2024ಕ್ಕೆ ನರೇಂದ್ರ ಮೋದಿಯೇ ಪ್ರಧಾನಿ: ಎಂಟಿಬಿ ನಾಗರಾಜ್‌

By Kannadaprabha News  |  First Published Aug 17, 2023, 7:23 PM IST

ನರೇಂದ್ರ ಮೋದಿ ದೇಶದ ಕಂಡ ಅಪ್ರತಿಮ ನಾಯಕರು. ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟಬಹುಮತ ಪಡೆಯುವುದರ ಮೂಲಕ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. 


ಹೊಸಕೋಟೆ (ಆ.17): ನರೇಂದ್ರ ಮೋದಿ ದೇಶದ ಕಂಡ ಅಪ್ರತಿಮ ನಾಯಕರು. ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟಬಹುಮತ ಪಡೆಯುವುದರ ಮೂಲಕ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಯಾರಿಂದಲೂ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಎಂಎಲ್ಸಿ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ನರೇಂದ್ರ ಮೋದಿ ಎಂಬ ಒಬ್ಬ ವ್ಯಕ್ತಿಯನ್ನು ಹಣಿಯಲು 24 ಪಕ್ಷಗಳು ಒಂದಾಗಿ ಮೂರ್ನಾಲ್ಕು ಸಭೆಗಳನ್ನು ಮಾಡಿವೆ. 

ಈ ಹಿಂದೆ 17 ಪಕ್ಷಗಳು ಒಂದಾಗಿ ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿ ಅವರ ಮೇಲೆ ಕಲ್ಲಿದ್ದಲು ಸೇರಿದಂತೆ ಹಲವಾರು ಹಗರಣಗಳನ್ನು ಹೊರಿಸಿದ್ದರು. ಒಂದು ವೇಳೆ ಇವರ ಕೈಗೆ ಮತ್ತೆ ಅಧಿ​ಕಾರ ಕೊಟ್ಟರೆ ಶ್ರೀಲಂಕಾ ಹಾಗೂ ಪಾಕಿಸ್ಥಾನಕ್ಕೆ ಬಂದ ದುಸ್ಥಿತಿ ಭಾರತಕ್ಕೆ ಬರಲಿದೆ. ಆದರೂ ಕೂಡ ಇವರು ಏನೇ ಮಾಡಿದರು ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ. ಸ್ಪಷ್ಟಬಹುಮತದಿಂದ ನರೇಂದ್ರ ಮೋದಿಯವರು ಪ್ರಧಾನಿ ಆಗಲಿದ್ದಾರೆ. ದೇಶಕ್ಕೆ ಸ್ಥಿರ ಹಾಗೂ ಸುಭದ್ರ ಸರ್ಕಾರ ಮಾಡಲು ಮೋದಿಯವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

Latest Videos

undefined

ಬಸವರಾಜ ಯತ್ನಾಳ್‌ ಹೇಳಿಕೆ ಅಸಂಬದ್ಧ, ನಾವು ಗಟ್ಟಿಯಾಗಿದ್ದೇವೆ: ಸಚಿವ ಈಶ್ವರ ಖಂಡ್ರೆ

ವಿಪಕ್ಷ ನಾಯಕರ ಆಯ್ಕೆ ಶೀಘ್ರ: ಸರ್ಕಾರ ಅ​ಧಿಕಾರಕ್ಕೆ ಬಂದು ಮೂರ್ನಾಲ್ಕು ತಿಂಗಳು ಕಳೆದರೂ ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ಹೈಕಮಾಂಡ್‌ ಈಗಾಗಲೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿದೆ. ಅಧಿ​ಕೃತ ಆದೇಶ ಆಗಬೇಕಿದೆ. ಕೆಲವೇ ದಿನಗಳಲ್ಲಿ ವಿಪಕ್ಷ ನಾಯಕರ ತೀರ್ಮಾನ ಹೊರಬೀಳಲಿದೆ ಎಂದು ಎಂಟಿಬಿ ನಾಗರಾಜ್‌ ತಿಳಿಸಿದರು.

