Council Election Result: ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆ ಗಾಳಿ : ಕಾಂಗ್ರೆಸ್ ವಿಜೇತ ಅಭ್ಯರ್ಥಿ ಭವಿಷ್ಯ

By Kannadaprabha News  |  First Published Dec 15, 2021, 3:37 PM IST
  • ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ
  • ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಚುನಾಯಿತಗೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ

 ಬೆಳಗಾವಿ (ಡಿ.15):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಚುನಾಯಿತಗೊಂಡಿರುವ ಕಾಂಗ್ರೆಸ್‌ (Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಸಂದರ್ಶನ ನೀಡಿದ್ದಾರೆ.

ಪ್ರಶ್ನೆ- ನಿಮ್ಮ ಗೆಲುವಿಗೆ ಕಾರಣವೇನು?

Tap to resize

Latest Videos

ಉತ್ತರ- ಕಾಂಗ್ರೆಸ್‌  ಪಕ್ಷದ ಗೆಲುವಿನ ಶ್ರೇಯಸ್ಸು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ (Satish Jarkiholi) ಅವರಿಗೆ ಸಲ್ಲುತ್ತದೆ. ಅವರ ನಿಂತರ ಪರಿಶ್ರಮದಿಂದ ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಆಯ್ಕೆಯಾಗಿದ್ದೇನೆ. ಸತೀಶ ಜಾರಕಿಹೊಳಿ ಹಾಗೂ ನಮ್ಮ ಸಹೋದರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ (Lakshmi Hebbalkar) ಮತ್ತು ಪಕ್ಷದ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ.

ಪ್ರಶ್ನೆ- ನಿಮಗೆ ಮೊದಲೇ ಈ ಗೆಲುವಿನ ಬಗ್ಗೆ ನಿರೀಕ್ಷೆ ಇತ್ತೇ?

ಉತ್ತರ- ಹೌದು, ನಮಗೆ ಮೊದಲೇ ವಿಶ್ವಾಸವಿತ್ತು. ಸತೀಶ ಜಾರಕಿಹೊಳಿ ಅವರು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರ ವಿಶ್ವಾಸವೇ ನಮ್ಮ ವಿಶ್ವಾಸವಾಗಿತ್ತು. ಆದ್ದರಿಂದ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂಬ ನಂಬಿಕೆಯೂ ಬಲವಾಗಿತ್ತು.

ಪ್ರಶ್ನೆ-ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು, ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ ಎಂದು ಜಾರಕಿಹೊಳಿ ಸಹೋದರರು ಪ್ರಚಾರ ಮಾಡಿದ್ದರಲ್ಲ?

ಉತ್ತರ-ನಾನು ಯಾರ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಾವು ಯಾರನ್ನೂ ಸೋಲಿಸಲು ಚುನಾವಣೆ (election) ನಿಂತಿರಲಿಲ್ಲ. ನಮ್ಮ ಗೆಲುವು ಒಂದೇ ಗುರಿಯಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆ ಗಾಳಿ ಬಿಸಿದೆ, ಜನರು ಸಹ ಬದಲಾವಣೆ ಬಯಸಿದ್ದಾರೆ. ಆದ ಕಾರಣ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದ್ದಾರೆ.

ಪ್ರಶ್ನೆ- ನಿಮ್ಮ ಗೆಲುವಿನ ಹಿಂದೆ ನಿಮ್ಮ ಸಹೋದರಿ ಲಕ್ಷ್ಮೇ ಹೆಬ್ಬಾಳಕರ ಪಾತ್ರದ ಕುರಿತು ಏನು ಹೇಳುವಿರಿ?

ಉತ್ತರ- ಕಾರ್ಯ ನಿನ್ನದಾಗಲಿ, ಯಶಸ್ಸು ದೇವರಿಗೆ ಬಿಟ್ಟಿದ್ದು ಎಂದು ಶಾಸಕಿ ಹೆಬ್ಬಾಳಕರ ಯಾವಾಗಲೂ ಹೇಳುತ್ತಿದ್ದರು. ಅವರ ಮಾರ್ಗದಲ್ಲಿಯೇ ನಾನು ನಡಿದೆ. ಅವರೇ ನನಗೆ ರೋಲ್‌ ಮಾಡೆಲ…, ನನಗೆ ದೇವರು ಇದ್ದಂತೆ.

