ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡೋ ಎನ್ನುತ್ತಾರೆ ವಿದೇಶದಲ್ಲಿ ತೊಡೋ ಎನ್ನುವ ಕೆಲಸ ಮಾಡ್ತಾರೆ. ಮಕ್ಕಳಂತೆ ಅಲ್ಲೊಂದು ಇಲ್ಲೊಂದು ಮಾತನಾಡೋ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯನಗರ (ಮಾ.16): ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡೋ ಎನ್ನುತ್ತಾರೆ ವಿದೇಶದಲ್ಲಿ ತೊಡೋ ಎನ್ನುವ ಕೆಲಸ ಮಾಡ್ತಾರೆ. ಮಕ್ಕಳಂತೆ ಅಲ್ಲೊಂದು ಇಲ್ಲೊಂದು ಮಾತನಾಡೋ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಸುವರ್ಣ ನ್ಯೂಸ್ ಜೊತೆಗೆ ಅವರು ಮಾತನಾಡಿದರು.
undefined
ಮಾನಸಿಕವಾಗಿ ರಾಹುಲ್ ಅಸ್ವಸ್ಥರಾಗಿದ್ದಾರೆ ಮಕ್ಕಳಂತೆ ವರ್ತನೆ ಮಾಡ್ತಾರೆ. ಅಪರಿಪಕ್ವ ರಾಜಕಾರಣಿಯಾಗಿರೋ ರಾಹುಲ್ ಗಾಂಧಿ ದೇಶದಲ್ಲಿ ಮಾತನಾಡೋಲ್ಲ. ಸಂಸತ್‌ನಲ್ಲಿ ಮಾತನಾಡೋದಿಲ್ಲ. ವಿದೇಶದಲ್ಲಿ ಹೋಗಿ ಏನೇನೋ ಮಾತನಾಡ್ತಾರೆ. ಇದು ಒಳ್ಳೆಯ ಲಕ್ಷಣ ಅಲ್ಲ. ವಿದೇಶದಲ್ಲಿ ದೇಶದ ವಿರುದ್ಧ ಮಾತನಾಡೋದು ದೇಶವನ್ನು ಅವಮಾನ ಮಾಡಿದಂತೆ ಎಂದರ. ಅಲ್ಲದೇ ಮನಮೋಹನ ಸಿಂಗ್ ಪ್ರಧಾನಿ ಇದ್ದಾಗ ನಾನು ಕೂಡ ವಿದೇಶಕ್ಕೆ ಹೋಗಿದ್ದೇ ಅದ್ರೇ ದೇಶದ ಮರ್ಯಾದೆ ಕಳೆಯೋ ರೀತಿಯಲ್ಲಿ ಪ್ರಧಾನಿ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ. ಆ ರೀತಿಯ ಪರಿಸ್ಥಿತಿ ಬಂದರೂ ಮನಮೋಹನ ಸಿಂಗ್ ನಮ್ಮ ಪ್ರಧಾನಿ ಎನ್ನುವ ಗೌರವದಿಂದಲೇ ಮಾತನಾಡಿದೆ ಎಂದರು.
ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ದೇಶಕ್ಕೆ ಬಂದಿಲ್ಲ: ಸಿ.ಟಿ.ರವಿ
ರಾಹುಲ್ ನಿಜವಾದ ಭಾರತೀಯರೇ?: ರಾಹುಲ್ ಗಾಂಧಿಯವರ ಇತ್ತೀಚಿನ ವರ್ತನೆ ಮತ್ತು ಅವರ ಮಾತುಗಳನ್ನು ನೋಡಿದ್ರೇ ರಾಹುಲ್ ಗಾಂಧಿ ನಿಜವಾದ ಭಾರತೀಯರೇ..? ಎನ್ನುವ ಅನುಮಾನವಿದೆ. ಸಂಸತ್ ಮತ್ತು ಸಂವಿಧಾನ ಅಪಮಾನ ಮಾಡುವ ರಾಹುಲ್ ಗಾಂಧಿ ಯವರು ಮೋದಿ ಮಾತ್ರವಲ್ಲ ದೇಶದ ಜನರ ಮರ್ಯಾದೆ ಕಳೆಯುತ್ತಾರೆ. ಹೀಗಾಗಿ ಇದೆಲ್ಲವನ್ನೂ ನೋಡ್ತಿದ್ರೇ ಕಾಂಗ್ರೆಸ್ ಪರಿಸ್ಥಿತಿ ದಯನೀಯವಾಗಿದೆ ಎಂದು ಅನಿಸುತ್ತದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ: ಈಗಾಗಲೇ ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಬಿಜೆಪಿ ವಿಜಯ ಸಾಧಿಸಿದೆ ದಕ್ಷಿಣ ಭಾಗದ ಕರ್ನಾಟಕದ ದಾಖಲೆ ಸ್ವರೂಪದಲ್ಲಿ ಗೆಲ್ತೇವೆ. ಮೋದಿ ಜನರ ಮನಸ್ಸಿನಲ್ಲಿದ್ದಾರೆ ದೇವರ ಸ್ವರೂಪದಲ್ಲಿ ಜನರ ಮನಸ್ಸಿಲ್ಲಿ ಸದಾ ಇರುತ್ತಾರೆ ಯಡಿಯೂರಪ್ಪ ಜೀವನವೀಡಿ ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ದುಡಿದಿದ್ದಾರೆ. ಅವರ ಪ್ರಶ್ನಾತೀತ ನಾಯಕ ಮೋದಿ ಮತ್ತು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮಾಡ್ತೇವೆ ಮತ್ತು ಗೆಲ್ತೇವೆ ಎಂದರು.
ಮೋದಿ ಸಾವು ಬಯಸುವ ನಾಯಕರು ದೇಶದಲ್ಲಿ ಇರೋದು ದುರಂತ: ಮಧ್ಯಪ್ರದೇಶ ಒಬ್ಬ ನಾಯಕ ಮೋದಿ ಹತ್ಯೆ ಮಾಡಬೇಕೆಂದರು. ರಾಜಕೀಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ಮತ್ತು ಮಹಾನ್ ಸಾಧಕನ ಸಾವನ್ನು ಬಯಸುವವರು ಇದ್ದಾರೆ ಎನ್ನುವದು ನಿಜಕ್ಕೂ ಬೇಸರದ ಸಂಗತಿ. ಅಲ್ಲದೇ ಮೋದಿ ಸಾವನ್ನು ಬಯಸುವ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದರು. ಇನ್ನೂ ಕೇವಲ ನಾಮಕೆ ವಾಸ್ತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಮಾಡಲಾಗಿದೆ. ಖರ್ಗೆ ಕೇವಲ ಕಾಂಗ್ರೆಸ್ ಮುಖವಾಡ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಶತಸಿದ್ಧ: ಜಗದೀಶ್ ಶೆಟ್ಟರ್
ಕಾಂಗ್ರೆಸ್‌ನಲ್ಲಿ ಎಲ್ಲವೂ ಸೋನಿಯಾ ಗಾಂಧಿ ರಾಹುಲ್ ಗಾಂಧಿ ನಿರ್ಣಯವೇ ಅಂತಿಮವಾಗಿದೆ. ಖರ್ಗೆ ಅವರ ಅಪಮಾನ ಮಾಡ್ತಾರೆ. ಮೊನ್ನೆ ನಡೆದ ಕಾರ್ಯಕ್ರಮ ಒಂದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಿಸಿಲಲ್ಲಿ ನಿಂತಿದ್ರು. ಆದ್ರೇ ವಯಸ್ಸಾದ ವ್ಯಕ್ತಿ ಅನ್ನೋದನ್ನು ನೋಡದೇ ಸೋನಿಯಾ ಹಾಗೂ ರಾಹುಲ್‌ಗೆ ಮಾತ್ರ ಛತ್ರಿ ಹಿಡಿದರು. ಖರ್ಗೆಗೆ ಛತ್ರಿ ಹಿಡಿಯಲಿಲ್ಲ. ಇದು ಅವರಿಗೆ ಮಾತ್ರವಲ್ಲ ಇಡೀ ಕರ್ನಾಟಕ ಜನರಿಗೆ ಮಾಡಿದ ಅವಮಾನ ಎಂದರು.