ವರದಿ: ಅಂಶಿ ಪ್ರಸನ್ನಕುಮಾರ್
ಮೈಸೂರು (ನ.30): ಮೈಸೂರು- ಚಾಮರಾಜನಗರ (Mysuru - Chamarajanagar ) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ (MLC Election) ಗೆಲ್ಲುವುದನ್ನು ಮೂರು ಪ್ರಮುಖ ರಾಜಕೀಯ ಪಕ್ಷಗಳ (Political parties) ಸವಾಲಾಗಿ ಸ್ವೀಕರಿಸಿವೆ. ಇದರಿಂದಾಗಿಯೇ ಮೂರು ಪಕ್ಷಗಳ ಸಂಸದರು, ಶಾಸಕರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚುನಾವಣೆಗೆ ಸೀಮಿತ ಸಂಖ್ಯೆಯ ಮತದಾರರಿದ್ದರೂ ಕೂಡ ಪ್ರಚಾರ ಮಾತ್ರ ಸಾರ್ವತ್ರಿಕ ಚುನಾವಣೆಯಂತೆ ನಡೆಯುತ್ತಿದೆ. ಉಭಯ ಜಿಲ್ಲೆಗಳ 15 ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ (Congress MLAs). ಹನೂರಿನ ಆರ್. ನರೇಂದ್ರ, ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿ, ಹುಣಸೂರಿನ ಎಚ್.ಪಿ. ಮಂಜುನಾಥ್, ನರಸಿಂಹರಾಜದ ತನ್ವೀರ್ ಸೇಠ್, ವರುಣದ ಡಾ.ಎಸ್. ಯತೀಂದ್ರ,ಎಚ್.ಡಿ. ಕೋಟೆಯ ಅನಿಲ್ ಚಿಕ್ಕಮಾದು- ಕಾಂಗ್ರೆಸ್ ಪ್ರತಿನಿಧಿಸುವ ಶಾಸಕರು. ಈ ಎಲ್ಲಾ ಐವರು ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಲ್ಕು ಕಡೆ ಜೆಡಿಎಸ್ (JDS) (ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡ (GT Devegowda), ಕೆ.ಆರ್. ನಗರದ ಸಾ.ರಾ. ಮಹೇಶ್, ಪಿರಿಯಾಪಟ್ಟಣದ ಕೆ. ಮಹದೇವ್ ಹಾಗೂ ಟಿ. ನರಸೀಪುರದ ಎಂ. ಅಶ್ವಿನ್‌ಕುಮಾರ್) ಶಾಸಕರಿದ್ದಾರೆ. ಈ ನಾಲ್ವರ ಪೈಕಿ ಜಿ.ಟಿ. ದೇವೇಗೌಡರು ಸಮ್ಮಿಶ್ರ ಸರ್ಕಾರ ಪತನಾನಂತರ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಉಳಿದ ಮೂವರು ಪಕ್ಷದ ಪರ ಪ್ರಚಾರ ನಿರತರಾಗಿದ್ದಾರೆ.
ಬಿಜೆಪಿಯ (BJP) ಐವರು (ಕೃಷ್ಣರಾಜದ ಎಸ್.ಎ. ರಾಮದಾಸ್, ಚಾಮರಾಜದ ಎಲ್. ನಾಗೇಂದ್ರ, ನಂಜನಂಗೂಡಿನ ಬಿ. ಹರ್ಷವರ್ಧನ್, ಗುಂಡ್ಲು ಪೇಟೆಯ ಸಿ.ಎಸ್. ನಿರಂಜನ ಕುಮಾರ್ ಹಾಗೂ ಬಿಎಸ್ಪಿಯಿಂದ (BSP) ಗೆದ್ದು ಪಕ್ಷ ಸೇರಿರುವ ಕೊಳ್ಳೇಗಾಲದ ಎನ್. ಮಹೇಶ್(N Mahesh)) ಶಾಸಕರಿದ್ದಾರೆ. ಎಲ್ಲರೂ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಎರಡು ಲೋಕಸಭಾ ಕ್ಷೇತ್ರಗಳಲ್ಲೂ (Loksabha Constituency ) ಬಿಜೆಪಿ (ಚಾಮರಾಜನಗರ- ವಿ. ಶ್ರೀನಿವಾಸ ಪ್ರಸಾದ್, ಮೈಸೂರು - ಪ್ರತಾಪ್ ಸಿಂಹ (Pratap Simha ) ಗೆದ್ದಿದೆ. ಪ್ರತಾಪ್ ಸಿಂಹ ಪಕ್ಷದ ಪರ ಓಡಾಡುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್ ಇನ್ನಷ್ಟೇ ಹೋಗಬೇಕಾಗಿದೆ.
ಕಾಂಗ್ರೆಸ್‌ನಲ್ಲಿ (Congress) ಆರ್. ಧರ್ಮಸೇನ, ಜೆಡಿಎಸ್‌ನಲ್ಲಿ ಸಂದೇಶ್ ನಾಗರಾಜ್ (Sandesh Nagaraj), ಮರಿ ತಿಬ್ಬೇಗೌಡ, ಕೆ.ಟಿ. ಶ್ರೀಕಂಠೇ ಗೌಡ, ಬಿಜೆಪಿಯಲ್ಲಿ ಎಚ್. ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆರ್. ಧರ್ಮಸೇನ ಹಾಗೂ ಸಂದೇಶ್ ನಾಗರಾಜ್ ಅವರ ಅಧಿಕಾರವಧಿ ಜ.5 ರವರೆಗೆ ಇದೆ. ಈ ಇಬ್ಬರಿಗೂ ಈ ಬಾರಿ ಆಯಾ ಪಕ್ಷಗಳು ಟಿಕೆಟ್(Election Ticket) ನಿರಾಕರಿಸಿವೆ. ಧರ್ಮಸೇನ ಅನಿವಾರ್ಯವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಬೇಕಾಗುತ್ತದೆ. ಆದರೆ ಸಂದೇಶ್ ನಾಗರಾಜ್ ತಾವು ಜೆಡಿಎಸ್ ಬದಲು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮತ ಕೇಳುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್‌ನ ಮರಿ ತಿಬ್ಬೇಗೌಡ ಎಲ್ಲೂ ಕಾಣಿಸಿಕೊಂಡಿಲ್ಲ. ಕೆ.ಟಿ. ಶ್ರೀಕಂಠೇಗೌಡ‚ ಮಂಡ್ಯಕ್ಕೆ (Mandya) ಸೀಮಿತವಾಗಿದ್ದಾರೆ. ಎಚ್. ವಿಶ್ವನಾಥ್ (H Vishwanath) ಬಿಜೆಪಿ ಪರ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಆರೋಗ್ಯ (Health) ಕಾರಣದಿಂದಾಗಿ ಬಹಿರಂಗವಾಗಿ ಪ್ರಚಾರಕ್ಕೆ ಹೋಗಿಲ್ಲ.
ಇನ್ನೇನು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು (ZP TP Election ) ಬರುವುದರಿಂದ, 2023ರ ಚುನಾವಣೆಗೆ (Assembly Election) ಇವೆಲ್ಲಾ ಬುನಾದಿ ಆಗುವುದರಿಂದ ಎಲ್ಲಾ ಶಾಸಕರಿಗೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.