ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್

By Govindaraj S  |  First Published Aug 17, 2023, 8:27 PM IST

ನನಗೆ ಮತ್ತೆ ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ. ಕ್ಷೇತ್ರದ ಜನರು ಹಾಗೂ ಪ್ರಮುಖರ ಜತೆ ಚರ್ಚಿಸದೇ ನಾನು ಯಾವುದೇ ನಿರ್ಣಯ ಕೈಗೊಳ್ಳಲ್ಲ. ಈ ಸಂಬಂಧ ಊಹಾಪೋಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. 


ಉತ್ತರ ಕನ್ನಡ (ಆ.17): ನನಗೆ ಮತ್ತೆ ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ. ಕ್ಷೇತ್ರದ ಜನರು ಹಾಗೂ ಪ್ರಮುಖರ ಜತೆ ಚರ್ಚಿಸದೇ ನಾನು ಯಾವುದೇ ನಿರ್ಣಯ ಕೈಗೊಳ್ಳಲ್ಲ. ಈ ಸಂಬಂಧ ಊಹಾಪೋಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. 

ಬಾಂಬೆ ಟೀಂ ಮತ್ತೆ ಕಾಂಗ್ರೆಸ್‌ಗೆ ತೆರಳುತ್ತದೆ ಎಂಬ ವಿಚಾರಕ್ಕೆ ಶಿರಸಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾರ್, ಈ ಹಿಂದೆ ಬಿಜೆಪಿ ಸೇರಿದ ಶಾಸಕರು ಪುನಃ ಕಾಂಗ್ರೆಸ್‌ಗೆ ತೆರಳುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ.  ಮಾಧ್ಯಮದಲ್ಲಿ ಯಾಕೆ ಹೀಗೆ ಬಂದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.‌ ನಾನು ಈ ಸಂಬಂಧ ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ- ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. 

Tap to resize

Latest Videos

undefined

ಆದರೂ ಈ ವಿಷಯ ಪ್ರಸ್ತಾಪವಾಗಿದೆ. ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರನ್ನು ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ಅಂತಿಮವಾಗಿ ಅವರೇ ನಮ್ಮ ಹಣೆಬರಹ ಬರೆಯುತ್ತಾರೆ. ಅದು ಆವತ್ತಿರಬಹುದು, ಇವತ್ತು ಅಥವಾ ಮುಂದೆಯೂ ಅವರೇ ನಿರ್ಣಯಿಸುತ್ತಾರೆ. ಪ್ರಮುಖವಾದ ಯಾವುದೇ ನಿರ್ಣಯವನ್ನು ನಮ್ಮ ಕ್ಷೇತ್ರದಲ್ಲಿನ ಮುಖಂಡರೊಂದಿಗೆ ಚರ್ಚಿಸದೇ ಮಾಡಲು ಆಗುವುದಿಲ್ಲ ಎಂದು ಹೆಬ್ಬಾರ್ ಹೇಳಿದರು.‌ ಇನ್ನು ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ಹೊಸದಾಗಿ 21 ಶಾಖೆಗಳನ್ನು ಪ್ರಾರಂಭಿಸಲಿದೆ.

ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ: ರಾಜ್ಯದಲ್ಲೇ ನಂಬರ್ 1 ಕುಖ್ಯಾತಿ ಪಡೆಯುತ್ತಾ ಚಿಕ್ಕಮಗಳೂರು!

ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಹೊಸದಾಗಿ 21 ಶಾಖೆಗಳನ್ನು ಪ್ರಾರಂಭಮಾಡುತ್ತಿದ್ದೇವೆ ಎಂದು ಶಾಸಕ ಶಿವರಾಮ‌ ಹೆಬ್ಬಾರ್ ಹೇಳಿದರು.‌ ಮಳೆಯ ಅಭಾವದಿಂದ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆಯಾಗುವ ಲಕ್ಷಣಗಳು ಕಾಣುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ಕ್ಷೇತ್ರಕ್ಕೆ ತಲಾ 1ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ರೈತರು ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೇ ಒಣಗುತ್ತಿದೆ. ಸರ್ಕಾರ ತಡಮಾಡದೆ ಈ ಕುರಿತು ಗಮನ ಹರಿಸಬೇಕು. ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

click me!