ಎಚ್‌.ಡಿ.ಕುಮಾರಸ್ವಾಮಿಗೆ ಸೋಲಿನ ಭಯ ಕಾಡ್ತಿದೆ: ಸಿ.ಪಿ.ಯೋಗೇಶ್ವರ್‌

By Govindaraj S  |  First Published Oct 24, 2022, 9:31 PM IST

ಜಿಲ್ಲೆಯಲ್ಲಿ ಇದುವರೆಗೂ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್‌ - ಜೆಡಿಎಸ್‌ ಕ್ಷೇತ್ರಗಳಲ್ಲಿ ಬಿಜೆಪಿ ಸದೃಢವಾಗಿರುವುದರಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಟಾಂಗ್‌ ನೀಡಿದರು. 


ರಾಮನಗರ (ಅ.24): ಜಿಲ್ಲೆಯಲ್ಲಿ ಇದುವರೆಗೂ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್‌ - ಜೆಡಿಎಸ್‌ ಕ್ಷೇತ್ರಗಳಲ್ಲಿ ಬಿಜೆಪಿ ಸದೃಢವಾಗಿರುವುದರಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಟಾಂಗ್‌ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗುತ್ತಿದೆ. ಹಾಗಾಗಿ ಕುಮಾರಸ್ವಾಮಿಗೆ ಯಾವ ಕ್ಷೇತ್ರದಲ್ಲಿಯೂ ಗೆಲ್ಲವು ಸಾಧ್ಯವಿಲ್ಲ. ಇದರಿಂದ ಹತಾಷರಾಗಿದ್ದಾರೆ ಎಂದು ಕುಟುಕಿದರು. 

ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಈಗ ಬಿಜೆಪಿ ಆ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಕಳೆದ ನಾಲ್ಕು ವರ್ಷದಿಂದ ಎಚ್‌ಡಿಕೆ ಕ್ಷೇತ್ರಕ್ಕೆ ಬರಲಿಲ್ಲ. ನಾನು ಕ್ಷೇತ್ರದಲ್ಲಿಯೇ ಓಡಾಡುತ್ತಿದ್ದಾನೆ ಎಂದರು. ಹಾಲಿಗಾದರೂ ಹಾಕಿ ನೀರಿಗಾದದರೂ ಹಾಕಿ ಅಂತ ಕುಮಾರಸ್ವಾಮಿ ಹಳೇ ಡೈಲಾಗ್‌ ಹೇಳುತ್ತಲೇ ಇರುತ್ತಾರೆ. ಇದರ ಜತೆಗೆ, ಒಮ್ಮೊಮ್ಮೆ ಹೃದಯ ಸಮಸ್ಯೆ ಇದೇ ಎಂದು ಹೇಳಿ ಕಣ್ಣೀರು ಸುರಿಸುತ್ತಾರೆ. 

Tap to resize

Latest Videos

ಗ್ರಾಮೀಣ ಭಾಗದ ಜನರ ಕಷ್ಟ ಎಚ್‌ಡಿಕೆಗೇನು ಗೊತ್ತು?: ಸಿ.ಪಿ.ಯೋಗೇಶ್ವರ್‌

ಭಾವನಾತ್ಮಕವಾಗಿ ಜನತೆಯನ್ನು ಸೆಳೆಯುವ ಕಾಲ ಹೀಗಿಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಅವರು ಪಿಡಿಒ ಪರವಾಗಿಯೂ ವಾದ ಮಾಡುವ ಲೆವೆಲ್‌ಗೆ ಹೋಗಿದ್ದಾರೆ. ಈ ತನಕ ಬಿಜೆಪಿ ಸರಕಾರದ ಸಹಕಾರ ಬೇಕಾಗಿತ್ತು. ದಿನ ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಬಳಿ ಎಚ್ಡಿಕೆ ತೆರಳಿ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು. ಈ ವಿಚಾರ ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿ ಅವರಿಗೆ ಹೆದರಿಸಿ, ಬೆದರಿಸಿ ರೂಢಿಯಾಗಿದೆ. ನಾವು ಸವಾಲು ಹಾಕಲು ಸಿದ್ದವಿಲ್ಲ. ಇದಕ್ಕೆ ನಾನು ಜಗ್ಗುವವರಲ್ಲ. ಅಧಿಕಾರದಲ್ಲಿ ಇದ್ದಾಗ ಕುಮಾರಸ್ವಾಮಿ ಅವರು ಸರಿಯಾಗಿ ಆಡಳಿತ ನಡೆಸಲಿಲ್ಲ. 

