ಚುನಾವಣೆ ಸಮೀಪವಾಗುತ್ತಿರುವಾಗ ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಕೇಸರೆರೆಚಾಟ ಜೋರಾಗಿದೆ ಅಭಿವೃದ್ಧಿ ಮನೆ ಹಾಳಾಗಿ ಹೋಗಲಿ ಅಂತ ಜನಪ್ರತಿನಿಧಿಗಳು ನಿರ್ಧಾರ ಮಾಡಿದ್ದು, ನಾನಾ ನೀನಾ ಅಂತ ತೊಡೆ ತಟ್ಟಿದ್ದಾರೆ. ಅದ್ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಆ.20): ಚುನಾವಣೆ ಸಮೀಪವಾಗುತ್ತಿರುವಾಗ ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಕೇಸರೆರೆಚಾಟ ಜೋರಾಗಿದೆ ಅಭಿವೃದ್ಧಿ ಮನೆ ಹಾಳಾಗಿ ಹೋಗಲಿ ಅಂತ ಜನಪ್ರತಿನಿಧಿಗಳು ನಿರ್ಧಾರ ಮಾಡಿದ್ದು, ನಾನಾ ನೀನಾ ಅಂತ ತೊಡೆ ತಟ್ಟಿದ್ದಾರೆ. ಅದ್ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ. ಹಾಯಾಗಿ ಸ್ವಿಮ್ಮಿಂಗ್ ಮಾಡುವಷ್ಟು ಕಿತ್ತು ಹೋಗಿರುವ ರಸ್ತೆಗಳು. ಧೂಳಿನ ಜೊತೆ ಜೀವನ ಸಾಗಿಸುತ್ತಿರುವ ಜನ ಸಾಮಾನ್ಯರು. ಬೆಲೆ ಸಿಗದೆ ಕಂಗೆಟ್ಟಿರುವ ರೈತರು. ತಮ್ಮ ಪಾಡಿಗೆ ತಾವು ಸಭೆಗಳನ್ನು ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು. ಅಂದಹಾಗೆ ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು, ಚಿನ್ನದನಾಡು ಅಂತಾನೆ ಪ್ರಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ.
ಹೌದು! ಇಲ್ಲಿ ಹೆಸರಿಗೆ ಮಾತ್ರ ಚಿನ್ನದನಾಡು ಅಂತ ಕರೆಯಲ್ಪಡುವ ಕೋಲಾರ ಜಿಲ್ಲೆಯ ಪರಿಸ್ಥಿತಿ ಯಾವ ಜಿಲ್ಲೆಗೂ ಬಾರದಿರಲಿ ಅನ್ನುವಂತಿದೆ, ರಾಜಧಾನಿ ಬೆಂಗಳೂರಿಗೆ ಅತೀ ಸಮೀಪವಿರುವ ಕೋಲಾರ ಜಿಲ್ಲೆಯಲ್ಲಿ ಇಲ್ಲಿರುವ ಕಿತ್ತೊಗಿರುವ ರಸ್ತೆಗಳಲ್ಲಿ ಬಿದ್ದು, ಕೈಕಾಲು ಮುರಿದುಕೊಂಡು ಅದೆಷ್ಟೋ ಜನರು ಆಸ್ಪತ್ರೆ ಸೇರುತ್ತಿದ್ದರೆ ಮತ್ತಷ್ಟು ಜನರು ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ್ದಾರೆ. ಇದರ ನಡುವೆ ಪ್ರಮುಖ ರಸ್ತೆ ಮಾತ್ರವಲ್ಲದೆ ಎಲ್ಲಾ ಸಂದಿಗೊಂದಿ ರಸ್ತೆಗಳು ಸಹ ಧೂಳಿನಿಂದ ಕೂಡಿಕೊಂಡಿದ್ದು, ಜನರು ನಾನಾ ರೀತಿಯ ಖಾಯಿಲೆಗಳಿಂದ ನರಳಾಡ್ತಿದ್ದಾರೆ.
Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!
ಇನ್ನು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತೆ ಬೆಲೆ ಸಿಗದೆ ರೈತರು ದಿಕ್ಕೆಟ್ಟು ಹೋಗಿದ್ದಾರೆ. ಇದಷ್ಟೇ ಅಲ್ಲದೆ ಜ್ವಲಂತ ಅದೆಷ್ಟೋ ಸಮಸ್ಯೆಗಳು ಜಿಲ್ಲೆಯ ಜನರಿಗೆ ಕಾಡ್ತಿದ್ದರೂ ಸಹ ಇಲ್ಲಿನ ಎಲ್ಲಾ ಕ್ಷೇತ್ರದ ಶಾಸಕರು ಹಾಗೂ ಉಸ್ತುವಾರಿ ಸಚಿವರು ಮಾತ್ರ ಪ್ರತಿಷ್ಠೆಯ ರಾಜಕಾರಣಕ್ಕೆ ಮುಂದಾಗಿದ್ದಾರೆ. ನಾವೇಕೆ ಅವರು ಕರೆದಾಗ ಹೋಗಬೇಕು, ಅವರ ಬಳಿ ಹೋಗಬೇಕು ಅಂತ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು ತೀರ್ಮಾನ ಮಾಡಿದ್ದು, ಉಸ್ತುವಾರಿ ಸಚಿವರನ್ನು ಲೆಕ್ಕಕ್ಕೆ ಇಡದೇ ರಾಜಕಾರಣ ಮಾಡ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇಂದು ಜಿಲ್ಲಾ ಪಂಚಾಯತ್‌ಯಲ್ಲಿ ಕೆಡಿಪಿ ಸಭೆಯನ್ನು ಉಸ್ತುವಾರಿ ಸಚಿವರಾದ ಮುನಿರತ್ನ ಅವರು ಕರೆದಿದ್ದರೂ ಸಹ ಎಲ್ಲಾ ಶಾಸಕರು ಗೈರು ಹಾಜರಾಗಿದ್ದರು.