ಗುತ್ತಿಗೆದಾರರ ಬಿಲ್‌ ಪಾವತಿ ಮಾಡಿ: ಗುತ್ತಿಗೆದಾರರು ಕೋಟ್ಯಂತರ ರು. ಹಣ ಸಾಲ ಮಾಡಿ ತಂದು ಮಾಡಿರುವ ಅಭಿವೃದ್ಧಿ ಕಾರ್ಯಗಳ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ಕೆಲಸ ಮಾಡಿದ ಗುತ್ತಿಗೆದಾರರ ಬದುಕು ಮೂರಾಬಟ್ಟೆಯಾಗಿದೆ. ಅವರ ಬದುಕಿನಲ್ಲಿ ಚೆಲ್ಲಾಟವಾಡದೆ ಸರ್ಕಾರ ಕಾಮಗಾರಿ ಪರಿಶೀಲನೆ ನಡೆಸಿ ಬಿಲ್‌ ಪಾವತಿ ಮಾಡಬೇಕು. ಈಗಾಗಲೆ ಅವರು ರಾಜ್ಯಪಾಲರಿಗೂ ದೂರನ್ನು ಸಲ್ಲಿಸಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಕಷ್ಟಅರಿತುಕೊಂಡು ಹಣ ಬಿಡುಗಡೆ ಮಾಡಬೇಕು ಎಂದು ಎಂಟಿಬಿ ನಾಗರಾಜ್‌ ತಿಳಿಸಿದರು.

ಪಕ್ಷ ಸಂಘಟಿಸಿ: ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡುವತ್ತ ಗಮನಹರಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಹೇಳಿದರು. ತಾಲೂಕಿನ ದೊಡ್ಡಹುಲ್ಲೂರು ಹಾಗೂ ಚೊಕ್ಕಹಳ್ಳಿ ಗ್ರಾಪಂಗಳಿಗೆ ಆಯ್ಕೆಯಾಗಿರುವ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಧಿ​ಕಾರದಲ್ಲಿಲ್ಲದಿದ್ದರೂ ಎರಡೂ ಪಂಚಾಯತ್‌ಗಳಲ್ಲಿ ಸದಸ್ಯರು ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸದೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಸೂಚಿಸುವುದರ ಮೂಲಕ ಅಧಿ​ಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದೀರಿ. 

ಮಾಟ ಮಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಾಗಿದೆ: ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ

ಆದ್ದರಿಂದ ಯಾರಿಗೂ ಅ​ಧಿಕಾರ ಶಾಶ್ವತವಲ್ಲ. ಅ​ಧಿಕಾರ ಇದ್ದಾಗ ಆಡಳಿತ ಹೇಗೆ ಮಾಡುತ್ತೇವೆ ಎನ್ನುವುದು ಮುಖ್ಯ. ಸದಸ್ಯರು ಪಕ್ಷಾತೀತವಾಗಿ ಒಮ್ಮತದಿಂದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಬಮುಲ್‌ ನಿರ್ದೇಶಕ ಹುಲ್ಲೂರು ಮಂಜುನಾಥ್‌ ಮಾತನಾಡಿ, ಚೊಕ್ಕಹಳ್ಳಿ ಹಾಗೂ ದೊಡ್ಡಹುಲ್ಲೂರು ಗ್ರಾಪಂಗಳ ಅ​ಧಿಕಾರ ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರಿಗೆ ದೊರೆಯಲು ಬಿಜೆಪಿ ಬೆಂಬಲಿತ ಸದಸ್ಯರು ಪಕ್ಷದ ತತ್ವ ಸಿದ್ಧಾಂತಗಳಿಗೆ ಕಟ್ಟುಬಿದ್ದು ತಮ್ಮ ಸ್ವಾಭಿಮಾನ ಮೆರೆದಿರುವುದೇ ಕಾರಣ ಎಂದರು.

click me!