Chikkamagaluru: ಮೋಟಮ್ಮ ಪುತ್ರಿ ನಯನಾಗೆ ಟಿಕೆಟ್‌ ಬೇಡ: ಕೈ ಮುಖಂಡರು

By Kannadaprabha News  |  First Published Oct 24, 2022, 11:01 PM IST

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಅವರಿಗೆ ಟಿಕೆಟ್‌ ಬೇಡ ಎಂಬ ಒತ್ತಾಯ ಕಾಂಗ್ರೆಸ್‌ ಮುಖಂಡರಿಂದ ಕೇಳಿಬಂದಿತ್ತು. ಇದೀಗ ಅವರ ಪುತ್ರಿ ನಯನಾ ಅವರಿಗೆ ಟಿಕೆಟ್‌ ಕೊಡುವುದು ಬೇಡ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. 


ಚಿಕ್ಕಮಗಳೂರು (ಅ.24): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಅವರಿಗೆ ಟಿಕೆಟ್‌ ಬೇಡ ಎಂಬ ಒತ್ತಾಯ ಕಾಂಗ್ರೆಸ್‌ ಮುಖಂಡರಿಂದ ಕೇಳಿಬಂದಿತ್ತು. ಇದೀಗ ಅವರ ಪುತ್ರಿ ನಯನಾ ಅವರಿಗೆ ಟಿಕೆಟ್‌ ಕೊಡುವುದು ಬೇಡ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಮೂಡಿಗೆರೆ ಮೀಸಲು ಕ್ಷೇತ್ರ. ಇಲ್ಲಿ ಮೋಟಮ್ಮ ಅವರು ಹಲವು ಬಾರಿ ಶಾಸಕರಾಗಿ, ಸಚಿವರಾಗಿ, ಕಾಂಗ್ರೆಸ್‌ನ ಸಿಡಬ್ಲ್ಯೂಸಿ ಸದಸ್ಯರಾಗಿದ್ದರು. ಆದ್ದರಿಂದ ಬೇರೆಯವರಿಗೆ ಟಿಕೆಟ್‌ ನೀಡಬೇಕೆಂದು 2018ರ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್‌ ಮುಖಂಡರು ಪ್ರಯತ್ನ ನಡೆಸಿದ್ದರು. ಆದರೂ ಮೋಟಮ್ಮ ಅವರಿಗೆ ಟಿಕೆಟ್‌ ನೀಡಲಾಗಿತ್ತು.

ಆದರೆ, ಈ ಬಾರಿ ತನ್ನ ಮಗಳು ನಯನಾ ಅವರಿಗೆ ಟಿಕೆಟ್‌ ಕೊಡಿಸಲು ಮೋಟಮ್ಮ ಪ್ರಯತ್ನದಲ್ಲಿದ್ದಾರೆ. ಈ ಬೆಳವಣಿಗೆ ನಡುವೆ ಕೆಲವು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಗ್ರಾಮದಲ್ಲಿ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಸಭೆ ನಡೆಸಿದ್ದಾರೆ. ನಯನಾ ಮೋಟಮ್ಮ ಸೋಲೋ ಕ್ಯಾಂಡಿಡೇಟ್‌. ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೇರೆ ಯಾರನ್ನಾದರೂ ಅಭ್ಯರ್ಥಿಯಾಗಿ ಮಾಡಿ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ ಎಂದು ಪಕ್ಷದ ಮುಖಂಡರು ಹೇಳಿರುವುದು ವೈರಲ್‌ ಆಗಿದೆ. ಅವರು ಮಾತು ಮುಂದುವರಿಸಿ, ಕೆಪಿಸಿಸಿ ಕಚೇರಿಗೆ ಹೋದಾಗ ಬಾಗಿಲು ತೆಗೆಯಬೇಕು, ರಾಜಕೀಯವಾಗಿ ಅವರು ಇನ್ನು ಬೆಳೆಯಲಿ. 

Tap to resize

Latest Videos

ಅವದೂತ ವಿನಯ್ ಗೂರೂಜಿಗೆ ಪಾದಪೂಜೆ: ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

ನಯನಾ ಮೋಟಮ್ಮ ಅವರು ಚುನಾವಣೆ ಅಭ್ಯರ್ಥಿ ಆಗೋದು ಬೇಡ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಪಕ್ಷದ ವರಿಷ್ಠರ ಗಮನಕ್ಕೆ ತರೋಣ ಎಂದರು. ಯಾವುದೇ ಕಾಲೋನಿ, ಊರಿಗೆ ಹೋದ್ರು ನಯನಾ ಮೋಟಮ್ಮ ಅವರಿಗೆ ಜನರು ಒಪ್ಪುತ್ತಿಲ್ಲ. ಸೋಲುವ ಅಭ್ಯರ್ಥಿ ಜತೆ ರಾಜಿ ಇಲ್ಲ. ಅವರಿಗೆ 20 ಬಾರಿ ಟಿಕೆಟ್‌ ಕೊಟ್ಟರೂ ಗೆಲ್ಲೋದಿಲ್ಲ. ದಯವಿಟ್ಟು ಅವರು ಜಾಗ ಖಾಲಿ ಮಾಡಬೇಕೆಂದು ಕೋರಿಕೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಇನ್ನು 6 ತಿಂಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್‌ ಪಾಳೆಯದಲ್ಲಿ ಆಗಿರುವುದು ಮೋಟಮ್ಮ ಅವರಿಗೆ ಹಿನ್ನಡೆಗೆ ಮುನ್ನುಡಿ ಬರೆದಂತಾಗಿದೆ.

ದೇವೀರಮ್ಮ ದೇವಸ್ಥಾನ; ಬರಿಗಾಲಲ್ಲಿ 3800 ಅಡಿ ಬೆಟ್ಟವೇರಿ ಹರಕೆ ತೀರಿಸಲು ಭಕ್ತರು ಸಜ್ಜು

ಜೆಡಿಎಸ್‌ನಲ್ಲೂ ಅಪಸ್ವರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಲವು ಮಂದಿ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದಾರೆ. ಈ ಬಾರಿ ಪಕ್ಷದ ಟಿಕೆಟ್‌ ಸಿಗುವುದು ಪಕ್ಕ ಎನ್ನುತ್ತಿದ್ದಾರೆ. ಇದರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಸಹ ವ್ಯಕ್ತವಾಗುತ್ತಿವೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಭಿನ್ನಮತ ಸ್ಫೋೕಟಗೊಂಡಿದೆ. ಇತ್ತೀಚೆಗೆ ಜೆಡಿಎಸ್‌ ಮುಖಂಡರು ಸಭೆಯನ್ನು ನಡೆಸಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ನಿರ್ಣಯ ಕೈಗೊಂಡಿದ್ದರು. ಇದೀಗ ಕಾಂಗ್ರೆಸ್‌ನಲ್ಲಿ ನಯನಾ ಮೋಟಮ್ಮ ಅವರ ಸರದಿ. ಈ ಎರಡು ಪಕ್ಷಗಳಲ್ಲಿನ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಕಾದು ನೋಡಬೇಕಾಗಿದೆ.

click me!