ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್

Published : Aug 17, 2023, 08:02 PM IST
ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್

ಸಾರಾಂಶ

ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿದು ಹೋಗುತ್ತೆ. ಬಿಜೆಪಿಯ ಬೆದರಿಕೆಗೆ ನಾವು ಬೆದರುವ ವಂಶಸ್ಥರಲ್ಲ. ಕಾಂಗ್ರೆಸ್ ವಂಶಸ್ಥರು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್, ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.17): ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿದು ಹೋಗುತ್ತೆ. ಬಿಜೆಪಿಯ ಬೆದರಿಕೆಗೆ ನಾವು ಬೆದರುವ ವಂಶಸ್ಥರಲ್ಲ. ಕಾಂಗ್ರೆಸ್ ವಂಶಸ್ಥರು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್, ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, 2020ರಲ್ಲಿ ನಾನು ಸಿ.ಟಿ.ರವಿ ಎಲ್ಲೆಲ್ಲಿ, ಯಾರ್ಯಾರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದೆ. 

ಸತ್ಯಹರಿಶ್ಚಂದ್ರನ ರೀತಿ ಮಾತನಾಡುವ ನಿಮ್ಮ ಹಿನ್ನೆಲೆ ಏನೆಂದು ಕೇಳಿದ್ದೆ. ಬಿಜೆಪಿ ಸರ್ಕಾರ ರಾಜ್ಯವನ್ನ ಲೂಟಿ ಮಾಡಿದ್ದರೆ, ಸಿ.ಟಿ.ರವಿ ಚಿಕ್ಕಮಗಳೂರನ್ನ ಲೂಟಿ ಮಾಡಿದ್ದರು. ಜನ ನಿಮ್ಮನ್ನ ಲೂಟಿ ರವಿ ಎಂದು ಕರೆಯುತ್ತಿದ್ದಾರೆ ಎಂದಿದ್ದೆ. ಅದಕ್ಕೆ ಅವರು ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಿದ್ದರು. ಇಂದು ನನಗೆ ಚಿಕ್ಕಮಗಳೂರು ಕೋರ್ಟ್‍ನಲ್ಲಿ ಬೇಲ್ ಸಿಕ್ಕಿದೆ. ಸಿ.ಟಿ.ರವಿಯವರೇ ನೀವು, ಬ್ಯುಸಿನೆಸ್‍ಮ್ಯಾನ, ಎಜುಕೇಶನಲಿಸ್ಟಾ, ಇಂಡಸ್ಟ್ರೀಯಲಿಸ್ತಾ, ರಿಯಲ್ ಎಸ್ಟೇಟ್ ಮಾಡ್ತೀರಾ ಅಥವ ನಿಮ್ಮ ತಂದೆ ನಿಮಗೆ ದೊಡ್ಡ ಮಟ್ಟದ ಆಸ್ತಿ ಮಾಡಿಕೊಟ್ಟು ಹೋಗಿದ್ದಾರಾ ಏನೆಂದು ತಿಳಿಸಿ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದೆ. 

ಮಕ್ಕಳಾಗಿಲ್ಲ ಅಂತ ದೇವರ ಮೊರೆ: ಭಕ್ತೆಯ ಜತೆ ಪರಾರಿಯಾಗಿದ್ದ ಪೂಜಾರಿ ತಾತ ಪತ್ತೆ!

ಅದಕ್ಕೆ ಮಾನನಷ್ಟದ ಕೇಸ್ ಹಾಕಿದ್ದರು. ಅವರಷ್ಟೆ ಅಲ್ಲ, ಬಿಜೆಪಿಯ ಇತರೆ ನಾಯಕರು ಬೆಂಗಳೂರು, ಮೈಸೂರಿನಲ್ಲಿ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಆದರೆ, ನಾವು ಬಿಜೆಪಿಯ ಬೆದರಿಕೆಗೆ ಬೆದರುವ ವಂಶದವರಲ್ಲ. ಕಾಂಗ್ರೆಸ್ ವಂಶಸ್ಥರು ಎಂದಿದ್ದಾರೆ. ನನ್ನ ಆರೋಪದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೂ ಮನವಿ ಮಾಡಿ, ನ್ಯಾಯದೀಶರ ಮೂಲಕ ನನ್ನ ಆರೋಪದ ಕುರಿತು ತನಿಖೆ ಮಾಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು. ನನ್ನ ಆರೋಪದ ಬಗ್ಗೆ ಸಿಐಡಿಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