ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ

By Govindaraj S  |  First Published Mar 17, 2023, 12:30 AM IST

ಬಳ್ಳಾರಿ ಗ್ರಾಮಾಂತರದಿಂದ ಶ್ರೀ ರಾಮುಲು ಘೋಷಣೆ ಮಾಡಿದ್ದಾರೆ, ಸಂಡೂರಿನಲ್ಲಿ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಸಂಡೂರಿನಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದರು. 


ದಾವಣಗೆರೆ (ಮಾ.17): ಬಳ್ಳಾರಿ ಗ್ರಾಮಾಂತರದಿಂದ ಶ್ರೀರಾಮುಲು ಘೋಷಣೆ ಮಾಡಿದ್ದಾರೆ, ಸಂಡೂರಿನಲ್ಲಿ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಸಂಡೂರಿನಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದರು. ಇದೀಗ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ಶ್ರೀ ರಾಮುಲು ಸ್ಪರ್ಧೆ ಮಾಡುವುದಾಗಿ ಹೇಳಿರುವುದು ನನಗೆ ಮತ್ತಷ್ಟು ಆನೆ ಬಲ ಬಂದಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಸಂತಸ ವ್ಯಕ್ತಪಡಿಸಿದರು. 

ದಾವಣಗೆರೆಯಲ್ಲಿ ನಡೆಯುವ ಮೋದಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾತನಾಡಿದ ಅವರು ಬಳ್ಳಾರಿ ಅಖಂಡ ಜಿಲ್ಲೆಯಲ್ಲಿ ಹತ್ತಕ್ಕೂ ಹತ್ತು ಸ್ಥಾನ ಗೆಲುತ್ತೇವೆ, ಬಳ್ಳಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿದೆ, ಆ ಕ್ಷೇತ್ರಗಳ ಮತದಾರರು, ಅಭಿಮಾನಿಗಳು ನಮ್ಮೊಂದಿಗೆ ಇದ್ದಾರೆ, ಈ ಬಾರಿಯೂ ಉತ್ತಮ ವಾತಾವಣವಿದೆ ಹೀಗಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ, ಸಹೋದರ ಜನಾರ್ದನ್ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಬಿಜೆಪಿ ಪಕ್ಷಕ್ಕೆ ಹಿನ್ನೆಡೆಯಾಗಲ್ಲ.

Tap to resize

Latest Videos

ಸರ್ಕಾರಿ ವೈದ್ಯೆಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು?: ವೈದ್ಯೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೂ, ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ಹೊಸ ಪಕ್ಷಗಳು ಅಷ್ಟು ಬೇಗ ಬೆಳವಣೆಗೆಯಾಗಿದ್ದು ಇತಿಹಾಸ ಇಲ್ಲ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಜನಾರ್ಧನ ರೆಡ್ಡಿ ಹೆಂಡತಿ ಸ್ಪರ್ಧಿಸುವುದರಿಂದ ನನಗೆ ತೊಂದರೆ ಇಲ್ಲ, ಸ್ವಾತಂತ್ರ್ಯ ಬಂದ ಬಳಿಕ ಪ್ರಥಮ ಬಾರಿಗೆ  14 ರಿಂದ 16 ಸಾವಿರ ಪಟ್ಟಾಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದ್ದೇನೆ, ನನ್ನ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ ಹೊರತು, ಕೆಕೆರ್ಪಿ ಅಲ್ಲ: ‘ಜನಾರ್ದನ ರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಕೆಆರ್‌ಪಿ) ಅಭ್ಯರ್ಥಿ ನನ್ನ ಎದುರಾಳಿಯಲ್ಲ. ನನಗೆ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಹೊರತು, ಕೆಕೆಆರ್‌ಪಿ ಅಲ್ಲ’ ಎಂದು ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಪಿ ಅಭ್ಯರ್ಥಿ ನನಗೆ ಲೆಕ್ಕವೇ ಅಲ್ಲ. ನಾನು ಮಾಡಿರುವ ಕೆಲಸವನ್ನಿಟ್ಟುಕೊಂಡು ಜನರ ಬಳಿ ಹೋಗುತ್ತೇನೆಯೇ ಹೊರತು, ಮತದಾರರಿಗೆ ಆಮಿಷವೊಡ್ಡುವ ಕೆಲಸ ಮಾಡುವುದಿಲ್ಲ ಎಂದರು. 

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಜನಾರ್ದನ ರೆಡ್ಡಿಯ ಪತ್ನಿ ಚುನಾವಣೆ ಸ್ಪರ್ಧೆಯಿಂದ ಶಾಸಕ ಸೋಮಶೇಖರ ರೆಡ್ಡಿಗೆ ನಿದ್ರೆ ಬರುತ್ತಿಲ್ಲ. ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕೆಕೆಆರ್‌ಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರೆಡ್ಡಿ, ನಾನೆಂದೂ ನಿದ್ರೆ ಮಾತ್ರೆ ತೆಗೆದುಕೊಂಡಿಲ್ಲ. ಮಲಗಿದ ಎರಡನೇ ನಿಮಿಷಕ್ಕೆ ನಿದ್ರೆಗೆ ಜಾರುತ್ತೇನೆ ಎಂದರು. ಕೆಕೆಆರ್‌ಪಿಗೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ. ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಿದೇವು. ಆದರೆ, ಅವರು ಸ್ವಂತ ಪಕ್ಷ ಸ್ಥಾಪಿಸುವ ನಿರ್ಧರಿಸಿದರು. ನನ್ನ ಎದುರು ನನ್ನ ತಮ್ಮನ ಪತ್ನಿಯೇ ಚುನಾವಣೆಗೆ ನಿಂತಿದ್ದಾರೆ. ಸಂಕಷ್ಟ ವೇಳೆ ಎಷ್ಟೇ ಸಹಾಯ ಮಾಡಿದರೂ ರಾಜಕೀಯದ ಮುಂದೆ ಎಲ್ಲವೂ ಗೌಣ ಎನ್ನುವಂತಾಗಿದೆ ಎಂದು ಹರಿಹಾಯ್ದರು.

click me!