ಎರಡು ಬಾರಿ ಸಿಎಂ ಆಗಿ ಸರಿಯಾದ ಆಡಳಿತ ರಾಜ್ಯಕ್ಕೆ ನೀಡಲಿಲ್ಲ. ಇನ್ನು ಜೆಡಿಎಸ್‌ಗೆ ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವವೇ ಇಲ್ಲದಂತೆ ಆಗಿದೆ ಎಂದು ವ್ಯಂಗ್ಯವಾಡಿದರು. ಜಿಲ್ಲಾ ಮಂತ್ರಿ ಅಶ್ವತ್ಥನಾರಾಯಣ ಅವರಿಗೆ ಹೇಗೆ ಆಡಳಿತ ನಡೆಸಬೇಕೆಂಬುದು ತಿಳಿದಿದೆ. ನಾವು ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ. 2023ಕ್ಕೆ ರಾಜ್ಯದಲ್ಲಿ ಮತ್ತೆ ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಯೋಗೇಶ್ವರ್‌ ಭವಿಷ್ಯ ನುಡಿದರು.

ಕೆಂಗಲ್‌ ದೇಗುಲದಲ್ಲಿ ಮೃತ್ತಿಕಾ ಸಂಗ್ರಹ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಆವರಣದ ಥೀಮ್‌ ಪಾರ್ಕ್ ನಿರ್ಮಾಣಕ್ಕಾಗಿ ಪವಿತ್ರ ಕ್ಷೇತ್ರಗಳಿಂದ ಮೃತ್ತಿಕೆ ಸಂಗ್ರಹಿಸುವ ಉದ್ದೇಶದಿಂದ ಹೊರಟಿರುವ ರಥ ತಾಲೂಕಿಗೆ ಕೆಂಗಲ್‌ ಆಂಜನೇಯ ದೇವಸ್ಥಾನಕ್ಕೆ ಅಗಮಿಸಿ, ದೇವಾಲಯದ ಮೃತ್ತಿಕೆ(ಮಣ್ಣು) ಸಂಗ್ರಹಿಸಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ನಾರಾಯಣ್‌ ನೇತೃತ್ವದ ಮೃತ್ತಿಕಾ ಸಂಗ್ರಹಣಾ ರಥವನ್ನು ಕೆಂಗಲ್‌ ದೇವಾಲಯದ ಆಡಳಿತ ಮಂಡಳಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿತು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿ.ಬಿ.ಚಂದ್ರು ದೇವಾಲಯದ ಪರವಾಗಿ ಪವಿತ್ರ ಮೃತ್ತಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಸ್ತಾಂತರಿಸಿದರು.

ನಾನೂ ಒಬ್ಬ ಶಾಸಕ : ನಾನೇನೂ ಪಾಕಿಸ್ತಾನದಿಂದ ಬಂದಿದ್ದೇನಾ? ಸಿಪಿವೈ

ವಿಧಾನಪರಿಷತ್‌ ಸದಸ್ಯ ಯೋಗೇಶ್ವರ್‌ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರಮೆಮೆ ಜತೆಗೆ ಆ ಸ್ಥಳದಲ್ಲಿ ಥೀಮ್‌ ಪಾರ್ಕ್ ನಿರ್ಮಿಸುವುದರಿಂದ ಬೇರೆ ದೇಶದಿಂದ ಬೆಂಗಳೂರಿಗೆ ಆಗಮಿಸುವವರಿಗೂ ಕೆಂಪೇಗೌಡರ ಚರಿತ್ರೆ ತಿಳಿಸುವಂತ ಕೆಲಸ ಮಾಡುತ್ತಿರುವುದುಒಕ್ಕಲಿಗರೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಶ್ಘಾಘಿಸಿದರು. ಈ ವೇಳೆ ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಉಪಾಧ್ಯಕ್ಷ ಕುಳ್ಳಪ್ಪ ಇತರರಿದ್ದರು.

click me!