ಬೆಂಗಳೂರು (ನ.30): ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ವಿಧಾನ ಪರಿಷತ್ ಚುನಾವಣೆಯಲ್ಲಿ(MLC Election) ಕಾಂಗ್ರೆಸ್ ಟಿಕೆಟ್ (Congress Ticket) ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ (ST Somashekar) ಗಂಭೀರ ಆರೋಪ ಮಾಡಿದ್ದು, ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ಮಗಳು ನೀಡಿದ ದೂರಿನಲ್ಲಿ ಏನಿದೆ ಎಂದು ತಿಳಿಸಿದ್ದಾರೆ.
ಮಗಳು ಹಾಕಿದ ಕೇಸಿನಲ್ಲಿ ಏನಿದೆ: 2014 ರ ನವೆಂಬರ್ 6 ರಂದು ಬಾಬುವಿನ (KGF Babu) 16 ವರ್ಷದ ಪುತ್ರಿ ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಳು. ಅದರಲ್ಲಿ ತನ್ನ ಆಂಟಿಯೊಂದಿಗೆ ತಂದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಇದನ್ನು ನೋಡಿದ ನನ್ನನ್ನು ಎಳೆದಾಡಿ ಹಿಂದೆ ನೀಡಿದ್ದ. ಅದಲ್ಲದೆ ಮನೆ ಕೆಲಸದವಳನ್ನು ಅಮ್ಮ ಎನ್ನಬೇಕು. ಕೊಲೆ (Murder) ಮಾಡುತ್ತೇನೆ ಎಂದು ಬೆದರಿಸಿದ್ದ. ಸ್ನಾನ ಮಾಡುವಾಗ ಕೊಠಡಿ ಬಾಗಿಲು ತೆರೆಯುವಂತೆ ಒತ್ತಾಯಿಸುತ್ತಿದ್ದ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿಸಿದ್ದಾಳೆ. ಆಕೆ ಮಾಡಿದ ಆರೋಪಗಳ ಬಗ್ಗೆ ಎಫ್‌ಐಆರ್ (FIR) ಕಾಪಿಯಲ್ಲಿಉಲ್ಲೇಖವಾಗಿದೆ. .
ಸ್ಫೋಟಕ ಆರೋಪ : ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ವಿಧಾನಪರಿಷತ್ ಚುನಾವಣೆಯಲ್ಲಿ(MLC Election) ಕಾಂಗ್ರೆಸ್ ಟಿಕೆಟ್ (Congress Ticket) ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ (ST Somashekar) ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ (Bengaluru City) ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ (MLC Election) ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಾಬು’ ಎಂದೇ (KGF Babu) ಹೆಸರುವಾಸಿಯಾಗಿರುವ ಯೂಸುಫ್ ಷರೀಫ್ (Yusuf Sharif) ವಿರುದ್ಧ ಸ್ಫೋಟಕ ಆರೋಪವನ್ನ ಮಾಡಿದರು.
ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಡಿಸೆಂಬರ್ 2 ಅಥವಾ 3 ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಾನು ಹೇಳಿರುವುದು ಯಾವುದು ಸುಳ್ಳಲ್ಲ, ಎಲ್ಲಾ ನಿಜ. ಡೆವಲಪರ್ಸ್ ಯಾರು ಎಷ್ಟು ರೂಪಾಯಿ ಕೊಟ್ಟಿದ್ದಾರೆ ಎಂದು ನಮ್ಮ ಬಳಿ ಸಾಕ್ಷ್ಯಗಳಿದೆ. ಆತ 1,700 ಕೋಟಿಯನ್ನು ಡಿಕ್ಲೇರ್ ಮಾಡಿದ್ದಾನೆ. ಡಿಸಿಪಿಗೆ ಫೋನ್ ಮಾಡಿ ಅವನ ಹಿನ್ನೆಲೆಯನ್ನು ತೆಗೆದುಕೊಂಡಿದ್ದೇನೆ. 1,700 ಕೋಟಿ ಅಫಿಶಿಯಲ್ ಆಗಿ ತೋರಿಸಿದ್ದಾನೆ, ಅದರ ಎರಡರಷ್ಟು ಇದೆ ಎಂದು ವಿವರಿಸಿದರು.
ಆತನ ಮೇಲೆ 40 ಕೇಸ್‍ಗಳಷ್ಟು ಎಫ್‍ಐಆರ್ ಇದೆ. 5 ಕೋಟಿಯಿಂದ 60 ಕೋಟಿವರೆಗೂ ಆತ ಫ್ರಾಡ್ ಮಾಡಿದ್ದಾನೆ. ಅವನನ್ನು 3 ತಿಂಗಳು ಗಡಿಪಾರು ಮಾಡಿ, ಜೈಲಿನಲ್ಲೂ ಇಟ್ಟಿದ್ದೇವು ಎಂದು ಡಿಸಿಪಿ ಹೇಳಿದ್ದಾರೆ. ಇಂತಹವನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದೆ. ಈ ಕೇಸ್‍ಗಳನ್ನು ನೋಡಿ ನನಗೆ ಗಾಬರಿಯಾಗಿದೆ ಎಂದು ಎಂದರು