ಜಿಲ್ಲೆಯ ಆರು ಕ್ಷೇತ್ರದ ಶಾಸಕರು ಕೆಡಿಪಿ ಸಭೆಗೆ ಹಾಜರು ಆಗದೆ ಮಾತಾಡಿಕೊಂಡು ಒಗ್ಗಟ್ಟಿನಿಂದ ಗೈರು ಆಗಿದ್ದಾರೆ. ಕೇವಲ ನಾಮಕವಸ್ಥೆಗೆ ಮಾತ್ರ ಶಾಸಕರಿಗೆ ಪತ್ರ ಕಳುಹಿಸಿಕೊಡಲಾಗಿದ್ದು, ನಮಗೆ ಯಾರು ಕರೆ ಮಾಡಿ ಸೌಜನ್ಯಕ್ಕಾದ್ರು ಕರೆದಿಲ್ಲ ಎಂದು ಶಾಸಕರು ಗೈರಾಗಿದ್ದಾರೆ. ಅದಲ್ಲದೆ ಕ್ಷೇತ್ರದಲ್ಲಿ ಕೃಷ್ಣಾ ಜನ್ಮಾಷ್ಟಮಿ ಕಾರ್ಯಕ್ರಮಗಳು ಇರೋದ್ರಿಂದ ಬೇಕಂತಾನೆ ಕೆಡಿಪಿ ಸಭೆ ಕರೆದಿದ್ದಾರೆ ಎಂದು ಶಾಸಕರೆಲ್ಲಾ ಕೋಪಗೊಂಡು ಪ್ರತಿವೊಬ್ಬರು ಕೆಡಿಪಿ ಸಭೆಗೆ ಗೈರಾಗಿದ್ದಾರೆ. ಇನ್ನು ಶಾಸಕರಿಗಾಗಿ ಸಚಿವ ಮುನಿರತ್ನ ಕೆಲಕಾಲ ಕಾದು ಬಳಿಕ ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಬೆಂಗಳೂರಿಗೆ ವಾಪಸ್ಸಾದರು. ಕೆಲ ಭ್ರಷ್ಟ ಅಧಿಕಾರಿಗಳಿಗೆ ತಮ್ಮ ಕ್ಷೇತ್ರದ ಶಾಸಕರು ಕೆಡಿಪಿ ಸಭೆಗೆ ಗೈರು ಹಾಗಿದ್ದು ಖುಷಿ ಕೊಟ್ಟಿದ್ದು, ಅಬ್ಬಾ ತಪ್ಪಿಸಿಕೊಂಡ್ವಿ ಅಂತ ಮನೆಗೆ ತೆರಳಿದರು.
ಜಮೀನು ವಿವಾದ; ತಹಶೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಲೂರು ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡರು,ನಾವು ಫೋನ್ ಮಾಡಿ ಕರೆದಿದ್ದೇವೆ ಎಂದು ಸಚಿವರು ಸುಳ್ಳು ಹೇಳ್ತಿದ್ದಾರೆ. ಉದ್ದೇಶ ಪೂರಕವಾಗಿ ಕೃಷ್ಣ ಜನ್ಮಾಷ್ಟಮಿ ದಿನದಂದೇ ಸಭೆ ನಡೆಸಿದ್ದಾರೆ. ನಮ್ಮನ್ನು ಕಡೆಗಣಿಸಿದಕ್ಕೆ ನಾವೆಲ್ಲ ಶಾಸಕರು ಗೈರಾಗಿದ್ದೇವೆ ಎಂದು ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು. ಅದೇನೇ ಇರಲಿ ಇವರುಗಳ ರಾಜಕೀಯ ಕಿತ್ತಾಟದಿಂದ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿದಿದ್ದು, ಹುಚ್ಚರ ಮದುವೆಯಲ್ಲಿ ಉಂಡೋನೇ ಜಾಣ ಎಂಬಂತೆ ಕೆಲ ಭ್ರಷ್ಟ ಅಧಿಕಾರಿಗಳು ಮಜಾ ಮಾಡ್ತಿದಾರೆ. ಜನಸಾಮಾನ್ಯರು ಮಾತ್ರ ವೋಟು ಹಾಕಿದ ತಪ್ಪಿಗೆ ಪಶ್ಚಾತಾಪ ಪಡ್ತಿದ್ದಾರೆ.