ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

By Ravi Nayak  |  First Published Aug 19, 2022, 4:40 PM IST

ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಪ್ರತಿಭಟನೆಗೆ ಇಳಿದ ಕಾಂಗ್ರೆಸ್ ಟೈರ್‌ಗೆ ಬೆಂಕಿ ಹಚ್ಚಿ ಹಿಂಸಾಚಾರಕ್ಕಿಳಿಯಲು ಯತ್ನಿಸಿದೆ.ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ (ಆಗಸ್ಟ್ 19) : ಸಾಮಾನ್ಯವಾಗಿ ಕುಳಿತು ಧರಣಿ ಮಾಡೋದು, ಧಿಕ್ಕಾರ ಕೂಗೋದು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸೋದು‌ ಕಾಮನ್. ಆದರೆ ಟೈಯರ್ ಗೆ ಬೆಂಕಿ ಹಚ್ಚಿ ಮ ಬಂದಂತೆ ತೂರಾಡಿ ಹುಚ್ಚಾಟ ಮೆರೆಯೋ ಪ್ರತಿಭಟನೆ(Protest) ಎಲ್ಲಾದರೂ ನೋಡಿದಿರಾ? ಹಾವೇರಿ(Haveri) ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ(Congress Karyakarta)  ಪುಂಡಾಟ ಒಂದು ಎಲ್ಲೆ ಮೀರಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಾರಿಗೆ ಮೊಟ್ಟೆ  ಹೊಡೆದಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ರು. ಹಾವೇರಿ ನಗರದ ಪ್ರಮುಖ ಹೊಸಮನಿ ಸಿದ್ದಪ್ಪ ವೃತ್ತ(Hosmani siddappa Circle)ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೊದಲಿಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ರು. ಆದರೆ ನೋಡ ನೋಡುತ್ತಲೇ ಪರಿಸ್ಥಿತಿ ಬದಲಾಯಿತು. 

Tap to resize

Latest Videos

undefined

Karnataka Politics: ಬಿಜೆಪಿ ಸರ್ಕಾರದ ಬಗ್ಗೆ ಜನತೆ ವಿಶ್ವಾಸ ಮಾಯ: ಸಲೀಂ ಅಹ್ಮದ್‌

ಟೈರ್ ಗೆ ಬೆಂಕಿ ಹಚ್ಚಿ ಸುಡಲು ಕಾಂಗ್ರೆಸ್ ಕಾರ್ಯಕರ್ತರು ತಯಾರಾದರು. ಈ ವೇಳೆ ಪೊಲೀಸ(Police)ರು ಟೈರ್ ಗೆ ಬೆಂಕಿ ಹಚ್ಚಬೇಡಿ. ಇದರಿಂದ ಅನಗತ್ಯ ತೊಂದರೆಯಾಗುತ್ತೆ. ಇದಕ್ಕೆ ಪೊಲೀಸ್ ಇಲಾಖೆ(Depertment of Police) ಅವಕಾಶ ನೀಡುವುದಿಲ್ಲ ಎಂದು ತಿಳಿ ಹೇಳಿದರು. ಆದರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪೊಲೀಸರು ಎಂದು ಧಿಕ್ಕಾರ ಕೂಗಿದ್ದಲ್ಲದೇ ಟೈರ್ ಗೆ ಬೆಂಕಿ ಹಚ್ಚಿ ಎಸೆಯತೊಡಗಿದರು. 

ಮೈಗೆ ಬೆಂಕಿ ಅಂಟುವ ಸಾಧ್ಯತೆಗಳ ನಡುವೆಯೂ ಜೀವದ ಹಂಗು ತೊರೆದು ಪೊಲೀಸರು ಟೈರ್ ತುಳಿದು ಬೆಂಕಿ ಆರಿಸಲು ಮುಂದಾದರು. ಇನ್ನೊಂದೆಡೆ ಮತ್ತೊಂದು ಗುಂಪು ಮತ್ತೊಂದು ಟೈರ್ ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ ಶುರುವಾಯಿತು. 

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಕಾಂಗ್ರೆಸ್ ನಾಯಕರು ಪೊಲೀಸರ ವಶಕ್ಕೆ

ಹೊಸಮನಿ ಸಿದ್ದಪ್ಪ ಸರ್ಕಲ್ ಕುಸ್ತಿ ಅಖಾಡದಂತಾಗಿ ಹೋಯ್ತು. ಬೆಂಕಿ ಹಚ್ಚಿ ಬೇಕಾ ಬಿಟ್ಟಿಯಾಗಿ ಟೈಯರ್ ಎಸೆದು ಕಾಂಗ್ರೆಸ್ ಕಾರ್ಯಕರ್ತರು ಪುಂಡಾಟ ಮೆರೆದರು. ಸ್ಥಳಕ್ಕೆ ದೌಡಾಯಿಸಿದ ಹಾವೇರಿ ಎಸ್ ಪಿ ಹನುಮಂತರಾಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಾಜ್ ಹಾಕಿ ಗದರಿದರು. ಇದರಿಂದ ಕೊಂಚ ಪರಿಸ್ಥಿತಿ ತಿಳಿಯಾಯಿತು. ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತಾ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸಿ ಮನೆ ಕಡೆ ನಡೆದರು...

click me!