ಬೆಳಗಾವಿ  ಫಲಿತಾಂಶ ದ ಹೈಲೈಟ್ಸ್

ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರು

ಬೆಳಗಾವಿಯಲ್ಲಿ (Belagavo) ಜಾರಕಿಹೊಳಿ ಕುಟುಂಬ ರಾಜಕೀಯದಲ್ಲಿ ಬಹಳ ಪ್ರಬಲ ಮತ್ತು ಬಲಿಷ್ಠವಾಗಿದೆ. ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಈಗ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರಾದಂತೆ ಆಗಿದೆ. ಈ ಹಿಂದೆ ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ಅಣ್ಣನ ವಿರುದ್ಧವೇ ಸ್ಪರ್ಧೆ ಮಾಡುವ ಮೂಲಕ ಸೋಲು ಕಂಡಿದ್ದ ಉದ್ಯಮಿ ಲಖನ್‌ ಜಾರಕಿಹೊಳಿಯನ್ನು ವಿಧಾನ ಪರಿಷತ್‌ಗೆ ಪ್ರವೇಶ ಪಡೆದಿದ್ದಾರೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಈಗಾಗಲೇ ಶಾಸಕರಾಗಿದ್ದಾರೆ.

ಸೋತ ಅಣ್ಣನೇ ಈಗ ಗೆಲ್ಲಿಸಿದ!

ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್‌ಗೆ (Congress) ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದರು. ಈ ವೇಳೆ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ರಮೇಶ ಜಾರಕಿಹೊಳಿ ಗೆಲುವು ಸಾಧಿಸಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿಯೇ ತನ್ನ ತಮ್ಮನ ಗೆಲುವಿನ ರೂವಾರಿಯಾಗಿದ್ದಾರೆ.

ರಾಜಕೀಯ ಕುಟುಂಬಗಳಿಗೆ ಗೆಲುವು

ವಿಧಾನ ಪರಿಷತ್‌ ದ್ವಿಸದಸ್ಯತ್ವ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. ಗೆದ್ದಿರುವ ಇಬ್ಬರೂ ರಾಜಕೀಯ ಕುಟುಂಬದವರೇ ಎನ್ನುವುದು ವಿಶೇಷ. ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರರ ಸಹೋದರರಾದರೆ, ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರ ಸಹೋದರರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮೂವರು ಶಾಸಕರಾಗಿದ್ದಾರೆ.

ಪಕ್ಷೇತರರಿಗೆ ಮತ್ತೆ ಮಣೆ ಹಾಕಿದ ಮತದಾರ

2015ರ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿವೇಕರಾವ್‌ ಪಾಟೀಲ್‌ ಅವರು ಸುಲಭವಾಗಿ ಗೆಲವು ಸಾಧಿಸಿದ್ದರು. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಮತದಾರರ ಪಕ್ಷೇತರ ಅಭ್ಯರ್ಥಿಗೆ ಆದ್ಯತೆ ನೀಡಿದ್ದ. ಅದರಂತೆಯೇ 2021ರ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶದಲ್ಲಿಯೂ ಮತದಾರ ಮತ್ತೆ ಪಕ್ಷೇತರ ಅಭ್ಯರ್ಥಿಗೆ ಆದ್ಯತೆ ನೀಡಿದ್ದಾನೆ. ಪ್ರಸಕ್ತ ಬಾರಿ ಗೋಕಾಕ ಉದ್ಯಮಿ ಲಖನ್‌ ಜಾರಕಿಹೊಳಿರನ್ನು ಆಯ್ಕೆ ಮಾಡಿದ್ದಾನೆ.

click me!