ಕಾಂಗ್ರೆಸ್‌ಗೆ ನವ ಚೈತನ್ಯ ತರಲಿರುವ ಭಾರತ್‌ ಜೋಡೋ ಯಾತ್ರೆ: ಎಚ್‌.ವಿಶ್ವನಾಥ್‌

By Govindaraj S  |  First Published Oct 24, 2022, 11:33 PM IST

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಕಾಂಗ್ರೆಸ್‌ಗೆ ನವ ಚೈತನ್ಯ ತರಲಿದ್ದು, ಸಂಘಟನೆಗೂ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು. 


ಕೆ.ಆರ್‌. ನಗರ (ಅ.24): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಕಾಂಗ್ರೆಸ್‌ಗೆ ನವ ಚೈತನ್ಯ ತರಲಿದ್ದು, ಸಂಘಟನೆಗೂ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪಾದಯಾತ್ರೆಯಿಂದ ರಾಹುಲ್‌ ಅವರ ಶಕ್ತಿ ಅನಾವರಣವಾಗಿ ನಾಯಕತ್ವ ಗಟ್ಟಿಯಾಗಲಿದ್ದು, ಈ ಸಮಯದಲ್ಲಿ ಅವರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಮತ್ತು ಪಡೆಯುತ್ತಿರುವ ಅನುಭವ ಅವರನ್ನು ಪರಿಪಕ್ವ ನಾಯಕನನ್ನಾಗಿ ಮಾಡಲಿದೆ ಅವರು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಯಾವ ರಾಜಕೀಯ ಪಕ್ಷಗಳು ಮುಳುಗುವ ಹಡಗಲ್ಲ, ಅವು ಸದಾ ಜನರೊಂದಿಗೆ ಸಂಚಾರ ಮಾಡುವ ಹಡಗುಗಳು, ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಎಲ್ಲರಿಗೂ ಸಾಮಾನ್ಯ ಎಂದು ವ್ಯಾಖ್ಯಾನಿಸಿದರು. ತಾವು ಕಾಂಗ್ರೆಸ್‌ ಸೇರುತ್ತೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಇದಕ್ಕತ್ತರಿಸಿದ ಅವರು, ರಾಜಕೀಯ ನಿಂತ ನೀರಲ್ಲ, ಮುಂದೆ ಏನಾಗುತ್ತದೊ ಎಂದು ಉತ್ತರಿಸಿ ಆ ಪಕ್ಷದ ಬಗ್ಗೆ ತಮ್ಮ ಮೃದು ಧೋರಣೆ ವ್ಯಕ್ತಪಡಿಸಿದರು.

Latest Videos

undefined

ದಲಿತರ ಮನೆಗೆ ಸಿಎಂ, ಸಚಿವರ ಭೇಟಿಗೆ ಎಚ್ ವಿಶ್ವನಾಥ್ ಕಿಡಿ

ಉದ್ಯೋಗ ಮೇಳದ ಬಗ್ಗೆ ಅಸಮಾಧಾನ: ಕೇಂದ್ರ ಸರ್ಕಾರ ಉದ್ಯೋಗ ಮೇಳದ ಹೆಸರಿನಲ್ಲಿ ಒಮ್ಮೆಲೆ ಲಕ್ಷಾಂತರ ಮಂದಿಗೆ ಕೆಲಸ ನೀಡುತ್ತಿರುವುದು ಸಂತಸದ ವಿಚಾರ, ಆದರೆ ಇಲ್ಲಿ ಮೀಸಲಾತಿ ಅನ್ವಯ ಉದ್ಯೋಗ ಸಿಗದೆ ಅರ್ಹರು ವಂಚಿತರಾಗಲಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸಂವಿಧಾನದ ಸ್ಪಷ್ಟಉಲ್ಲಂಘನೆಯಾಗುತ್ತಿದ್ದು, ಆ ಮೂಲಕ ಕಡ್ಲೆಕಾಯಿ ತಿನ್ನುವವನಿಗೆ ಸಿಗಬೇಕಾದ ಉದ್ಯೋಗ ಮತ್ತು ಮೀಸಲಾತಿ ಬಾದಾಮಿ ತಿನ್ನುವವನಿಗೆ ದೊರೆಯಲಿದ್ದು, ಅರ್ಹರು ಬೀದಿ ಪಾಲಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಸುಲಭವಲ್ಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದಾಗಿ ಸರ್ಕಾರವೇನೋ ಘೋಷಣೆ ಮಾಡಿದೆ. ಆದರೆ, ಇದನ್ನು ಜಾರಿಗೆ ತರುವುದು ಸುಲಭವಲ್ಲ, ಬಹಳ ಕಷ್ಟವಿದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಈಗ ಘೋಷಿಸಿರುವ ವಿಷಯವನ್ನು ಅಧಿವೇಶನದ ಮುಂದೆ ತರಬೇಕು. ಶೆಡ್ಯೂಲ್‌ 9ರಡಿ ಸಮಗ್ರ ಚರ್ಚೆಯಾಗಬೇಕು. ಜೊತೆಗೆ ನಾಡಿನುದ್ದಕ್ಕೂ ಚರ್ಚೆಯಾಗಬೇಕು. ನಂತರ ಜಾರಿಗೆ ಬರಬೇಕಾಗುತ್ತದೆ ಎಂದರು.

