವರ ಪಕ್ಷ ಸರಿಯಿಲ್ಲ ಎಂದು ಅಳಿಯ ಬಿಜೆಪಿಯಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ.  ಈ ಬಗ್ಗೆ ಜನತಾದಳದ ಕಾರ್ಯಕರ್ತರು ಯೋಚನೆ ಮಾಡಬೇಕಿದೆ. ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ, ಅವರ ಜನಪ್ರಿಯತೆ ಇಲ್ಲ ಎಂಬುದನ್ನ ಅವರ ಅಳಿಯ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಮೂಲಕ ತೋರಿಸಿದ್ದಾರೆ. ಜೆಡಿಎಸ್ ಪಕ್ಷವಾಗಲಿ, ಅದರ ನಾಯಕತ್ವವಾಗಲಿ ಅಸ್ತಿತ್ವದಲ್ಲಿಲ್ಲ ಎಂಬುದು ಡಾ ಮಂಜುನಾಥ್‌ಗೆ ಗೊತ್ತಾಗಿಯೇ ಅವರು ಬೇರೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರೇ ಈಗಲಾದ್ರೂ ಬನ್ನಿ ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ಒಟ್ಟಾಗಿ ಕೆಲಸ ಮಾಡೋಣ ಬನ್ನಿ ಎನ್ನುವ ಮೂಲಕ ಮುಕ್ತ ಡಿಕೆ ಸುರೇಶ್ ಮುಕ್ತ ಆಹ್ವಾನ ನೀಡಿದರು.

Tap to resize

Latest Videos

ರಾಯಚೂರು: ಬೆಳಗ್ಗೆ 11 ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಸಮಾವೇಶ 1 ಗಂಟೆಯಾದ್ರೂ ಸಿಎಂ, ಡಿಸಿಎಂ ಸುಳಿವಿಲ್ಲ!

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ ಯಾರೆಂಬುದು ನನಗೆ ಗೊತ್ತಿಲ್ಲ. ದೇವೇಗೌಡರ ಅಳಿಯ ಡಾ. ಮಂಜುನಾಥ್ ಈಗ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು ಮೊದಲು ಅರ್ಜಿ ಹಾಕಲಿ ಆಮೇಲೆ ಮಾತನಾಡ್ತೀನಿ. ಸದ್ಯ ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು. ಇದೇ ವೇಳೆ ಬಿಜೆಪಿಯಲ್ಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡದೇ ಕೈಕೊಟ್ಟಿದ್ದಾರೆ ಎಂಬ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ಪಕ್ಷ ಕಟ್ಟಿದ ಕಟೀಲ್ ರನ್ನ ಏನ್ ಮಾಡಿದ್ದಾರೋ ಗೊತ್ತಿಲ್ಲ. ನನಗೆ ಗುಂಡಿಕ್ಕಿ ಕೊಲ್ತೀನಿ ಅಂದೋರು ಬಿಜೆಪಿ ವಿರುದ್ಧವೇ ಬಂಡಾವೆದ್ದಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ. ಟಿಕೆಟ್ ಸಿಗದ ಬಿಜೆಪಿ ನಾಯಕರ ವಿರುದ್ಧ ಸಂಸದ ಡಿಕೆ ಸುರೇಶ್ ವ್ಯಂಗ್ಯ ಮಾಡಿದರು.

ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್‌ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಪ್ಲಾನ್!

click me!