ಎಸ್ಸಿ-ಎಸ್ಟಿಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿರುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಸರ್ಕಾರದ ಈ ನಿರ್ಧಾರದಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ಈಶ್ವರಪ್ಪ ಏನು ಮಾಡುತ್ತಿದ್ದಾರೆ? ಈ ಅನ್ಯಾಯ ಒಪ್ಪುತ್ತಾರಾ? ಮುಂದೆ ಎಲ್ಲ ಜನಾಂಗದವೂ ಇದೇ ರೀತಿ ಮೀಸಲಾತಿ ಹೆಚ್ಚಿಸುವಂತೆ ಕೇಳುತ್ತಾರೆ ಎಲ್ಲರಿಗೂ ಸರ್ಕಾರ ಕೊಡೋಕಾಗುತ್ತಾ ಎಂದರು.

ಯಾರೂ ಸಿಗದಿದ್ದಾಗ ವಿಶ್ವನಾಥ್‌ ಆತ್ಮೀಯರಿಗೆ ಮದ್ದಾಕುತ್ತಾರೆ: ಸಚಿವ ಸೋಮಶೇಖರ್‌

ಇದೇ ವೇಳೆ ಮೀಸಲಾತಿ ಸೌಲಭ್ಯವನ್ನು ಉತ್ತಮ ಸ್ಥಿತಿಯಲ್ಲಿರುವ ಕುಟುಂಗಳು ಪಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ ಅವರು, ಕುರಿ ಕಾಯೋನು ಹಾಗೂ ಎಚ್‌.ವಿಶ್ವನಾಥ್‌ ಮಗ ಇಬ್ಬರೂ ಒಂದೇ ಅಲ್ಲ, ಊರಲ್ಲಿ ತಮಟೆ ಬಾರಿಸುವವನು, ಮಲ್ಲಿಕಾರ್ಜುನ ಖರ್ಗೆ ಅವರ ಮಗನೂ ಒಂದೇ ಅಲ್ಲ. ಮಲ ಬಳಿಯೋನು ಕೆ.ಎಚ್‌.ಮುನಿರಪ್ಪ ಅವರ ಮಗ ಒಂದೇ ಅಲ್ಲ ಅಲ್ವಾ? ಕಡಲೆ ಬೀಜ ತಿನ್ನೋನು, ಬಾದಾಮಿ ತಿನ್ನೋನು ಒಂದೇ ಅಲ್ಲ. ಹಾಗಾಗಿ ಈ ಬಗ್ಗೆಯೂ ಚರ್ಚೆ ಆಗಬೇಕು. ನಿಜವಾಗಿ ಮೀಸಲಾತಿ ಯಾರಿಗೆ ಸಿಗಬೇಕೆಂಬ ಬಗ್ಗೆಯೂ ಸ್ಪಷ್ಟ ನಿಯಮಗಳು ರೂಪುಗೊಳ್ಳಬೇಕು ಎಂದು ಪ್ರತಿಪಾದಿಸಿದರು.

click me!